ನೀಲ ಗಂಗಾ" -ಪುಸ್ತಕ ಅವಲೋಕನ
"ನೀಲ ಗಂಗಾ" -ಪುಸ್ತಕ ಅವಲೋಕನ
ಕಲಬುರ್ಗಿ-287-ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ರಚಿಸಿದ "ನೀಲಗಂಗಾ" ಎಂಬ ಕಾದಂಬರಿ ಪುಸ್ತಕದ ಪರಿಚಯ ಕಾರ್ಯಕ್ರಮವನ್ನು ಶನಿವಾರ ಸಂಘದ ಕಾರ್ಯಲಯದಲ್ಲಿ ಜರುಗಿತು.
ಕಲಬುರ್ಗಿಯ ನೂತನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಲ್ಲಿನಾಥ ತಳವಾರ ಅವರು ಪುಸ್ತಕದ ಅವಲೋಕನ ಮಾಡುತ್ತ' 12ನೇ ಶತಮಾನದ ಶರಣರ ಜೀವನ ಆಧಾರಿತ ಕುರಿತು ಅನೇಕರು ಕಾದಂಬರಿಗಳು ರಚಿಸಿದ್ದಾರೆ,ಆದರೆ ಡಾ.ಲಕ್ಷ್ಮಣ ಕೌಂಟೆಯವರ ನೀಲಗಂಗಾ ಕಾದಂಬರಿಯು 12ನೇ ಶತಮಾನ ಮತ್ತು 21ನೇ ಶತಮಾನದ ವಿಚಾರ ಮತ್ತು ಆಚಾರಗಳು ಮುಖಾಮುಖಿಯಾಗಿವೆ.ಅಂದಿನ ಮಡಿವಂತಿಕೆ ಮತ್ತು ಮೌಢ್ಯದ ಕುರಿತು ಶರಣರ ಧೋರಣೆ ಇಂದಿಗೂ ಉಳಿದುಕೊಂಡಿವೆ.ನೀಲಾಂಬಿಕೆ ಗಂಗಾಂಬಿಕೆಯರ ಗೆಳತನ ಮತ್ತು ತ್ಯಾಗವು ಪ್ರಸ್ತುತವಾಗಿವೆ ಮತ್ತು ಆದರ್ಶವಾಗಿವೆ ಎಂದು ಹೇಳಿದರು.ಅವರು ಮುಂದುವರಿದು ಈ ಕೃತಿಯು ಮೌಲಿಕವಾಗಿದೆ,ಭಾಷೆ,ವಸ್ತು ಮತ್ತು ಶೈಲಿ ಕಾದಂಬರಿ ಹೆಣೆಯುವ ತಂತ್ರ ಚೆನ್ನಾಗಿ ಬಳಸಿಕೊಂಡಿದ್ದಾರೆ' ಎಂದರು.ಕೃತಿಯ ಲೇಖಕರಾದ ಡಾ.ಲಕ್ಷ್ಮಣ ಕೌಂಟೆಯವರು ಪುಸ್ತಕದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು,ಡಾ.ಗವಿಸಿದ್ದಪ್ಪ ಪಾಟೀಲ್ ಈ ಕಾದಂಬರಿ ಕುರಿತು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಶ್ರೀ ಆಪ್ಪಾರಾವ ಅಕ್ಕೋಣಿಯವರು ಅಧ್ಯಕ್ಷೀಯ ಮಾತನಾಡಿದರು.ವೇದಿಕೆ ಮೇಲೆ ಡಾ.ಸ್ವಾಮಿರಾವ ಕುಲಕರ್ಣಿ ಉಪಸ್ಥಿತರಿದ್ದರು.ಪ್ರೋ.ಶೋಭದೇವಿ ಚೆಕ್ಕಿ ಪ್ರಾರ್ಥನೆ ಗೀತೆ ಹಾಡಿದರು,ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ಸಂಚಾಲನೆ ಮಾಡಿದರು.ಬಿ.ಎಚ್.ನಿರಗುಡಿ,ವಿಜಯಕುಮಾರ ರೋಣದ್,ವೀರಭದ್ರಪ್ಪ ಗುರಮಿಠಕಲ್,ಸಿದ್ಧರಾಮ ಸರಸಂಬಿ,ಎಸ್.ವಿ.ಹತ್ತಿ,ಡಾ.ಜಯದೇವಿ ಗಾಯಕವಾಡ್,ಡಾ.ಚಿ.ಸಿ.ನಿಂಗಣ್ಣ,ಎಸ್.ಎಸ್.ಪಾಟೀಲ್,ಡಾ.ರಾಜಕುಮಾರ ಮಾಳಗೆ,ಡಾ.ಚಿದಾನಂದ ಕುಡ್ಡನ್,ಪ್ರೋ.ಲಿಂಗಪ್ಪ ಗೋನಾಲ ಮತ್ತು ಡಾ.ಸಿದ್ಧರಾಮಯ್ಯ ಮಠ ಇತರರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
