ನರೇಗಲ್ ರೈತ ಸೇನೆಯಿಂದ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ
ನರೇಗಲ್ ರೈತ ಸೇನೆಯಿಂದ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ
ನರೇಗಲ್ ಪಟ್ಟಣದಲ್ಲಿ ರೈತ ಸೇನೆ ವತಿಯಿಂದ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಭಿಕ್ಷಾಟನೆ ನಡೆಯಿತು,ಬೆಳೆ ಪರಿಹಾರ ವಿತರಣೆಗೆ ಆಗ್ರಹ ಭಿಕ್ಷಾಟನೆ ನಡೆಸಿದ ರೈತ ಸೇನಾ ಕಾರ್ಯಕರ್ತರು ನರೇಗಲ್ಲ: ತಾಲ್ಲೂಕಿನ ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ರೈತ ಸೇನಾ ಕಾರ್ಯಕರ್ತರು ಸೋಮವಾರ ಸಾರ್ವಜನಿಕ ಭಿಕ್ಷಾಟನೆ ನಡೆಸಿ ಪ್ರತಿಭಟಿಸಿದರು. ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಭಿಕ್ಷಾಟನೆ ನಡೆಸಿದ ಕಾರ್ಯಕರ್ತರು ಸಂಗ್ರಹಿಸಿದ ₹241 ಹಣವನ್ನು ವಿಮಾ ಕಂಪನಿಗೆ ನೀಡುತ್ತೇವೆ ಎಂದು ಪಟ್ಟು ಹಿಡಿದರು. ವಿಮಾ ಕಂಪನಿ ಅಧಿಕಾರಿಗಳು ಬಾರದ ಕಾರಣ,ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ಭಿಕ್ಷಾಟನೆ ಹಣ ಪಡೆದು ಕಂಪನಿಗೆ ಮುಟ್ಟಿಸುವುದಾಗಿ ತಿಳಿಸಿದರು.
ರೈತ ಮುಖಂಡ ಶರಣಪ್ಪ ಧರ್ಮಾಯತ್ ಮಾತನಾಡಿ, 'ರೈತರಿಗೆ ಬೆಳೆ ಪರಿಹಾರ ವಿತರಣೆಯಲ್ಲಿ ಬಿಡಿಗಾಸು ಹಾಕುವಾಗ ಇಲ್ಲದ ತಾಂತ್ರಿಕ ಸಮಸ್ಯೆ ಪೂರ್ಣ ಹಣ ಜಮೆ ಮಾಡುವಾಗ ಏಕೆ ಬರುತ್ತದೆ' ಎಂದು ಆರೋಪಿಸಿದರು. ಎಫ್‌ಐಡಿ ರೈತರಿಗೆ ಅವಮಾನಿಸಿದ ವಿಮಾ ಕಂಪನಿ' ಹೆಸರು ಬೆಳೆಪರಿಹಾರ ವಿತರಣೆಗೆ ಆಗ್ರಹಿಸಿ ಕಳೆದ ತಿಂಗಳು ನಡೆಸಿದ ಪ್ರತಿಭಟನೆ ವೇಳೆ ಅಧಿಕಾರಿಗಳು ಒಂದುವಾರದಲ್ಲಿ ಬೆಳೆ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದರು.ವಿಮಾ ಕಂಪನಿ ಕೆಲವು ರೈತರಿಗೆ ₹100-200 ಮಾತ್ರ ಪರಿಹಾರ ಜಮೆ ಮಾಡಿರುವುದು ಹೇಗೆ?ಯಾವ ಮಾನದಂಡದ ಮೇಲೆ ಪರಿಹಾರ ವಿತರಿಸಲಾಗಿದೆ ಎಂದು ಪ್ರಶ್ನಿಸಿದ ಅವರು. ವಿಮಾ ಕಂಪನಿ ಚಿಲ್ಲರೆ ಕಾಸು ನೀಡುವ ಮೂಲಕ ರೈತರನ್ನು ಅವಮಾನಿಸಿದೆ ಎಂದು ರೈತಸೇನಾ ಅಧ್ಯಕ್ಷ ಆನಂದ ಕೊಟಗಿ ಆರೋಪಿಸಿದರು.
ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಮಾತನಾಡಿ, 'ಬೆಳೆ ಹಾನಿ ವಿತರಣೆಗೆ ವಿವಿಧ ಇಲಾಖೆ ವತಿಯಿಂದ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿ ವಿತರಿಸಲಾಗಿದೆ.
ಹಾಗೂ ಜಿಪಿಎಸ್ ಆಗದ ರೈತರಿಗೆ ವಿಮೆ ಹಣ ವಿತರಣೆಯಲ್ಲಿ ವಿಳಂಬವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಭರವಸೆ ನೀಡಿದರು.
ಚಂದ್ರು ಹೊನವಾಡ, ಬಾಳಪ್ಪ ಸೊಮಗೊಂಡ. ಶ್ರೀಕಾಂತ ಹೊಸಮನಿ, ಶರಣಪ್ಪ ಗಂಗರಗೊಂಡ, ರುದ್ರೇಶ
ಕೊಟಗಿ, ಮಲ್ಲನಗೌಡ ಪಾಟೀಲ, ಮಂಜುನಾಥ ಪಾಯಪ್ಪಗೌಡ್ರ, ವಿರುಪಾಕ್ಷಪ್ಪ ಲಕ್ಕನಗೌಡ್ರ, ಕಳಕಪ್ಪ ಮುಗಳಿ, ಪ್ರಕಾಶ ಪಿಡಗೊಂಡ, ಶೇಖಪ್ಪ ಲಕ್ಕನಗೌಡ್ರ, ಮಂಜುನಾಥ ಕಮಲಾಪೂರ, ಅರುಣ ಜುಟ್ಟದ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಕಳಕಣ್‌ವರ, ಬಸವರಾಜಮಡಿವಾಳರ ಇದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
