ಸಂಸ್ಕೃತಿ ಎನ್ನುವುದು ನಮ್ಮ ವ್ಯಕ್ತಿತ್ವದಲ್ಲಿರುತ್ತದೆ : ಡಾ.ದೇಶಪಾಂಡೆ
ಸೇಡಂನಲ್ಲಿ ಸಂಸ್ಕೃತಿ ಸಮ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಸಂಸ್ಕೃತಿ ಎನ್ನುವುದು ನಮ್ಮ ವ್ಯಕ್ತಿತ್ವದಲ್ಲಿರುತ್ತದೆ : ಡಾ.ದೇಶಪಾಂಡೆ
ಕಲ್ಯಾಣ ಕಹಳೆ ವಾರ್ತೆ ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ಕೈ ಹಿಡಿದು ಮುಂದೆ ಕರೆದುಕೊಂಡು ಹೋದವರು ಪ್ರಭಾಕರ ಜೋಶಿ ಹಾಗೂ ಮಹಿಪಾಲರೆಡ್ಡಿ ಮುನ್ನೂರ್, ಸೇಡಂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸ್ನೇಹಿತರಾಗಿ ಪ್ರಭಾಕರ ಜೋಶಿ ಸಿಕ್ಕರು, ನಟ ಶಂಕರ್ ನಾಗ್ ಸಾಂಗತ್ಯದಲ್ಲಿದ್ದ ಜೋಶಿ ಅವರನ್ನು ಕಾಣುವುದೇ ಒಂದು ಸಂಭ್ರಮವಾಗಿತ್ತು, ಕವನಗಳನ್ನು ಪುಸ್ತಕ ರೂಪದಲ್ಲಿ ತಂದಾಗ ಮಾತ್ರ ಗುರುತಿಸಲಾಗುತ್ತದೆ ಎಂದು ನನ್ನ ಮೊದಲ ಕವನ ಸಂಕಲನಕ್ಕೆ ಹೊರ ಬರಲು ಕಾರಣರಾದರು ಎಂದು ಹಿರಿಯ ಸಾಹಿತಿ ಡಾ.ಎಮ್.ಜಿ.ದೇಶಪಾಂಡೆ ಹೇಳಿದರು.
ಇಲ್ಲಿನ ರಥ ಬೀದಿಯಲ್ಲಿನ ಶ್ರೀ ಕೊತ್ತಲ ಬಸವ ಸಭಾಭವನ ದಲ್ಲಿ ಸಂಸ್ಕೃತಿ ಪ್ರಕಾಶನಣ ಟ್ರಸ್ಟ್ ವತಯಿಂದ ಕೊಡಮಾಡಲಾದ ಸಂಸ್ಕೃತಿ ಸಮ್ಮಾನ್ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ಸಂಸ್ಕೃತಿ ಪದಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಸಂಸ್ಕೃತಿ ಪ್ರಕಾಶನ ನಮ್ಮ ಮನೆಯ ಪ್ರಕಾಶನವಿದ್ದಂತೆ, ಗೀತಾ ಪ್ರಭಾಕರ ಜೋಶಿ ನಮ್ಮ ಮನೆಯ ಮಗಳು, ಅವರ ತಂದೆ ನನ್ನ ಆತ್ಮೀಯ ಸ್ನೇಹಿತರೆಂದು ಜೋಶಿ ಕುಟುಂಬದ ಸಂಬಂಧದ ಬಗ್ಗೆ ಡಾ.ದೇಶಪಾಂಡೆ ಮೆಲುಕು ಹಾಕಿದರು.
ಪ್ರೊ.ಶೋಭಾದೇವಿ ಚಕ್ಕಿ ಅವರು ಲವಲವಿಕೆಯ ಲೇಖಕಿ, ಚಕ್ಕಿ ಅವರಿಗೆ ಸೀಗಿ ಸಾಹಿತ್ಯ ಪ್ರಶಸ್ತಿ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ. ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಅವರದು ಸೂಕ್ಷ್ಮ ಹಾಗೂ ಮೃದು ವ್ಯಕ್ತಿತ್ವ, ಸುಸಂಸ್ಕೃತ ವ್ಯಕ್ತಿಗೆ ಸಂಸ್ಕೃತಿ ಸಮ್ಮಾನ್ ನೀಡಿರುವುದು ಅಭಿಮಾನದ ಸಂಕೇತವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅನುರಾಧ ಪಾಟೀಲ ಮಾತನಾಡಿ, ಸೇಡಂ ತಾಲೂಕು ಹಂತದಲ್ಲಿ ಸಾಹಿತ್ಯ ಕಾರ್ಯಕ್ರಮಗಳ ನಡೆಯುತ್ತಿರುವುದು ಸಾಹಿತ್ಯಾಭಿಮಾನಿಗಳಿಗೆ ವೇದಿಕೆ ಹಾಗೂ ಸ್ಪೂರ್ತಿ ನೀಡುತ್ತದೆ. ಕಲ್ಯಾಣ ಭಾಗದಲ್ಲಿ ಪ್ರಾಚೀನ ಕಾಲದಲ್ಲಿಯೇ ಸಾಹಿತ್ಯ ಣ ಸಾಂಸ್ಕೃತಿಕ ನೆಲಯಾಗಿತ್ತು, ಅಂತಹ ಐತಿಹಾಸಿಕ ಸೆಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೀ ಮಾದರಿಯಾಗಿದೆ.
ಸಂಸ್ಕೃತಿ ಪ್ರಕಾಶನದ ಮೂಲಕ ಲೇಖಕ, ಪತ್ರಕರ್ತ ಪ್ರಭಾಕರ ಜೋಶಿ ಅವರು ಸಂಸ್ಕೃತಿ ಸಮ್ಮಾನ್, ಸೀಗಿ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಿ ಪ್ರದಾನ ಮಾಡುತ್ತಿರುವ ಸಾಹಿತ್ಯ ಸೇವೆ ದಾಖಲಾರ್ಹವಾಗಿದೆ ಎಂದರು.
ಸಂಸ್ಕೃತಿ ಸಮ್ಮಾನ್ ಪುರಸ್ಕೃತ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಶೋಭಾದೇವಿ ಚಕ್ಕಿ ವೇದಿಕೆ ಮೇಲಿದ್ದರು.
ಪ್ರಾಸ್ತಾವಿಕವಾಗಿ ಪತ್ರಕರ್ತ ಪ್ರಭಾಕರ ಜೋಶಿ ಮಾತನಾಡಿದರು. ಆದಿತ್ಯ ಜೋಶಿ ಸ್ವಾಗತಿಸಿದರೆ, ಜಗನ್ನಾಥ ತರನಳ್ಳಿ ನಿರೂಪಿಸಿದರು. ಕೊನೆಯಲ್ಲಿ ಅಮೋಘ ಜೋಶಿ ವಂದಿಸಿದರು.
ಸೇಡಂ ನೆಲ ಮೂಲದಿಂದ ಬಯಲು ಸೀಮೆಯ ಬಳ್ಳಾರಿಯಲ್ಲಿ ನನ್ನ ವೃತ್ತಿ ಬದುಕು ಕಟ್ಟಿಕೊಂಡರು, ನನಗೆ ಸೇಡಂ ಪ್ರೇರಣೆಯಾಗಿದೆ. ಲೇಖಕನಿಗೆ ಸಿಗಬೇಕಾದ ವಾತಾವರಣ ಸೇಡಂ ನೆಲದಲ್ಲಿ ಅಡಗಿದೆ. ಜೋಶಿ ಅವರ ಸಾಹಿತ್ಯ ಪ್ರೀತಿ ದೊಡ್ಡದು.
- ಲಿಂಗಾರೆಡ್ಡಿ ಶೇರಿ, ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು.
