ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ೧೨ ರಂದು ಪೂರ್ವ ಸಿದ್ದತಾ ಸಭೆ
ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ೧೨ ರಂದು ಪೂರ್ವ ಸಿದ್ದತಾ ಸಭೆ
ಹುಲಸೂರು: ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಶರಣ ಉರಿಲಿಂಗಪೆದ್ದಿ ಉತ್ಸವ,ಲಿಂ.ಪೂಜ್ಯ ಶ್ರೀ ಶಿವ ಲಿಂಗೇಶ್ವರ ಶಿವಯೋಗಿಗಳವರ ೫೬ ನೆಯ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗುವ ಪ್ರಥಮ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ದಿನಾಂಕ: ೧೨-೦೧-೨೦೨೫ ರಂದು ರವಿವಾರ ಮುಂಜಾನೆ ೯-೩೦ ಕ್ಕೆ ಬೇಲೂರು ಮಠದಲ್ಲಿ ಜರುಗುವುದು. ಸಾಹಿತಿ,ಕವಿ,ಕಲಾವಿದರು, ಶಿಕ್ಷಕ- ಉಪನ್ಯಾಸಕರು, ಆಡಳಿತಗಾರರು,ವಿವಿಧ ಇಲಾಖೆಯವರು,ಸರ್ವ ಸದ್ಭಕ್ತರು, ಅಭಿಮಾನಿಗಳು ಬೇಲೂರ ಗ್ರಾಮಸ್ಥರು ಆಗಮಿಸಿ ಸಲಹೆ ಸೂಚನೆ ನೀಡಿ ಪೂರ್ವ ಸಭೆಯಲ್ಲಿ ಚರ್ಚಿಸಲು ಆಹ್ವಾನಿಸಲಾಗಿದೆ.ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿಗಳು ನೇತೃತ್ವದಲ್ಲಿ,ಸಂಯೋಜಕರಾದ ಡಾ.ಗವಿಸಿದ್ಧಪ್ಪ ಪಾಟೀಲರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಶಾಖಾಮಠದ ಮಹಾಲಿಂಗ ದೇವರು ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.