ಇಂದು ಸಂಜೆ 6:30ಕ್ಕೆ "ಬಸವ ಜ್ಯೋತಿ ಕಾರ್ಯಕ್ರಮ"

ಇಂದು ಸಂಜೆ 6:30ಕ್ಕೆ "ಬಸವ ಜ್ಯೋತಿ ಕಾರ್ಯಕ್ರಮ"
ಕಲಬುರಗಿ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ (ರಿ.)ಯಿಂದ ಇಂದು (ಜುಲೈ 13, ಶನಿವಾರ) ಸಂಜೆ 6.30ಕ್ಕೆ ನಗರದ ಮಾಕಾ ಲೇಔಟ್ ನಲ್ಲಿನ ಬಸವ ಮಂಟಪದ ಸ್ಥಳದಲ್ಲಿ “ಬಸವ ಜ್ಯೋತಿ ಕಾರ್ಯಕ್ರಮ” ಆಯೋಜಿಸಲಾಗಿದೆ.
ಧರ್ಮಗುರು ಬಸವಣ್ಣ ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಧ್ವಜಾರೋಹಣ ಕಾರ್ಯವನ್ನು ಶರಣ ಡಾ. ಸುರೇಶ್ ಸಜ್ಜನ್ (ಉಪಾಧ್ಯಕ್ಷರು, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್) ನೆರವೇರಿಸಲಿದ್ದಾರೆ.
ವಚನಗಳಲ್ಲಿ ಆರೋಗ್ಯದ ಮಹತ್ವ ಕುರಿತು ಶರಣ ಸಂತೋಷ್ ಹೂಗಾರ (ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಫರತಹಬಾದ್) ಅನುಭಾವ ವಿನಿಯೋಗಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಶಿವಾನಂದ್ ಹರವಾಳ,ಶಿವಶರಣಪ್ಪ ದೇಗಾಂವ,ಸುಶೀಲಾಬಾಯಿ ಹರಗಿ,ಗೌತಮಿ ಪಾಟೀಲ (ಹಾಲಗಡಲಾ) ಸೇರಿದಂತೆ ಅನೇಕ ಗಣ್ಯರು ಗೌರವ ಉಪಸ್ಥಿತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ಸಂಗನಗೌಡ ಪಾಟೀಲ ಇಂಗಳಗಿ ಅವರು ಭಕ್ತರಿಗೆ ಅನ್ನದಾಸೋಹದ ಸೇವೆ ಸಲ್ಲಿಸಲಿದ್ದಾರೆ.
ಸಮಿತಿಯವರು ಎಲ್ಲ ಭಕ್ತರು ಹಾಗೂ ನಾಗರಿಕರನ್ನು ಭಕ್ತಿಭಾವದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಆಹ್ವಾನಿಸಿದ್ದಾರೆ.