ಒಳಾಂಗಣ ಕ್ರೀಡಾಂಗಣಕ್ಕೆ ಉಗ್ರಾಣ ಸ್ಥಳ ಉಪಯೋಗಿಸಿ ಕೊಳ್ಳಲು ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

ಒಳಾಂಗಣ ಕ್ರೀಡಾಂಗಣಕ್ಕೆ ಉಗ್ರಾಣ ಸ್ಥಳ ಉಪಯೋಗಿಸಿ ಕೊಳ್ಳಲು ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

ಒಳಾಂಗಣ ಕ್ರೀಡಾಂಗಣಕ್ಕೆ ಉಗ್ರಾಣ ಸ್ಥಳ ಉಪಯೋಗಿಸಿ ಕೊಳ್ಳಲು ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ 

ಚಿಂಚೋಳಿ : ತಾಲೂಕಿನ ಪೋಲಕಪಳ್ಳಿ ಹತ್ತಿರ ಇರುವ ಕರ್ನಾಟಕ ರಾಜ್ಯ ಉಗ್ರಾಣ (ಗೋದಾಮು ) ಅನ್ನು ಒಳಾಂಗಣ ಕ್ರೀಡಾಂಗಣ ಬಳಕೆ ಮಾಡಿಕೊಳ್ಳಲು ಹವ್ಯಾಸಿ ಕ್ರೀಡಾ ಪ್ರೇಮಿಗಳಿಗೆ ಪ್ರೋತ್ಸಾಹಿಸಲು ಅನುಮತಿಸಬೇಕೆಂದು ಕೋರಿ ತಾಲೂಕ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಚಿಂಚೋಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. 

ಅದರಂತೆ ಅಧ್ಯಕ್ಷರು ಸಲ್ಲಿಸಿದ ಮನವಿಗೆ ಸಕರಾತ್ಮಕ ಸ್ಪಂದನೆ ನೀಡಿ, ಅನುಮತಿಗಾಗಿ ಸಲ್ಲಿಸಿದ ಮನವಿ ಪತ್ರದ ಉಲ್ಲೇಖಿತದೊಂದಿಗೆ ಚಿಂಚೋಳಿ ತಹಸೀಲ್ದಾರರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿಸಲು ಕೋರಿದ್ದಾರೆ. 

ಕಳೆದ ಮೂರು ದಿನದ ಹಿಂದೆ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಹಿನ್ನಲೆಯಲ್ಲಿ 2ಕೋಟಿ ರು ಅನುದಾನದಲ್ಲಿ ನಿರ್ಮಾಣಗೊಂಡ ಪಟ್ಟಣದ ಚಂದಾಪೂರ ಒಳಾಂಗಣ ಕ್ರೀಡಾಂಗಣ ಮೇಲ್ಚಾವಣಿ ಕುಸಿದು ನೆಲಕ್ಕೆ ಉರುಳಿದ ಪರಿಣಾಮ ಉತ್ಸಾಹಿ ಕ್ರೀಡಾ ಪ್ರೇಮಿಗಳಿಗೆ ಒಳ ಕ್ರೀಡಾವರಣ ಸ್ಥಳ ಇಲ್ಲದಂತಾಗಿದ್ದ ಹಿನ್ನಲೆಯಲ್ಲಿ ಹವ್ಯಾಸಿ ಕ್ರೀಡಾ ಪ್ರೇಮಿಗಳಿಗೆ ಸ್ಥಳಾವಕಾಶ ಇಲ್ಲದಂತಾಗಿದ್ದರಿಂದ ಪೋಲಕಪಳ್ಳಿ ಹತ್ತಿರವಿರುವ ಪಾಳು ಬಿದ್ದ ಉಗ್ರಾಣ ಸ್ಥಳ ಉಪಯೋಗ ಮಾಡಿಕೊಳ್ಳಲು ವಕೀಲರ ಸಂಘದ ಅಧ್ಯಕ್ಷರು ಪತ್ರ ಬರೆಯುವ ಮೂಲಕ ಉತ್ಸಾಹಿ ಕ್ರೀಡಾ ಪ್ರೇಮಿಗಳ ನೆರವಿಗೆ ಬಂದಿದ್ದಾರೆ.