ಶಿಕ್ಷಣ ನೀತಿಯಲ್ಲಿ ಭಾರೀ ಬದಲಾವಣೆ? ದ್ವಿಭಾಷಾ ಸೂತ್ರಕ್ಕೆ ಹಸಿರು ನಿಶಾನೆ!"

ಶಿಕ್ಷಣ ನೀತಿಯಲ್ಲಿ ಭಾರೀ ಬದಲಾವಣೆ? ದ್ವಿಭಾಷಾ ಸೂತ್ರಕ್ಕೆ ಹಸಿರು ನಿಶಾನೆ!"

ಶಿಕ್ಷಣ ನೀತಿಯಲ್ಲಿ ಭಾರೀ ಬದಲಾವಣೆ? ದ್ವಿಭಾಷಾ ಸೂತ್ರಕ್ಕೆ ಹಸಿರು ನಿಶಾನೆ!"

ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್! – ತ್ರಿಭಾಷಾ ಪದ್ಧತಿಗೆ ವಿದಾಯ ಸಾಧ್ಯತೆ

ಬೆಂಗಳೂರು, ಜುಲೈ 17:ರಾಜ್ಯದಲ್ಲಿ ಶೈಕ್ಷಣಿಕ ನೀತಿಯಲ್ಲಿ ಬಹುಚರ್ಚಿತ ಬದಲಾವಣೆ ಸಾಧ್ಯತೆ ಹತ್ತಿರವಾಗಿದೆ. ಮೂರ್ನೆ ಭಾಷೆಯ ಹೊರೆಯಿಂದ ಮುಕ್ತಗೊಳ್ಳಲು ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ನೇತೃತ್ವದಡಿ ನಡೆದ ವಿವಿಧ ಸುಧಾರಣೆಗಳ ಸಾಲಿನಲ್ಲಿ, ಈ ಐತಿಹಾಸಿಕ ಹೆಜ್ಜೆಯೂ ಸೇರಲಿದೆ ಎನ್ನಲಾಗಿದೆ. ಸ್ಟೇಟ್ ಎಜುಕೇಶನ್ ಪಾಲಿಸಿ ಕಮಿಟಿಯು ಕೂಡ ದ್ವಿಭಾಷಾ ಸೂತ್ರಕ್ಕೆ ಪೂರಕವಾಗಿ ವರದಿ ನೀಡಿದ್ದು, ಈಗ ಬಾಕಿ ಉಳಿದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನ ಮಾತ್ರ.

ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್ ಜೊತೆಗೆ ಹಿಂದಿಯನ್ನು ಕಲಿಯುತ್ತಿದ್ದು, ಇದರಿಂದ ಶೈಕ್ಷಣಿಕ ಒತ್ತಡ ಹೆಚ್ಚುತ್ತಿದೆ ಎಂಬ ಚಿಂತೆ ವ್ಯಕ್ತವಾಗಿದೆ. ತಮಿಳುನಾಡು ಹಾಗೂ ಇನ್ನಿತರ ರಾಜ್ಯಗಳಂತೆ ಕೇವಲ ಎರಡು ಭಾಷೆಗಳ ಅಧ್ಯಯನ ಪ್ರಾರಂಭಿಸಿ ವಿದ್ಯಾರ್ಥಿಗಳ ಅಂಕ ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ನಿರ್ಧಾರದಿಂದ  ತೀವ್ರ ರಾಜಕೀಯ ಹಾಗೂ ಜನಜಾಗೃತಿ ಚರ್ಚೆ ನಡೆಯುತ್ತಿದ್ದರೂ, ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಣಯಕ್ಕೆ ಶಿಕ್ಷಣ ಇಲಾಖೆ ಬದ್ಧವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿಭಾಷಾ ಸೂತ್ರ ಜಾರಿಯಾಗುವ ಸಾಧ್ಯತೆ ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.