ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ..

ದಾವಣಗೆರೆಯಲ್ಲೊಂದು ಸುಂದರ ಗಾಜಿನ ಮನೆ..
ಹಸಿರು ಗಾಜಿನ ಬಳೆಗಳೆ ಸ್ತ್ರೀ ಕುಲದ ಶುಭ ಸ್ವರಗಳೇ ಹೆಣ್ಣು ಮಕ್ಕಳಿಗೆ ಸೀರೆ ,ಹಸಿರು ಬಳೆಗಳು ಅಂದರೆ ತುಂಬಾ ಇಷ್ಟ ಅಲ್ವಾ ಅದಕ್ಕಾಗಿಯೇ ದಾವಣಗೆರೆ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರವಾಸಿಗರ ಆಕರ್ಷಣೀಯ ವೃಕ್ಷ ಪ್ರೀತಿಯ ಜೋತಕವಾಗಿದೆ. ಗಾಜಿನ ಮನೆ ಒಳಗೆ ವೃತ್ತಾಕಾರದಲ್ಲಿ ಬೆಂಚಿನ ಜೋಡಣೆ ಕುಳಿತುಕೊಳ್ಳಲು ಅವಕಾಶವಿದ್ದು ಒಳಗೆ ಹೊರಗು ಗಿಡಗಳು ಅಲ್ಲದೆ ಮನೆಯಂತೆ ಬಾಸ ವಾಗುವ ಕೋಣೆ, ಸೆಲ್ಫಿ ಕಾರ್ನರ್ ರೂ.20 ಇದ್ದು ಚಿಕ್ಕ ಮಕ್ಕಳಿಗೆ ಕಡಿಮೆ ಇದೆ
ಬೇಸಿಗೆ ಕಾಲದಲ್ಲಿ ಬಿಸಿಲಿನ ಕಾವು ಸ್ವಲ್ಪ ಹೆಚ್ಚಾಗಿರುತ್ತದೆ. ಬೆಂಗಳೂರಲ್ಲಿ ಗಾಜಿನ ಮನೆ ಕೇಳಿದ್ದೇವೆ ಹಾಗೆ ಈಗ ಮಡಿಕೇರಿಯಲ್ಲಿ ಗ್ಲಾಸಿನ ಸೇತುವೆ ಇದೆ ಕಲಾಕುಂಜ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆಯಲ್ಲಿ ನಮ್ಮ ಸ್ವರ ಸಿಂಚನ ಕಲಾತಂಡವನ್ನು ಗೌರವಿಸಿ ಸನ್ಮಾನಿಸಿದ ಸುಸಂದರ್ಭ ಇದನ್ನು ನೋಡುವ ಅವಕಾಶ ನಮಗೆಲ್ಲರಿಗೂ ಬಂತು ಇಲ್ಲೇ ಸನಿಹದಲ್ಲಿ ಈ ಗಾಜಿನ ಮನೆ ಇದ್ದು ಅದಕ್ಕೊಂದು ಭೇಟಿ ನೀಡಿದಾಗ ಕಂಡ ದೃಶ್ಯ ಸುಂದರ ಕಂಡ ಸುಂದರ ದೃಶ್ಯ
ಸುಂದರ ದೃಶ್ಯ ಹೊಸ ಲೋಕ ತೆರೆದಿಟ್ಟ ಗ್ಲಾಸ್ ಹೌಸ್ ಅಲ್ಲೊಂದು ಸುಂದರ ತೋಟವಿದೆ ಅದರಲ್ಲಿ ನೂರಾರು ಹೂ ಗಿಡಗಳ ಮರಗಳ ಸುಂದರ ನೋಟವಿದೆ ಇನ್ನು ಏನೇನು ಬೇಕಾಗಿದೆ ಅಲ್ಲದೆ ನಾವು ಮೊದಲು ಕನ್ನಡಿ ಬಳೆಗಳ ಬಗ್ಗೆ ಎಷ್ಟೇ ಕೇಳಿದ್ದೇವೆ ನೋಡಿದ್ದೇವೆ .
ಇದೀಗ ಅಲ್ಲಲ್ಲಿ ದೊಡ್ಡ ದೊಡ್ಡ ಮನೆಗಳೆ ನಿರ್ಮಾಣವಾಗುತ್ತಿದೆ ಕೆಲವಷ್ಟೇ ನಮ್ಮ ಗಮನಕ್ಕೆ ಬರುತ್ತವೆ ಇನ್ನು ಕೆಲವು ದೇಶ ವಿದೇಶ ಸಿನಿಮಾ ಧಾರಾವಾಹಿ ಗಳಲ್ಲಷ್ಟೇ ಕಾಣಬಹುದು.
ಹಸಿರು ಪರಿಸರದಿ ತುಂಬ ಚೆಲುವು ತುಂಬಿಕೊಂಡು ನೋಡೋ ನೋಟದಲ್ಲಿ ಗಂಭೀರತೆ ಸೇರಿಕೊಂಡು ಮಳೆಗಾಲದ ನಾಸು ತಂಪಿನಲ್ಲಿ ಪ್ರಕೃತಿಯ ಸುಂದರ ರಮಣೀಯ ತಾಣದಲ್ಲಿ ನಿನಗುಂಟೆ ಇದರ ಕಲ್ಪನೆ..? ಈ ಪ್ರಪಂಚ ಎಷ್ಟು ವಿಚಿತ್ರವಾಗಿದೆ ಎಂದರೆ ಮುನಿಸು ತರವೇ ಮುಗುದೆ ಹಿತವಾಗಿ ನಗಲು ಬಾರದೆ ಇಲ್ಲಿ ಹಳೆಯ ಹಾಡುಗಳನ್ನು ಹಾಡುವುದು ಮತ್ತು ಕೇಳುವುದೇ ಚೆoದ ಅಲ್ವಾ ಏನಂತೀರಾ...!
ತೆರೆದಿದೆ ಮನವು ಬಾ ಅತಿಥಿ ಹೊಸ ಬೆಳಕಿನ ಹೊಸ ಗಾಳಿಯ ಹೊಸ ಗಾನದ ಹೊಸ ಬಾಳ ಬಾಳನು ತಾ ಅತಿಥಿ ಎಷ್ಟು ಸುಂದರವಾದ ಹಾಡು.
ಚಿತ್ರ : ನಂದನ್ ಕುಮಾರ್ ಪೆರ್ನಾಜೆ
ಬರಹ : ಕುಮಾರ್ ಪೆರ್ನಾಜೆ ಪುತ್ತೂರು ,ಪೆರ್ನಾಜೆ ಮನೆ ಮತ್ತು ಪೋಸ್ಟ್ ವಯ ಕಾವು ಪುತ್ತೂರು ತಾಲೂಕು ದ.ಕ 574223