ಗೌರವ ಡಾಕ್ಟರೇಟ್ ನನ್ನ ಜವಾಬ್ದಾರಿ ಹೆಚ್ಚಿಸಿದೆ - ಹೊನ್ಕಲ್

ಗೌರವ ಡಾಕ್ಟರೇಟ್ ನನ್ನ ಜವಾಬ್ದಾರಿ ಹೆಚ್ಚಿಸಿದೆ - ಹೊನ್ಕಲ್

ಗೌರವ ಡಾಕ್ಟರೇಟ್ ನನ್ನ ಜವಾಬ್ದಾರಿ ಹೆಚ್ಚಿಸಿದೆ - ಹೊನ್ಕಲ್

ಶಹಪುರ : ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು,ಜನಪದ ಜೀವನ ಶೈಲಿಯ ಒಟ್ಟು ನನ್ನ ಸಮಗ್ರ ಸಾಹಿತ್ಯಕ್ಕೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ನನ್ನ ಜವಾಬ್ದಾರಿಗಳು ಹೆಚ್ಚಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಕಥೆಗಾರರಾದ ಸಿದ್ದರಾಮ ಹೊನಕಲ್ ಹೇಳಿದರು.

ಪಟ್ಟಣದ ಲಕ್ಷ್ಮಿ ನಗರದ ಕಾವ್ಯಾಲಯದಲ್ಲಿ ಇಂದು ಸಮಾನಮನಸ್ಕರು ಹಾಗೂ ಸಾಹಿತ್ಯ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು,ಇದು ನನಗೆ ಸಿಕ್ಕ ಗೌರವ ಅಲ್ಲ ಇಡೀ ಜಿಲ್ಲೆಗೆ ಸಂದ ಗೌರವ ಎಂದು ಹರುಷ ವ್ಯಕ್ತಪಡಿಸಿ ಮಾತನಾಡಿ ಇದು ನನ್ನ ಸಾಧನೆ ಏನು ಅಲ್ಲ ಇನ್ನು ಮಾಡಬೇಕಾದ ಕೆಲಸ ಬಹಳಷ್ಟಿದೆ ಗುರಿ ಮುಟ್ಟುವವರೆಗೂ ನಮ್ಮ ನಾಡಿನ ನುಡಿ ಸೇವೆ ನಿರಂತರವಾಗಿರುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ ಗ್ರಾಮೀಣ ಜೀವನಾಭವದ ಹಿನ್ನೆಲೆಯಲ್ಲಿ ರಚಿಸಿರುವ ಸಿದ್ದರಾಮ ಹೊಂಕಲ್ ಅವರು ದುಡಿಯುವ ಜನರ ಕಷ್ಟ ಕಾರ್ಪಣ್ಯಗಳನ್ನು ಗ್ರಾಮೀಣ ರೈತರ ಸಂಕಷ್ಟಗಳನ್ನು ಅವರ ಮಾನವೀಯ ಮೌಲ್ಯಗಳು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ, ಒಟ್ಟು ನಾಡಿನ ಹಾಗೂ ಹೊರನಾಡಿನ ಎಂಟು ವಿಶ್ವವಿದ್ಯಾಲಯಗಳಲ್ಲಿ ಇವರ 15 ಕೃತಿಗಳು ಪಠ್ಯಗಳಾಗಿವೆ ಎಂದು ಹೇಳಿದರು.

ಹಿರಿಯ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ಗ್ರಾಮೀಣ ಬದುಕು, ಸಾಂಸ್ಕೃತಿಕ,ಪರಂಪರೆ,ಕೃಷಿ, ಇನ್ನಿತರ ವಿಷಯಗಳ ಕುರಿತು ಅವರ ಕೃತಿಗಳಲ್ಲಿ ಮಾರ್ಮಿಕವಾಗಿ ಬಿಂಬಿಸಿದ್ದಾರೆ, ರಚಿಸಿದ ಅನೇಕ ಕಥೆಗಳ ಮೇಲೆ ಎಂಫಿಲ್ ಅಧ್ಯಯನ ಒಟ್ಟು ಸಾಹಿತ್ಯ ಬದುಕು ಬರಹದ ಮೇಲೆ ಇತರ ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ, ಇನ್ನು ಇವರ ಸಾಹಿತ್ಯ ಕೃಷಿ ನಾಡಿನಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಗರ ವಲಯ ಕ.ಸಾ.ಪ ಅಧ್ಯಕ್ಷ ಡಾ. ಡಿ.ಜಿ.ಹಡಪದ, ತಿರವಾಳ ವಲಯ ಕ,ಸಾ,ಪ ಅಧ್ಯಕ್ಷ, ಮಲ್ಲಣ್ಣ ಹೊಸಮನಿ, ಹಿರಿಯರಾದ ಸಣ್ಣ ನಿಂಗಪ್ಪ ನಾಯ್ಕೋಡಿ,ದೇವೇಂದ್ರಪ್ಪ ಕನ್ಯಕೋಳೂರು, ಪಂಚಾಕ್ಷರಿ ಹಿರೇಮಠ, ಸಂಶೋಧಕ ಸಾಯಿಬಾಬಾ ಅಣಬಿ,ಸಿದ್ದಣ್ಣ ಕುಂಬಾರ, ಆನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿನ್ನೂರು, ಪರಮಣ್ಣ ಬಡಿಗೇರ್, ತಿಪ್ಪಣ್ಣ ಕ್ಯಾತನಳ ಶಂಕರ್ ಹುಲಕಲ್, ಮಲ್ಕಪ್ಪ ಏರುಂಡಿ,ಸಂಗನಗೌಡ ಪಾಟೀಲ್ ಸಂಗೀತ ಕಲಾವಿದ ಭೂದಯ್ಯ ಹಿರೇಮಠ್ ಸೇರಿದಂತೆ ಇನ್ನಿತರರು ಹಾಜರಿದ್ದರು.