ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು : ಸಿದ್ದಲಿಂಗ ಶ್ರೀ

ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು : ಸಿದ್ದಲಿಂಗ ಶ್ರೀ

ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು : ಸಿದ್ದಲಿಂಗ ಶ್ರೀ 

ಭಗವಂತ ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಈ ದೇಹವನ್ನು ಸದೃಢ ಮಾಡಿಕೊಳ್ಳಬೇಕು. ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. 

ಅವರು ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಇಲಕಲ್ಲಿನ ಮಹಾoತ ಶಿವಯೋಗಿಗಳು ಮಹಾಂತ ಜೋಳಿಗೆಯ ಮೂಲಕ ಜನರ ವ್ಯಾಸನಗಳನ್ನು ದೂರವಡುವ ಪ್ರಯತ್ನ ಮಾಡಿದರು. ವಿವಿಧ ಚಟಗಳಿಂದ ನಿತ್ಯ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಬರೀ ಚೆಟ ಮಾಡುವವರು ಮಾತ್ರ ಸಾಯುತ್ತಿಲ್ಲ ಬದಲಾಗಿ ಅವರನ್ನೇ ನಂಬಿರುವ ತಂದೆ ತಾಯಿ, ಹೆಂಡರು. ಮಕ್ಕಳನ್ನು ಸಂಕಷ್ಟಕ್ಕೆಸಿಲುಕಿಸುತ್ತಿದ್ದಾರೆ. ನಿಮ್ಮ ಹುಟ್ಟುಹಬ್ಬದ ಅಂಗವಾಗಿ ತಂದೆ ತಾಯಿಗಳಿಂದ ಯಾವ ಊಡುಗಡೆ ಬೇಡದೆ ನಿಮ್ಮ ವ್ಯಾಸನಗಳನ್ನು ಬಿಡಲು ತಿಳಿಸಿ. ವ್ಯಾಸನಗಳನ್ನು ದುರವಿಡುವ ಮೂಲಕ ಸ್ವಾಸ್ತ್ಯ ಸಮಾಜಕ್ಕೆ ನಾವೆಲ್ಲರೂ ಪಾಣತೋಡೋಣ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ವ್ಯಸನಗಳು ಮತ್ತು ಅವುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜನಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಇಂದಿನ ಅಗತ್ಯವಾಗಿದೆ. ನಮ್ಮ ದೇಹವೇ ನಮ್ಮ ಅಮುಲ್ಯ ಸಂಪತ್ತು ಉತ್ತಮ ಹವ್ಯಾಸಗಳ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. 

ವ್ಯಸನ ಮುಕ್ತ ದಿನದ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪೂಜ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಪ್ರಕಲ್ಪಗಳ ಮುಖ್ಯಸ್ಥರಾದ ಈಶ್ವರಗೌಡ ಪಾಟೀಲ್, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಕಾವೇರಿ ಮಡಿವಾಳ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.