ಕನ್ನಡ ಭಾಷೆ , ಶಾಲೆಗಳ ಉಳಿಸಿ, ಬೆಳಸಿ ಅಭಿಯಾನ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಪ್ರಾರಂಭ.
ಕನ್ನಡ ಭಾಷೆ , ಶಾಲೆಗಳ ಉಳಿಸಿ, ಬೆಳಸಿ ಅಭಿಯಾನ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಪ್ರಾರಂಭ.
ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಸಂಘಟನೆಯಿಂದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಾರಂಭವಾಗಿ 18 ನೇ ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಬಿ ಗದ್ದುಗೆ ತಿಳಿಸಿದ್ದಾರೆ.
ಆಂಗ್ಲ ಭಾಷೆಗಳ ಹಾವಳಿ ಯಿಂದ ಕನ್ನಡ ಭಾಷೆ ಮರೆಯಾಗುತ್ತಿದೆ. ಕನ್ನಡ ಭಾಷೆಯನ್ನು ಬೆಳೆಸಿ ,ಉಳಿಸಲು ಎಲ್ಲರೂ ಪ್ರಯತ್ನ ಕೈಗೂಡಿಸಿದರೆ ಸಾಧ್ಯ ಇದೆ ಎಂದರು.
ಕರವೇ ವತಿಯಿಂದ ಕನ್ನಡ ಭಾಷೆ ಉಳಿಯುವು ಜಾಗ್ರತೆಯಾಗಿ ಹೋರಾಟ ಮಾಡುತ್ತಾ ಬಂದಿದೆ .ಗಡಿ ಭಾಗಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಇನ್ನೂ ಪ್ರೋತ್ಸಾಹಿಸಿ ಭಾಷೆ ಉಳಿವಿಗಾಗಿ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕು.
ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಭಾಷೆ ಕಡೆಗಣಿಸುತ್ತಿದ್ದಾರೆ. ಜಾಹೀರಾತು ವಿಭಾಗ ಮತ್ತು ಕಲಿಕೆ ವಿಷಯಗಳ ಬಗ್ಗೆ ಅನೇಕ ಆರೋಪಗಳನ್ನು ಕೇಳಿಬರುತ್ತವೆ.ಹೀಗಾಗಿ ಈ ವಿಷಯಗಳನ್ನು ಕರವೇ ವತಿಯಿಂದ ಅಭಿಯಾನ ಮಾಡಿ ಜನರಿಂದ ಬಂದ ಸಮಸ್ಯೆಗಳನ್ನು ಅಧಿಕಾರಿಗಳಿಗೆ ,ಜನ ಪ್ರತಿನಿಧಿಗಳಿಗೆ 10 ಸರ್ಕಾರದ ಗಮನಕ್ಕೆ ತರಲಾಗುವುದು.
ಕನ್ನಡ ಭಾಷೆ ಸಮಸ್ಯೆ ಇದ್ದಲ್ಲಿ ಅಥವಾ ಕಂಡಲ್ಲಿ ಫೋಟೋ ಹಾಗೂ ಪತ್ರ ಬರೆಯುವ ಮುಖಾಂತರ ಎಲ್ಲಾ ಕನ್ನಡಿಗರು ಸಹಕರಿಸ ಬೇಕೆಂದು ಶರಣು ಗದ್ದುಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಭಾಗಿಯ ಅಧ್ಯಕ್ಷರಾದ ಅಭಿಷೇಕ ಬಾಲಾಜಿ, ಕ ಕ ಪ್ರದಾನ ಕಾರ್ಯದರ್ಶಿ ಗೋಪಾಲ ನಾಟಿಕರ, ಕ ಕ ಸಂಚಾಲಕ ಮನೋಹರ ಬೀರನೂರ, ಜಿ ಗೌ ಅಧ್ಯಕ್ಷರು ಮಂಜು ಕುಸನೂರ, ನ ಉಪಾಧ್ಯಕ್ಷರು ಶರಣು ಬಿ ದ್ಯಾಮಾ ಉಪಸ್ಥಿತರಿದ್ದರು