ವಿವಿಧ ಬೇಡಿಕೆ ಈಡೇರಿಸುವಂತೆ ಸಂದೀಪ ಪಿ.ಭರಣಿ ನೇತೃತ್ವದಲ್ಲಿ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಹೆಚ್.ಆರ್. ಅಧಿಕಾರಿಗಳಿಗೆ ಮನವಿ

ವಿವಿಧ ಬೇಡಿಕೆ ಈಡೇರಿಸುವಂತೆ ಸಂದೀಪ ಪಿ.ಭರಣಿ ನೇತೃತ್ವದಲ್ಲಿ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಹೆಚ್.ಆರ್. ಅಧಿಕಾರಿಗಳಿಗೆ ಮನವಿ
ವಿವಿಧ ಬೇಡಿಕೆ ಈಡೇರಿಸುವಂತೆ ಸಂದೀಪ ಪಿ.ಭರಣಿ ನೇತೃತ್ವದಲ್ಲಿ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಹೆಚ್.ಆರ್. ಅಧಿಕಾರಿಗಳಿಗೆ ಮನವಿ

ವಿವಿಧ ಬೇಡಿಕೆ ಈಡೇರಿಸುವಂತೆ ಸಂದೀಪ ಪಿ.ಭರಣಿ ನೇತೃತ್ವದಲ್ಲಿ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಹೆಚ್.ಆರ್. ಅಧಿಕಾರಿಗಳಿಗೆ ಮನವಿ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ರೋಡನಲ್ಲಿರುವ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಪ್ಯಾಕಿಂಗ್ ಪ್ಲಾಂಟನಲ್ಲಿ ವಿವಿಧ ಗ್ರೂಪ "ಡಿ" ಹುದ್ದೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರತ ಬಡ ಕಾರ್ಮಿಕರಿಗೆ ಮೂರು ಶಿಫ್ಟಗಳ ಪೈಕಿ ಯಾವ ಒಂದರಲ್ಲಿಯೂ ಕೆಲಸಕ್ಕೆ ನಿಯೋಜಿಸದೆ ಆನ್ ಕಾಲ ಕರ್ತವ್ಯದ ಮೇಲೆ ಗುತ್ತಿಗೆದಾರನ ಸ್ವಯಂವ್ಯೇದ್ಯವಾದ ತೀರ್ಮಾನದಂತೆ ಕೆಲಸಕ್ಕೆ ನಿಯೋಜಿಸುತ್ತಿರುವ ಮತ್ತು ಶಾಸನಬದ್ದ ಸೌಲತ್ತುಗಳನ್ನು ಮತ್ತು ಕೇಂದ್ರ ಸರ್ಕಾರದಿಂದ ನಿಗದಿತ ಕನಿಷ್ಟ ವೇತನವನ್ನು ಪಾವತಿಸಲು ಕ್ರಮ ವಹಿಸಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂದೀಪ ಪಿ.ಭರಣಿ ನೇತೃತ್ವದಲ್ಲಿ ಮಳಖೇಡ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಹೆಚ್.ಆರ್. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ರೋಡಿನಲ್ಲಿರುವ ರಾಜಶ್ರೀ ಅಲಟ್ರಾಟೆಕ್ ಸಿಮೆಂಟ್ ಕಂಪನಿಯ ಪ್ಯಾಕಿಂಗ್ ಪ್ಲಾಂಟನಲ್ಲಿ ವಿವಿಧ ಹುದ್ದೆಗಳಲ್ಲಿ ಮಶಿನ ಆಧಾರದ ಲೋಡರ ಮತ್ತು ಪ್ಯಾಕಿಂಗ್ ಸ್ವರೂಪದಿ ಹೊರಗುತ್ತಿಗೆ ಆಧಾರದ ಮೇಲೆ ಕ್ರಮವಾಗಿ, ಕಳೆದ 3.6.8,10,15 ಮತ್ತು 20 ವರ್ಷಗಳಿಂದ ಇದುವರೆಗೂ ಅರ್ಜುನ ಗ್ರೂಪ ಮತ್ತು ರೋಡವೇಯ್ಸ ಹಾಗೂ ಮಹಾರಾಜ ಗ್ರೂಪ ಮತ್ತು ಅಸೋಷಿಯೇಟ್ಸ ಆದಿತ್ಯನಗರ ಮಳಖೇಡ ರೋಡ್ ಕಲಬುರಗಿ-585292ರವರಿಂದ ನಿಯೋಜಿತ ಕಾರ್ಮಿಕರಿಗೆ ಸ್ವಯಂವೇದ್ಯವಾದ ಸಮಯಕ್ಕೆ ಸ್ವಯಂವ್ಯೇದ್ಯವಾದ ಶಿಫ್ಟ ರಹಿತ 14 ತಾಸುಗಳ ಕಾಲ ಕೆಲಸಕ್ಕೆ ಅಂದಾಜು ಮೂರು ನೂರು ಜನರನ್ನು ಸದರಿ ಹೊರ ಗುತ್ತಿಗೆ ಸಂಸ್ಥೆಯವರಿAದ ಸದರಿ ಕಂಪನಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ.

ಸದರಿ ಕಂಪನಿಯು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ ಮತ್ತು ಕೆಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಿಂದ ನಿಗದಿತ ಕನಿಷ್ಟ ವೇತನವನ್ನು ನೀಡುತ್ತಿಲ್ಲ ಮೂರು ಶೀಫ್ಟಗಳ ಪೈಕಿ ಯಾವ ಒಂದೂ ಶೀಫ್ಟ್ನಲ್ಲಿ ಕೆಲಸಕ್ಕೆ ನಿಯೋಜಿಸುತ್ತಿಲ್ಲ. ತಮ್ಮ ಮನಸ್ಸಿಗೆ ಬಂದ ಹಾಗೆ ಹಗಲು, ಇರುಳು ಬೆಳಿಗ್ಗೆ ಎನ್ನದೆ ಮನಸ್ಸಿಗೆ ಬಂದAತೆ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ ಮತ್ತು ಶಾಸನಬದ್ಧ ಹುದ್ದೆಗೆ ಪೂರಕವಾದ ಸೌಲತ್ತುಗಳನ್ನು ಕಲ್ಪಿಸಿರುವುದಿಲ್ಲ ಅಂದರೆ, ಕನಿಷ್ಟ ವೇತನ ಇ.ಸ್.ಐ. ಫಿ.ಎಫ್. ಬೋನಸ್ ಗ್ರಾಚ್ಯುಯಿಟಿ ಗ್ರೂಪ ಇನ್ಸುರೆನ್ನ ಕೂಡ ಒದಗಿಸಿರುವುದಿಲ್ಲ. ಕೆಲಸ ಮಾತ್ರ ಸಮಯ ಬಿಟ್ಟು ಸಮಯಕ್ಕೆ ಕೆಲಸ ಹಚ್ಚುತ್ತಾರೆ ನಮ್ಮ ನಿಯಮ ಇದೇ ರೀತಿ ಇದೆ ಯಾವುದೇ ಶೀಫ್ಟ್ನಲ್ಲಿ ನಿಮ್ಮನ್ನು ಕೆಲಸಕ್ಕೆ ಹಚ್ಚಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಪ್ರತಿ ದಿನ ಸುಮಾರು 10, 12 ಮತ್ತು 14 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಾರೆ ಆದರೆ ನಮಗೆ 8.00 ಗಂಟೆ ಕೆಲಸ ಬೇಕು ಎಂದು ನಮ್ಮ ಬೇಡಿಕೆ ಇದೆ, ಆದ್ದರಿಂದ, ಕೇಂದ್ರ ಕಾರ್ಮಿಕ ಇಲಾಖೆಯ ಪ್ರಕಾರ ನಮಗೆ ಸದರಿ ಹುದ್ದೆಯ ಸ್ವರೂಪಕ್ಕೆ ಪೂರಕವಾದ ಕನಿಷ್ಟ ವೇತನ ನೀಡಬೇಕು ಇ.ಎಸ್.ಐ.ಪಿ.ಎಫ ಗ್ರೂಪ ಇನ್ಸುರೆನ್ಸ, ಗ್ರಾಚ್ಯುಯಿಟಿ ಇತ್ಯಾದಿ ಶಾಸನಬದ್ದ ಸೌಲತ್ತುಗಳನ್ನು ಕಲ್ಪಿಸಬೇಕು, ಈಡೇರಿಸಬೇಕಾದ ಬೇಡಿಕೆಗಳಾದ ಆನ್ ಕಾಲ ಕೆಲಸ ರದ್ದು ಪಡಿಸಿ 8 ತಾಸುಗಳ ಅವಧಿಯ ಶಿಫ್ಟವೈಸ್ ಕೆಲಸಕ್ಕೆ ನಿಯೋಜಿಸಬೇಕು, ಪ್ರತಿ ಒಂದು ತಾಸು ಹೆಚ್ಚುವರಿ ಓ.ಟಿ. ಕೆಲಸಕ್ಕೆ ನಿಯೋಜಿಸಿದರೆ ಒಂದು ದಿನದ ವೇತನ/ಸಂಬಳವನ್ನು ಹೆಚ್ಚುವರಿಯಾಗಿ ನೀಡಬೇಕು. 

ಸಾಲರಿ ಸ್ಲಿಪ ಕೊಡಬೇಕು ಅದರಲ್ಲಿ ಇ.ಎಸ್.ಐ.ಪಿ.ಎಫ್ ಗ್ರಾಚ್ಯುಯಿಟಿ, ಡಿ.ಎ.ವಿ.ಡಿ.ಎ. ಪ್ರತಿದಿನದ ವೇತನದ ದರ ಎಷ್ಟು ಎಂಬುದನ್ನು ನಮೂದಿಸಬೇಕು ಮತ್ತು ಪ್ರತಿ ಒಂದು ಗಂಟೆಯ ಹೆಚ್ಚುವರಿ ಕೆಲಸಕ್ಕೆ ಕೇಂದ್ರ ಕಾರ್ಮಿಕ ಇಲಾಖೆ ನಿಯಮದಂತೆ ನಿಗದಿಪಡಿಸಿದ ಓ.ಟಿ. ದರ ಎಷ್ಟು ಎಂಬುದನ್ನು ನಮೂದಿಸಬೇಕು, ಲೋಡಿಂಗ್ ಶಾಖೆಯಲ್ಲಿ ಒಂದು ಶಿಫ್ಟ್ನಲ್ಲಿ ಕನಿಷ್ಠ 6 ಜನರನ್ನು ಕೆಲಸಕ್ಕೆ ನಿಯೋಜಿಸಬೇಕು ಮತ್ತು ಪ್ರತಿ ತಿಂಗಳು 26 ದಿನಗಳ ಕೆಲಸ ಕೊಡಬೇಕು. 4 /ದಿನಗಳ ರಜೆಯನ್ನು ಕೊಡಬೇಕು ಅಲ್ಲದೆ ಸ್ಥಳೀಯರಿಗೆ ಮೊದಲ ಆಧ್ಯತೆ ಮೇರೆಗೆ ಕೆಲಸ ಕೊಡಬೇಕು ಉಳಿದಂತೆ ಬೇರೆ ರಾಜ್ಯದವರಿಗೆ 2ನೇ ಆದ್ಯತೆ ಕೊಡಬೇಕು, ಊಟದ ಸಮಯ ಒಂದು ಗಂಟೆ ಅವಧಿಗೆ ನಿಗದಿಪಡಿಸಬೇಕು ಕಾರ್ಮಿಕರಿಗೆ ಟೀ ಬ್ರೇಕ್ ಇರಬೇಕು. 

ಬೇರೆ ರಾಜ್ಯಗಳಿಂದ ಬಂದ ಕಾರ್ಮಿಕರ ಕುಟುಂಬಸ್ಥರಿಗೆ ಏನಾದರೂ ಸಮಸ್ಯೆ ಉಂಟಾದಾಗ ಊರಿಗೆ ಹೋದಾಗ ಊರಿನಿಂದ ಬಂದ ನಂತರ ಕೂಡಲೆ ಕೆಲಸಕ್ಕೆ ನಿಯೋಜಿಸಬೇಕು, ಕರ್ತವ್ಯನಿರತ ಕಾರ್ಮಿಕರಿಗೆ ಕರ್ತವ್ಯದ ಸಮಯದಲ್ಲಿ ಕರ್ತವ್ಯದ ಸ್ಥಳದಲ್ಲಿ ಜೀವ ಹಾನಿಯಾದಲ್ಲಿ ಗಂಭೀರ ಗಾಯಗಳಾದಲ್ಲಿ ಅನಾರೋಗ್ಯಕ್ಕೆ ಒಳಗಾದಲ್ಲಿ ಅಂತಹ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಕಂಪನಿಯ ವತಿಯಿಂದ ವೈದ್ಯಕೀಯ ಮತ್ತು ಶುಶ್ರೂಆ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ತಮ್ಮ ಸದರಿ ಕಂಪನಿಗೆ ಸಂಬAದಿಸಿದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಬೇಕು ಮತ್ತು ಕಂಪನಿಯ ವತಿಯಿಂದ ತುರ್ತು ವೈರ್ಧಯಕೀಯ ಸೇವೆಗಾಗಿ ಅಂಬುಲೆನ್ಸ್ ವ್ಯವಸ್ತೆ ಮಾಡಬೇಕು, ಸರ್ಕಾರಿ ರಜಾ ದಿನಗಳಲ್ಲಿ ಸದರಿ ಕಂಪನಿಯಲ್ಲಿ ಕೆಲಸ ಮಾಡಿದರೆ ಎರಡು ದಿನದ ವೇತನವನ್ನು ಕೋಡಬೇಕು ಕೆಲಸ ಮಾಡದೇ ಇದ್ದಲ್ಲಿ ಒಂದು ದಿನದ ವೇತನವನ್ನು ನೀಡಬೇಕು, ಕರ್ತವ್ಯನಿರತ ಕಾರ್ಮಿಕರಿಗೆ, ಪ್ರತಿ ವರ್ಷಕ್ಕೆ ಎರಡು ಜೋಡು ಸಮವಸ್ತç ಕೊಡಬೇಕು, ಪ್ರತಿ ತಿಂಗಳಿಗೆ 1 ಕೆಜಿ. ಕೊಬ್ಬರಿ ಎಣ್ಣೆ ಹಾಗೂ 2 ಕೆ.ಜಿ, ಬೆಲ್ಲವನ್ನು ಕಡ್ಡಾಯವಾಗಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ ಕಡುನ್, ಅರ್ಜುನ್ ಎನ್.ಕೆ, ಮನೋಜ್, ಮಲ್ಲಿಕಾರ್ಜುನ್ ಸೇರಿದಂತೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಕಾರ್ಮಿಕರು ಇದ್ದರು

.