ಶರಣ ಸಾಹಿತ್ಯ ಪರಿಷತ್ತ್ ವತಿಯಿಂದ "ಚಿನ್ಮಯಜ್ಞಾನಿ" ಪ್ರಶಸ್ತಿ ಪ್ರದಾನ ಪ್ರತಿಭೆ ಗುರುತಿಸಿ ಪ್ರಶಸ್ತಿ; ಶರಣ ಸಂಸ್ಕೃತಿ

ಶರಣ ಸಾಹಿತ್ಯ ಪರಿಷತ್ತ್ ವತಿಯಿಂದ "ಚಿನ್ಮಯಜ್ಞಾನಿ" ಪ್ರಶಸ್ತಿ ಪ್ರದಾನ ಪ್ರತಿಭೆ ಗುರುತಿಸಿ ಪ್ರಶಸ್ತಿ; ಶರಣ ಸಂಸ್ಕೃತಿ

ಶರಣ ಸಾಹಿತ್ಯ ಪರಿಷತ್ತ್ ವತಿಯಿಂದ "ಚಿನ್ಮಯಜ್ಞಾನಿ" ಪ್ರಶಸ್ತಿ ಪ್ರದಾನ

ಪ್ರತಿಭೆ ಗುರುತಿಸಿ ಪ್ರಶಸ್ತಿ; ಶರಣ ಸಂಸ್ಕೃತಿ 

ಕಮಲಾಪುರ:ಜಾತಿ,ಮತ, ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ, ಚಿತ್ತ ಶುದ್ಧಿ ಕಾಯಕ ನಿಷ್ಠೆಯೊಂದಿಗೆ, ಕಲೆ ಸಂಸ್ಕೃತಿ ಜೀವಂತವಾಗಿರಿಸಿ ಪರೋಪಕಾರಿ ಜೀವನ ನಡೆಸುತ್ತಿರುವ ಪ್ರತಿಭಾನ್ವಿತರಿಗೆ ಈ 'ಚಿನ್ಮಯ ಜ್ಞಾನಿ' ಪ್ರಶಸ್ತಿ ನೀಡಿರುವುದು ಶರಣ ಸಂಸ್ಕೃತಿಯ ನಿಜ ಸ್ವರೂಪ ಎಂದು ಶರಣ ಚಿಂತಕ ಬಸವರಾಜ ಮರಬದ ತಿಳಿಸಿದರು.

ತಾಲ್ಲೂಕಿನ ನಾವದಗಿ (ಬಿ) ದೇಶಿಕೇಂದ್ರ ವಸತಿ ಶಾಲೆಯ ಸಂಸ್ಕೃತಿಕ ಲೋಕದಲ್ಲಿ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಲಿಂ. ಚಿತಂಬರರಾವ ವಡ್ಡನಕೇರಿ ಸ್ಮರಣಾರ್ಥ ಸಾಧಕರಿಗೆ 'ಚಿನ್ಮಯ ಜ್ಞಾನಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಅರ್ಜಿ ಹಾಕಿ, ದುಡ್ಡು ಕೊಟ್ಟು, ಲಾಬಿ ಮಾಡಿ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಮತ್ತಿತರ ಪ್ರಶಸ್ತಿಗಳನ್ನು ಪಡೆಯಲಾಗುತ್ತಿದೆ. ಇದರಿಂದ ನೈಜ ಪ್ರತಿಭಾನ್ವಿತರು, ಸಾತ್ವಿಕರು ದೂರ ಉಳಿಯುತ್ತಿದ್ದಾರೆ. ಅಂಥವರನ್ನು ಅವರ ಮನೆ ಬಾಗಿಲಿಗೆ ತೆರಳಿ ಪ್ರಶಸ್ತಿ ಕೊಡುವುದೇ ನಿಜವಾದ ಗೌರವ. ಮಾನವನ ಇಂದಿನ ಸಂಗ್ರಹ ಬುದ್ದಿಯಿಂದ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ. ಸಾಮಾಜಿಕ ಸಮಾನತೆಗೆ ಶರಣರ ಕಾಯಕ ದಾಸೋಹ ತತ್ವ ಅಳವಡಿಸಿಕೊಳ್ಳುವು ಇಂದಿನ ಅಗತ್ಯವಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತ ಜಿಲ್ಲಾಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಮಾತನಾಡಿ ಸರಳ ಜೀವನ, ಉದ್ಧಾತ ಚಿಂತನೆ, ಕಾಯಕ ನಿಷ್ಠೆ, ದಾಸೋಹ ಭಾವ, ಮಿತ ವಚನ, ಮೃದು ಧೋರಣೆಯೊಂದಿಗೆ ಎಲ್ಲರು ನನ್ನವರು ಎಂಬ ಬಾಂಧವ್ಯ ಬೆಸಯುವುದೆ ಶರಣ ಜೀವನ ಎಂದರು. 

ನಿವೃತ್ತ ಗ್ರಂಥಪಾಲಕ ಗಣಪತಿ ಸಿಂಧೆ ಮಾತನಾಡಿ ಶರಣ ಸಾಹಿತ್ಯ ಪರಿಷತ್ತಿನಿಂದ ಕಲ್ಯಾಣ ನಾಡಿನ ಕೀರ್ತಿ ಹೆಚ್ಚಾಗುತ್ತಿದೆ. ಪರಿಷತ್ತಿನ ಜಿಲ್ಲಾ, ತಾಲ್ಲೂಕು ಘಟಕಗಳು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಶರಣ ಸಂಸ್ಕೃತಿ ಪಸರಿಸುವಲ್ಲಿ ಮಹತ್ವದ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು. 

ಸಾoಸ್ಕೃತಿಕ ಲೋಕದ ಅಧ್ಯಕ್ಷ ಡಾ. ರಾಜೇಂದ್ರ ಯರನಾಳೆ ಮಾತನಾಡಿ ಬಡವರು ನೊಂದವರಿಗೆ ಧ್ವನಿಯಾಗಬೇಕು. ಒಳ್ಳೆಯದು ಒಳ್ಳೆಯವರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯನೀರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ತೀರ್ಥಕುಮಾರ ಬೆಳಕೊಟಾ, ವಾಣಿಶ್ರೀ ಯರನಾಳೆ, ದೇಶಿಕೇಂದ್ರ ವಸತಿ ಶಾಲೆಯ ವಸತಿ ಸಂಚಾಲಕ ಶಿವರಾಜ ಧಟ್ಟಿ ಹಾಗೂ ಶ್ರೀಮತಿ ಭುವನೇಶ್ವರಿ ಧಟ್ಟಿಮತ್ತಿತರರು ಉಪಸ್ಥಿತರಿದ್ದರು. 

ಕಸ್ತೂರಿಬಾಯಿ ಅಣ್ಣಪ್ಪ ಕೌನಳ್ಳಿ (ಜಾನಪದ ), ಮಲ್ಲಿಕಾರ್ಜುನ ಚಂದ್ರಪ್ಪ ಶೇರಿಕಾರ (ಶರಣ ಸಾಹಿತ್ಯ ), ಅಯ್ಯಣ್ಣ ನಂದಿ ಬಳಬಟ್ಟಿ(ಶರಣ ಸಾಹಿತ್ಯ ) ಡಾ. ಸುನಿತಾ ಪಾಟೀಲ(ಪತ್ರಿಕೋದ್ಯಮ ಮತ್ತು ಶಿಕ್ಷಣ ), ಡಾ. ಶರಣು. ಬಿ ಹೊನ್ನಗೆಜ್ಜೆ (ಶಿಕ್ಷಣ ) ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದು, ಇವರಿಗೆ 'ಚಿನ್ಮಯಜ್ಞಾನಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಅಂಬಾರಾಯ ಮಡ್ಡೆ ಕಾರ್ಯಕ್ರಮ ನಿರುಪಿಸಿದರೆ, ಶಿವರಾಜ್ ಧಟ್ಟಿ ವಂದಿ ಸಿದರು.