ಹೆಸರು, ಉದ್ದು ಖರೀದಿ ಕೇಂದ್ರ ಹರಸೂರ ಗ್ರಾಮದಲ್ಲಿ ಆರಂಭಿಸಲು ಆಗ್ರಹ

ಹೆಸರು, ಉದ್ದು ಖರೀದಿ ಕೇಂದ್ರ ಹರಸೂರ ಗ್ರಾಮದಲ್ಲಿ ಆರಂಭಿಸಲು ಆಗ್ರಹ

ಹೆಸರು, ಉದ್ದು ಖರೀದಿ ಕೇಂದ್ರ ಹರಸೂರ ಗ್ರಾಮದಲ್ಲಿ ಆರಂಭಿಸಲು ಆಗ್ರಹ

ಕಮಲಾಪೂರ: ತಾಲೂಕಿನ ಹರಸಿಉರ ಗ್ರಾಮದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರ ತಕ್ಷಣವೇ ಪ್ರಾರಂಭಿಸಬೇಕು ಎಂದು ಹೋರಾಟಗಾರ ಆನಂದ ಕಣಸೂರ ಆಗ್ರಹಿಸಿದ್ದಾರೆ.

                      ಈ ವರ್ಷ ಹೆಸರು ಉದ್ದು ರಾಶಿ ಭರದಿಂದ ಸಾಗಿದ್ದು ಜನರು ನೇರವಾಗಿ ಕೇಂದ್ರಗಳಿಗೆ ಹೋಗಿ ಹೆಸರು ಉದ್ದು ಮಾರುತ್ತಾರೆ,ಆದರೆ ಮಾರುಕಟ್ಟೆಯಲ್ಲಿ ಬಹುತೇಕ ಹೆಸರು ಮಾರಾಟವಾಗುತ್ತಿದ್ದರು ಖರೀದಿ ಕೇಂದ್ರ ಆರಂಬಿಸದಿರುವುದು ವಿಷಾದನೀಯ ಸಂಗತಿ ಎಂದರು.

 ಜಿಲ್ಲೆಯಲ್ಲಿ ಹೆಸರು ರಾಶಿ ಕೆಲಸ ಪ್ರಾರಂಭಗೊಂಡು ಎರಡು ವಾರಗಳಾಗುತ್ತ ಬಂದಿದೆ. ಇದುವರೆಗೆ ಯಾರದಿಂದ ಹೆಸರು ಖರೀದಿ ಕೇಂದ್ರ ಆರಂಭಿಸಿಲ್ಲ. ಶೇ ೫೦ರಿಂದ ೬೦ರಷ್ಟು ಹೆಸರು ಮಾರುಕಟ್ಟೆಯಲ್ಲಿ ಸಿಕ್ಕ ಬೆಲೆಗೆ ಮಾರಾಟ ಮಾಡಿದ್ದಾರೆ. ಯಾರದ ಎಂಎಸ್‌ಪಿ ಪ್ರಕಾರ ಪ್ರತಿ ಕ್ವಿಂಟಲ್‌ ಹೆಸರು ₹೮,೬೮೨ಕ್ಕೆ ಮಾರಾಟವಾಗಬೇಕು. ಆದರೆ, ಕ೬ ಸಾವಿರದಿಂದ ₹೬,೫೦೦ಕ್ಕೆ ಮಾರಾಟವಾಗುತ್ತಿದೆ. ಪ್ರತಿ ಕ್ವಿಂಟಲ್‌ಗೆ ₹೨ ಸಾವಿರ ವ್ಯತ್ಯಾಸವಾಗುತ್ತಿದೆ. ರೈತರಿಗೆ ತಕ್ಷಣವೇ ಹಣದ ಅಗತ್ಯ ಇರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ.ಯಾರದಿ೦ದ ಖರೀದಿ ಕೇಂದ್ರ ಆರಂಭಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗೋಳು ತೋಡಿಕೊಂಡರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನರಕ್ಷ್ಯದಿಂದ ಹೀಗಾಗಿದೆ. ಖರೀದಿ ಕೇಂದ್ರ ತೆರೆಯದೇ ಎಂಎಸ್‌ಪಿ ಘೋಷಿಸಿದರೆ ಏನು ಪ್ರಯೋಜನ? ಉದ್ದು ಸೋಯಾ ಪ್ರದೇಶ ಕೂಡ ಹೆಚ್ಚಾಗಿದ್ದು,ನೋಂದಣಿ ಪ್ರಕ್ರಿಯೆ ಆರಂಭಿಸಬೇಕ ಎಂದರು.ಕೆಲವೇ ದಿನಗಳಲ್ಲಿ ಖರೀದಿ ಕೇಂದ್ರವನ್ನು ಹರಸೂರ ಗ್ರಾಮದಲ್ಲಿ ಪ್ರಾರಂಬಿಸದಿದ್ದರೆ ಗ್ರಾಮದ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮದ ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದ್ದಾರೆ.