ಶರಣ್ ರಾಜ್ ಚಪ್ಪರಬಂದಿ ಅವರಿಗೆ ಸನ್ಮಾನ

ಶರಣ್ ರಾಜ್ ಚಪ್ಪರಬಂದಿ ಹಾಗೂ ಶಿವಶರಣಪ್ಪ ಬಡದಾಳ ಅವರಿಗೆ ಸನ್ಮಾನ
ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ಶ್ರೀ ಶರಣ್ ರಾಜ್ ಚಪ್ಪರಬಂದಿ ಅವರನ್ನು ಭಾನುವಾರ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪರಿಷತ್‌ನ ಪ್ರಮುಖರಾದ ಶ್ರೀನಿವಾಸ್ ವಸಂತ್ ಕುಷ್ಟಗಿ, ಸಿದ್ದರಾಮಪ್ಪ ಮಾಸ್ಟರ್, ರೇಣುಕಾಂತ ಕಲಗುರ್ತಿ, ಸೋಮಶೇಖರ್ ಮಾಲಿ ಪಾಟೀಲ್ ತೆಗಲತಿಪ್ಪಿ, ಶಿವರಾಜ್ ಪಾಟೀಲ್ ತೆಗಲತಿಪ್ಪಿ, ನೂರಂದಯ್ಯ ಸ್ವಾಮಿ ಸಲ್ಲಳ್ಳಿ ಹಾಗೂ ಅಮಿತ್ ಚಪ್ಪರಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ, ಚಪ್ಪರಬಂದಿ ಫೌಂಡೇಶನ್ ಮುಖಾಂತರ ಕಲಬುರಗಿಯಲ್ಲಿ ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಶ್ರೀ ಶರಣ್ ರಾಜ್ ಚಪ್ಪರಬಂದಿಯವರು ಹಲವಾರು ಜನಪರ ಕೆಲಸಗಳನ್ನು ಹಮ್ಮಿಕೊಂಡಿರುವ ಬಗ್ಗೆ ಮನೋಭಾವಪೂರ್ವಕವಾಗಿ ಶ್ಲಾಘಿಸಲಾಯಿತು. ಭವಿಷ್ಯದಲ್ಲಿಯೂ ಇಂತಹವೇ ಉತ್ತಮ ಸೇವಾ ಅವಕಾಶಗಳು ಅವರಿಗೆ ಸಿಗಲಿ ಎಂಬ ಹಾರೈಕೆಯನ್ನು ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಶಾಂತಲಿಂಗ ಪಾಟೀಲ್ ಕೋಳ್ಕೂರ್ ಅವರು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲೇ ಅಫಜಲಪುರ ತಾಲೂಕಿನ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಿವಶರಣಪ್ಪ ಬಡದಾಳ ಅವರನ್ನು ನಾಮನಿರ್ದೇಶಿಸಿ, ಶುಭಾಶಯಗಳ ಮಹಾಪೂರವೇ ಹರಿದುಬಂದಿತು.