ಡಾ. ಪ್ರೇಮಾ ಅಪಚಂದ ಅವರ ಕೃತಿಗಳ ಲೋಕಾರ್ಪಣೆ

ಡಾ. ಪ್ರೇಮಾ ಅಪಚಂದ ಅವರ ಕೃತಿಗಳ ಲೋಕಾರ್ಪಣೆ

ಡಾ. ಪ್ರೇಮಾ ಅಪಚಂದ ಅವರ ಕೃತಿಗಳ ಲೋಕಾರ್ಪಣೆ

ಕಲಬುರಗಿ :ವಿಶ್ವನಾಥರಡ್ಡಿ ಮುದ್ನಾಳ್ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯ

ಕಲಬುರಗಿ ಮತ್ತು ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಡೊoಗರಗಾoವ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ. ಪ್ರೇಮಾ ಅಪಚಂದ ಅವರು ರಚಿಸಿರುವ "ಪ್ರತಿಬಿಂಬ" ಹಾಗೂ "ಮಾನಿನಿ" ಕೃತಿಗಳ ಲೋಕಾರ್ಪಣೆ ಸಮಾರಂಭ ವಿಶ್ವನಾಥರಡ್ಡಿ ಮದ್ನಾಳ ಕಾಲೇಜ ಸಭಾಂಗಣದಲ್ಲಿ ದಿನಾಂಕ 2. 9. 2024ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ಎಚ್. ಟಿ.ಪೋತೆ ಅವರು ಆಗಮಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ಹಾಗೂ ಲೇಖಕಿ ಡಾ. ಪದ್ಮಿನಿ ನಾಗರಾಜು ಅವರು ಕೃತಿ ಲೋಕಾರ್ಪಣೆ ಮಾಡಲಿದ್ದು, ವಿಭಾಗಿಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ವೀರಶೆಟ್ಟಿ ಅವರು ಕೃತಿಯ ಕುರಿತು ಮಾತನಾಡಲಿದ್ದು, ವಿ.ವಿ ಸಂಘದ ಸದಸ್ಯರು ಹಾಗೂ ನಿವೃತ್ತ ಪ್ರಾoಶುಪಾಲರಾದಂತ ಶ್ರೀ ವೈಜನಾಥ ಕೋಳಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಡಾ.ಬಸವರಾಜ ಮಠಪತಿಯವರು ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಉಪನ್ಯಾಸಕರಾದ ಶ್ರೀ ನಾಗೇಶ ಮಡಿವಾಳ ಹಾಗೂ ಕುಮಾರಿ ಜ್ಯೋತಿ ಬಿರಾದಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ.ಶರಣಬಸಪ್ಪ ವಡ್ಡನಕೇರಿ ಅವರು ತಿಳಿಸಿದ್ದಾರೆ.