ಮಹಾನಗರ ಪಾಲಿಕೆಯು, ಪೊಲೀಸರ ನೆರವಿನೊಂದಿಗೆ ಜೇವರ್ಗಿ ಕಾಲೋನಿ ಮತ್ತು ಪಿ.ಎನ್.ಟಿ ಕಾಲೋನಿಯ ಅತಿಕ್ರಮಣ ಕಟ್ಟಡ ಬುಲ್ಡೋಜರ್ ನಿಂದ ತೆರವು .
ಮಹಾನಗರ ಪಾಲಿಕೆಯು, ಪೊಲೀಸರ ನೆರವಿನೊಂದಿಗೆ ಜೇವರ್ಗಿ ಕಾಲೋನಿ ಮತ್ತು ಪಿ.ಎನ್.ಟಿ ಕಾಲೋನಿಯ ಅತಿಕ್ರಮಣ ಕಟ್ಟಡ ಬುಲ್ಡೋಜರ್ ನಿಂದ ತೆರವು
ಇಂದು ಕಲಬುರಗಿಯಲ್ಲಿ ಬೆಳ್ಳಂ ಬೆಳಗ್ಗೆ ಬುಲ್ಡೋಜರ್ ಸದ್ದು ಮಾಡಿದೆ, ಹೌದು ಅತಿಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲಿಕರ ಕಟ್ಟಡವನ್ನು ಮಹಾನಗರ ಪಾಲಿಕೆ ತೆರುವುಗೊಳಿಸಿ
ಕಲಬುರಗಿ ನಗರದ ಜೇವರ್ಗಿ ರಸ್ತೆ, ಪಿಎನ್ಟಿ ಕಾಲೋನಿ ಸೇರಿದಂತೆ ವಿವಿಧೆಡೆ ರಸ್ತೆಯನ್ನ ಅತಿಕ್ರಮಣ ಮಾಡಿಕೊಂಡಿದ್ದ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಕಳೆದ ಅನೇಕ ವರ್ಷಗಳಿಂದ ರಸ್ತೆ ಬದಿ ಫುಟ್ಪಾತ್ ಅತಿಕ್ರಮಣ ಮಾಡಿಕೊಂಡಿದ್ದು, ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುವಂತೆ ನೋಟಿಸ್ ನೀಡಿದ್ದರು ಸಹ ಸುಮ್ಮನಿದ್ದ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.ಜೆಸಿಬಿ ಸಹಾಯದಿಂದ ಕಟ್ಟಡ, ಶೆಡ್ಗಳನ್ನ ತೆರವುಗೊಳಿಸಲಾಗಿದೆ. ಎಂದು ಪಾಲಿಕೆಯವರು ತಿಳಿಸಿದ್ದಾರೆ.