ರಷ್ಯಾ ಮೂಲದ ಮಹಿಳೆ ಗುಹೆಯಲ್ಲಿ ವಾಸ – ಗೋಕರ್ಣ ಪೊಲೀಸರು ರಕ್ಷಣೆ

ರಷ್ಯಾ ಮೂಲದ ಮಹಿಳೆ ಗುಹೆಯಲ್ಲಿ ವಾಸ – ಗೋಕರ್ಣ ಪೊಲೀಸರು ರಕ್ಷಣೆ

ರಷ್ಯಾ ಮೂಲದ ಮಹಿಳೆ ಗುಹೆಯಲ್ಲಿ ವಾಸ – ಗೋಕರ್ಣ ಪೊಲೀಸರು ರಕ್ಷಣೆ

ಕಲ್ಯಾಣ ಕಹಳೆ ವಾರ್ತೆ

ಕುಮಟಾ, ಜುಲೈ 13:ರಷ್ಯಾ ಮೂಲದ ಮಹಿಳೆಯೊಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥದ ದಟ್ಟ ಅರಣ್ಯ ಪ್ರದೇಶದಲ್ಲಿನ ಗುಹೆಯೊಂದರಲ್ಲಿ ವಾಸಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸ್ ಇಲಾಖೆ ಸಮಯಪೂರಕ ಹಸ್ತಕ್ಷೇಪದಿಂದ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಬೇರೆಡೆ ಸ್ಥಳಾಂತರಿಸಲಾಗಿದೆ.

ಸುಮಾರು 40 ವರ್ಷ ವಯಸ್ಸಿನ ಮೋಹಿ ಎಂಬ ರಷ್ಯಾ ಮಹಿಳೆ, ತಮ್ಮ ಮಕ್ಕಳು ಪ್ರಯಾ (06) ಮತ್ತು ಅಮಾ (04) ಅವರೊಂದಿಗೆ ಗುಹೆಯಲ್ಲಿ ವಾಸಿಸುತ್ತಿದ್ದು, ಧ್ಯಾನ ಮತ್ತು ಪೂಜೆಯ ಮೂಲಕ ಜೀವನ ಸಾಗಿಸುತ್ತಿದ್ದರು. ಈಕೆ ಬಿಸಿನೆಸ್ ವೀಸಾದಡಿ ರಷ್ಯಾದಿಂದ ಮೊದಲಿಗೆ ಗೋವಾಕ್ಕೆ ಆಗಮಿಸಿ, ಅಲ್ಲಿಂದ ಗೋಕರ್ಣದ ರಾಮತೀರ್ಥ ಅರಣ್ಯ ಪ್ರದೇಶದ ಗುಹೆಗೆ ತೆರಳಿ ಕೆಲವು ದಿನಗಳಿಂದ ವಾಸವುತ್ತಿದ್ದಳು.

ಸಿಪಿಐ ಶ್ರೀಧರ್ ನೇತೃತ್ವದ ಪೊಲೀಸ್ ಪಟ್ರೋಲ್ ತಂಡ, ಇತ್ತೀಚೆಗೆ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಗಸ್ತು ತಿರುಗುವ ಸಂದರ್ಭ, ಗುಹೆಯಲ್ಲಿ ಜನರ ಹಾಜರಾತಿ ಕಂಡು ಶೋಧ ಕಾರ್ಯ ನಡೆಸಿ, ಮಹಿಳೆ ಮತ್ತು ಮಕ್ಕಳನ್ನು ಪತ್ತೆಹಚ್ಚಿ ರಕ್ಷಿಸಿದರು. ಮಹಿಳೆಯ ಆಶಯದಂತೆ ಅವರನ್ನು ಬಂಕಿಕೊಡ್ಲದ ಎಜಿಓ ಶಂಕರ ಪ್ರಸಾದ ಫೌಂಡೇಶನ್‌ ನ ಯೋಗ ರತ್ನ ಸರಸ್ವತಿ ಮಹಿಳಾ ಸ್ವಾಮೀಜಿ ಅವರ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು.

ಆಪ್ತ ಸಮಾಲೋಚನೆಯ ವೇಳೆ ಆಕೆ ಹಿಂದೂ ಧರ್ಮದ ಆಧ್ಯಾತ್ಮ ಮತ್ತು ಪ್ರಕೃತಿಯ ಬದುಕಿನ ಕಡೆ ಹೆಚ್ಚು ಆಕರ್ಷಣೆಯಿದ್ದು, ಅದರಲ್ಲಿಯೇ ಜೀವನ ನಡೆಸುತ್ತಿದ್ದುದಾಗಿ ತಿಳಿದು ಬಂದಿದೆ. ಆದರೆ ಗುಡ್ಡ ಕುಸಿತದ ಅಪಾಯದ ಹಿನ್ನೆಲೆಯಲ್ಲಿ, ಎಸ್.ಪಿ ಎಂ. ನಾರಾಯಣ ಅವರ ಸಲಹೆಯಂತೆ ಮಹಿಳೆ ಮತ್ತು ಮಕ್ಕಳನ್ನು ಪೊಲೀಸರ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ. ಈಗ ರಷ್ಯಾ ರಾಯಭಾರ ಕಚೇರಿಯ ಸಹಕಾರದೊಂದಿಗೆ ಅವರನ್ನು ತಮ್ಮ ತವರು ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಪಿ ನಾರಾಯಣ ತಿಳಿಸಿದ್ದಾರೆ.

**KKP ಪತ್ರಿಕೆ, ಕಲಬುರಗಿ**