ಹೊಳೆಸಮುದ್ರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಬಹಳ ವಿಶಿಷ್ಟವಾಗಿ ಆಚರಣೆ

ಹೊಳೆಸಮುದ್ರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಬಹಳ ವಿಶಿಷ್ಟವಾಗಿ ಆಚರಣೆ
ಕಮಲನಗರ :ಕಲಿಕೆಯು ಮಕ್ಕಳ ಸರ್ವಾಂಗೀಣ ಬದುಕಿಗೆ ಅವಶ್ಯಕವಾಗಿದೆ ಎಂದು ಸಂಜುಕುಮಾರ ಮೇತ್ರೆ ಶಿಕ್ಷಣ ಸೋಯೋಕರು ಹೇಳಿದರು.
ತಾಲೂಕಿನ ಹೊಳೆಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಕಲಿಕೆಗಾಗಿ ಶಿಕ್ಷಣ ಇಲಾಖೆ ವಿನೂತನ ಕಾರ್ಯಕ್ರಮಗಳೊಂದಿಗೆ ಆಸಕ್ತಿ ಹುಟ್ಟಿಸಿ ಮಕ್ಕಳ ಬದುಕಿನೊಂದಿಗೆ ಕಲಿಕೆಯಾಗಬೇಕೆಂದು ಈ ಯೋಜನೆಗಳನ್ನು ಮಾಡಿದೆ ಎಂದರು.
ಪ್ರಾಥಮಿಕ ಶಾಲೆಯ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ್ ಮಾತನಾಡಿ ಶಿಕ್ಷಣವು ಸರ್ವತೊಮುಖ ಅಭಿವೃದ್ಧಿಯ ಭಾಗವಾಗಿದ್ದು ಶಿಕ್ಷಣವು ಪ್ರತಿಯೊಬ್ಬರು ಕಲಿಯಬೇಕೆಂದು ನುಡಿದರು.
ಕಲಿಕಾ ಹಬ್ಬದ ವಿಶೇಷತೆಗಳು:- FLN ನ ಸೂಚಿತ 7 ಚಟುವಟಿಕೆಗಳಲ್ಲಿ(ಗಟ್ಟಿ ಓದುವುದು, ಕಥೆ ಹೇಳುವುದು, ಕೈಬರಹ ,ಸಂತೋಷದಾಯಕ ಗಣಿತ, ಮೆಮೋರಿ ಪರೀಕ್ಷೆ, ಪೋಷಕರು, ಮತ್ತು ಮಕ್ಕಳ ಸಹ ಸಂಬಂಧಗಳು ಚಟುವಟಿಕೆಗಳು ಎಂಬ ಏಳು ರೀತಿಯ ಸರ್ಧೆಗಳು ನಡೆದವು) ಮಕ್ಕಳು ಸಂತೋಷದಿಂದ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪತ್ರವನ್ನು ಮತ್ತು ಜ್ಯಾಮೆಂಟ್ರಿ ಬಾಕ್ಸ್,ನೋಟ್ ಬುಕ್ ಬಹುಮಾನ ರೂಪದಲ್ಲಿ ಪಡೆದುಕೊಂಡರೆಂದು ವಲಯ ಸಂಪನ್ಮೂಲ ವ್ಯಕ್ತಿ ಮಾದಪ್ಪಾ ಮಡಿವಾಳರವರು ತಿಳಿಸಿದರು.
Tlm ಮೇಳ ಆಯೋಜನೆ-:- ವಲಯದಲ್ಲಿನ ಶಿಕ್ಷಕರು ಮಕ್ಕಳು ಕಡಿಮೆ ಖರ್ಚಿನಲ್ಲಿ ತಯಾರಿಸಿದ ಪಾಠೋಪಕರಣಗಳ ಪ್ರದರ್ಶನ ಮಾಡಿದರು.
ಮಾನವ ದೇಹ, ಮೆದುಳು,ಜಠರ,ಅಮೀಬಾ.... ಹೀಗೆ ಮುಂತಾದ ವಿಜ್ಞಾನಕ್ಕೆ ಸಂಬಂದಿಸಿದ ಜೀವಿಗಳು ,ಮಾನವನ ದೇಹದ ಭಾಗಗಳು ಮಕ್ಕಳು ರಂಗೋಲಿಯಲ್ಲಿ ಬಿಡಿಸಿದು ಆಕರ್ಷಕವಾಗಿತ್ತು
ಮಕ್ಕಳು, ಶಿಕ್ಷಕರು, ಅತಿಥಿಗಳು, ಪಾಲಕರು ಕಿರೀಟಗಳು ಹಾಕಿಕೊಂಡು ಸೆಲ್ಫಿ ಸ್ಟ್ಯಾಂಡ್ ನಲ್ಲಿ ಫೋಟೋಗಳು ತೆಗೆದುಕೊಂಡು ಸಂಭ್ರಮ ಪಟ್ಟರು.
ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುನಿಲ ಕಸ್ತೂರಿ ಮಾತನಾಡಿ ಕಮಲನಗರ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಂಘದ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಕೊಡುವುದಾಗಿ ತಿಳಿಸಿದರು
ಸ್ಥಳೀಯ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ ಬೀರಾದಾರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವಲಯದಲ್ಲಿನ ವಿವಿಧ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು, ಕಮಲನಗರ ಸರ್ಕಾರಿ ನೌಕರ ಸಂಘದ ಸುನೀಲ ಕಸ್ತೂರೆ, ನಿರ್ದೇಶಕರಾದ ರಾಜಕುಮಾರ ವಡಗಾವೆ,ಸಚಿನ್ ಸಿಂಧೆ,ಔರಾದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಜುಕುಮಾರ ಮೇತ್ರೆ ,ಬಸವರಾಜ ಜಾಗಾವೆ,ಸಿ.ಆರ್.ಪಿ.ಗಳಾದ ರೋಹಿದಾಸ ಮೇತ್ರೆ,ನವನಾಥ ಬೊರೋಳೆ ಮುಖ್ಯ ಶಿಕ್ಷಕರು ಸಿಬ್ಬಂದಿ ಪಾಲಕರು ಹಾಗೂ ಮಕ್ಕಳು ಇದ್ದರು.
ಗೋಪಾಳ ತಿಲಾಂಗೆ ನಿರೂಪಣೆ ಮಾಡಿದರು ಮಾದಪ್ಪಾ ಮಡಿವಾಳ ಸ್ವಾಗತಿಸಿದರು, ವಿಜಯಕುಮಾರ ನೂದನೂರೆ ವಂದಿಸಿದ್ದರು.