ಸಪ್ನಾ ಬುಕ್‌ಹೌಸ್‌ನಲ್ಲಿ ರಾಜ್ಯೋತ್ಸವ ಸಂಭ್ರಮ: ಪುಸ್ತಕದಲ್ಲಿ ದರ ರಿಯಾಯತಿ
ಸಪ್ನಾ ಬುಕ್‌ಹೌಸ್‌ನಲ್ಲಿ ರಾಜ್ಯೋತ್ಸವ ಸಂಭ್ರಮ: ಪುಸ್ತಕದಲ್ಲಿ ದರ ರಿಯಾಯತಿ
ಕಲಬುರಗಿ: ಸಪ್ನ ಬುಕ್ ಹೌಸ್ ಈ ಸಲವೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಓದುಗರಿಗೆ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ ಎಂದೇ ಹೆಸರಾಗಿರುವ ಸಪ್ನ ಬುಕ್ ಹೌಸ್ ಕನ್ನಡದಲ್ಲಿ ೭೦೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಪ್ರತಿ ವರ್ಷವೂ ರಾಜ್ಯೋತ್ಸವಕ್ಕೆ ಕನ್ನಡದ ಪ್ರಮುಖ ಬರಹಗಾರರ ಪುಸ್ತಕಗಳ ಜೊತೆಗೆ ಹೊಸ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವರ್ಷ ರಾಜ್ಯೋತ್ಸವದಂದು ವಿಶೇಷವಾಗಿ ೭೦ ಪುಸ್ತಕಗಳು ಹೊರಬಂದಿವೆ.
ಅದಕ್ಕೂ ಮುಂಚೆ, ನವೆಂಬರ್ ೧ ರಿಂದ ನವೆಂಬರ್ ೩೦ ರವರೆಗೆ ಕನ್ನಡ ರಾಜ್ಯೋತ್ಸವವನ್ನು ಸಪ್ನ ಬಹಳ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಿದೆ. ನವೆಂಬರ್ ಇಡೀ ತಿಂಗಳು ಕನ್ನಡ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಪುಸ್ತಕಗಳಿಗೆ ಶೇಕಡಾ ೧೦% ರಿಂದ೨೫%ರ ತನಕ ರಿಯಾಯಿತಿ. ಹಾಗೂ ರಾಜ್ಯೋತ್ಸವದ ವಿಶೇಷ ರಿಯಾಯಿತಿ ಒಂದು ಕೊಂಡರೆ ಒಂದು ಉಚಿತ ಮತ್ತು ಕಾಂಬೋ ಆಫರ್ ಈ ಕೊಡುಗೆ ಆಯ್ದು ಕನ್ನಡ ಪುಸ್ತಕಗಳಿಗೆ ಮಾತ್ರ. ಈ ಅವಧಿಯಲ್ಲಿ ರೂ. ೫೦೦ ಕ್ಕೂ ಹೆಚ್ಚಿನ ಮೌಲ್ಯದ ಕನ್ನಡ ಪಠ್ಯೇತರ ಪುಸ್ತಕಗಳನ್ನು ಕೊಂಡವರಿಗೆ ವಿಶೇಷ ರಿಯಾಯಿತಿ ಕಾರ್ಡ್ ಕೂಡ ನೀಡಲಾಗುತ್ತದೆ. ಈ ಕಾರ್ಡ್ ಅನ್ನು ಹೊಂದಿದವರು ಇಡೀ ವರ್ಷ ಶೇಕಡಾ೧೦% ರಿಯಾಯಿತಿಯಲ್ಲಿ ಕನ್ನಡ ಪುಸ್ತಕಗಳನ್ನು ನಮ್ಮ ಎಲ್ಲಾ ಸಪ್ನ ಮಳಿಗೆಯಲ್ಲಿ ಕೊಳ್ಳಬಹುದು.
ಈ ಕೊಡುಗೆ ಕನ್ನಡ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಕೇವಲ ಕನ್ನಡ ಪಠ್ಯೇತರ ಪುಸ್ತಕಗಳಿಗೆ ಈ ರಿಯಾಯಿತಿ ಅನ್ವಯಿಸಿರುತ್ತದೆ. ಹಾಗೂ ನವೆಂಬರ್ ತಿಂಗಳಿನ ಪ್ರತಿ ಭಾನುವಾರದಂದು ಮಕ್ಕಳಿಗಾಗಿ ಮತ್ತು ಹಿರಿಯರಿಗಾಗಿ ವಿಶೇಷ ಕಾಯ೯ಕ್ರಮಗಳನ್ನು ನಮ್ಮ ಸಪ್ನ ಬುಕ್ ಹೌಸ್ ಕಲಬುರಗಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಪ್ನಾ ಬುಕ್ ಹೌಸ್ ಕಲಬುರಗಿ ಶಾಖೆ ವ್ಯವಸ್ಥಾಪಕರಾದ ಮಹಾಂತೇಶ ಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
.
