ಕನ್ನಡವನ್ನು ಬಳಸಿದಾಗ ಮಾತ್ರ ಉಳಿಸಲು ಬೆಳೆಸಲು ಸಾಧ್ಯ -ಪ್ರಲ್ಹಾದ್ ಭುರ್ಲಿ

ಕನ್ನಡವನ್ನು ಬಳಸಿದಾಗ ಮಾತ್ರ ಉಳಿಸಲು ಬೆಳೆಸಲು ಸಾಧ್ಯ -ಪ್ರಲ್ಹಾದ್ ಭುರ್ಲಿ

ಕನ್ನಡವನ್ನು ಬಳಸಿದಾಗ ಮಾತ್ರ ಉಳಿಸಲು ಬೆಳೆಸಲು ಸಾಧ್ಯ -ಪ್ರಲ್ಹಾದ್ ಭುರ್ಲಿ

ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವೆಹಾರಗಳಲ್ಲಿ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯವೆಂದು ಆರ್.ಜೆ. ಕಾಲೇಜಿನ ಪ್ರಾಚಾರ್ಯರು ಪ್ರಲ್ಹಾದ್ ಭುರ್ಲಿ ಅವರು ತಿಳಿಸಿದರು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸುವ ಕೆಲಸವನ್ನು ಮಾಡಬೇಕೆಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ದಿನಾಂಕ: ೨೦.೧೧.೨೦೨೪ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕನ್ನಡ ಭವನದಲ್ಲಿ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ವಿಧ್ಯಾರ್ಥಿಗಳಿಗೆ ಸ್ಪೂರ್ಥಿಯ ಸ್ಪರ್ಧೆಯ ಪ್ರಬಂಧ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳಿಗೆ ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬ ಘೋಷವಾಕ್ಯ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಪರಂಪರೆಯ ಅರಿವು ಪ್ರತಿಯೊಬ್ಬ ಕನ್ನಡಿಗ ಹೊಂದಬೇಕಾಗಿದೆ ಎಂದು ಮಾತನಾಡಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಶ್ರೀಮಂತಗೊಳಿಸಲು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಶ್ರೀ ವಿಜಯ ಕುಮಾರ ಪಾಟೀಲ್ ತೇಗಲತಿಪ್ಪಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಈ ಸಂದರ್ಭದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು ಮಾಡಬೇಕೆನ್ನುವ ಆಶೆಯ ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಆಶೆಯ ನುಡಿಗಳನ್ನು ಆಡಿದರು. 

 ಮುಖ್ಯ ಅತಿಥಿಗಳಾಗಿ ವಾಣಿಜ್ಯ ಉಪನ್ಯಾಸಕರಾದ ಶ್ರೀಮತಿ ಜ್ಯೋತಿ ಸಿ. ಪಾಟೀಲ ಮಾತನಾಡಿದರು. ಕ.ಸಾ.ಪ. ಪದಾಧಿಕಾರಿಗಳಾದ ಧರ್ಮರಾಜ ಜವಳಿ, ಸಿದ್ದಲಿಂಗ ಬಾಳಿ, ರಮೇಶ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು. 

 ಪ್ರಮುಖರಾದ ಡಾ|| ಬಾಬುರಾವ ಶೇರಿಕಾರ, ಎಂ.ಎನ್. ಸುಗಂದಿ, ರಾಜೇಂದ್ರ ಮಾಡಬೊಳ, ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ಉಪನ್ಯಾಸಕರಾದ ಮಳೇಂದ್ರ ಹಿರೇಮಠ, ಮಂಜುಳಾ ಪಾಟೀಲ, ರೇಣುಕಾ ಡಾಂಗೆ, ಪರ್ವಿನ್ ಸುಲ್ತಾನಾ, ರಮೇಶ ಪವಾರ, ನಾಗರಾಜ ಪಾಟೀಲ ಉಪಸ್ಥಿತರಿದ್ದರು.

ಕನ್ನಡ ನಾಡಿನ ಹಿರಿಮೆ ಗರಿಮೆ ಕುರಿತು ಏರ್ಪಡಿಸಿದ ಪ್ರಬಂಧ ಹಾಗು ಕರ್ನಾಟಕದ ಹಿತವೈಭವ ಕುರಿತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ ನೂರಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಸಿದರು.