ರಂಜಾನ್ ಅಂಗವಾಗಿ ಎಸಬಿಐ ನಿಂದ ಸಾಮರಸ್ಯದ ಇಫ್ತಾರ್ ಕೂಟ್ |

| ರಂಜಾನ್ ಅಂಗವಾಗಿ ಎಸಬಿಐ ನಿಂದ ಸಾಮರಸ್ಯದ ಇಫ್ತಾರ್ ಕೂಟ್ |
ಇಫ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ :..
ಶಹಾಬಾದ : - ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ರಂಜಾನ್ ಮಾಸದ ಅಂಗವಾಗಿ ಭಂಕೂರ ಶಾಖೆಯ ಎಸಬಿಐ ಬ್ಯಾಂಕ್ ನ ಮ್ಯಾನೇಜರ್ ದೀಪಕ ಕುಮಾರ ವತಿಯಿಂದ ಶಾಂತನಗರ ದ ಎಸಬಿಐ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ಇಫ್ತಾರ್ ಕೂಟ ನಡೆಯಿತು.
ಇಫ್ತಾರ್, ನಂತರ, ಪ್ರತಿ ದಿನದ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ ಮತ್ತು ಇಫ್ತಾರ್ ಕೂಟ್ ಇತರರೊಂದಿಗೆ ತಮ್ಮ ಉಪವಾಸವನ್ನು ಮುರಿಯಲು ಆಹಾರವನ್ನು ಒದಗಿಸುವುದು ಆಚರಣೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ.
ಇಫ್ತಾರ್ ಕೂಟ್ ವು ಎಲ್ಲಾ ಧರ್ಮದ ಎಲ್ಲಾ ಕುಟುಂಬಗಳ ಮತ್ತು ಎಲ್ಲಾ ಸಮುದಾಯಗಳ ಸದಸ್ಯರನ್ನು ಒಳಗೊಂಡ ಸಾಮಾಜಿಕ ಕಾರ್ಯಕ್ರಮವಾಗಿದೆ, ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್. ಈ ಸಂದರ್ಭದಲ್ಲಿ ಮುಸ್ಲಿಮರು ದಿನವಿಡೀ ಉಪವಾಸ ಆಚರಿಸುತ್ತಾರೆ, ಉಪವಾಸ ತೊರೆಯುವ ಅವರಿಗಾಗಿ ಎಸಬಿಐ ಬ್ಯಾಂಕ್ ನವರು ಇಫ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
ಧಾರ್ಮಿಕ ಭಾವೈಕ್ಷತೆಯ ಕ್ಷಣಕ್ಕೆ ಭಂಕೂರಿನ ಎಸಬಿಐ ಬ್ಯಾಂಕ್ ಸಾಕ್ಷಿಯಾಗಿದೆ, ಶಾಂತ ನಗರದ ಬ್ಯಾಂಕ್ ನ ಆವರಣದಲ್ಲಿ ಆಯೋಜಿಸಲಾಗಿದ್ದ ಇಫ್ತಾರ ಕೂಟದಲ್ಲಿ ಹಿಂದೂ ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗಿ ಭೋಜನ ಸವಿದರು.
ಈ ಸಂಧರ್ಭದಲ್ಲಿ ಕದಸಂಸ ರಾಜ್ಯ ಸಂ. ಸಂಚಾಲಕ ಸುರೇಶ ಮೆಂಗನ ಮಾತನಾಡಿ, ಸೌಹಾರ್ಧತೆಗೆ ಹೆಸರುವಾಸಿಯಾದ ಭಂಕೂರ ಗ್ರಾಮದಲ್ಲಿ ಎಸಬಿಐ ಬ್ಯಾಂಕ್ ಮ್ಯಾನೇಜರ್ ಇಫ್ತಾರ್ ಕೂಟವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರ ಮತ್ತು ಸಹೋದರತ್ವದ ಪ್ರತಿಕ, ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಮಾಜಿಕ ಮತ್ತು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಗ್ರಾ. ಪಂ. ಮಾಜಿ ಸದಸ್ಯ ಮುಜಾಹಿದ್ ರವರು ಮಾತನಾಡಿ, ರಂಜಾನ್ ಇಫ್ತಾರ್ ಕೂಟ ಆಯೋಜಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು, ಭಾವೈಕ್ಯದ ತಾಣ ಭಂಕೂರ ಮತ್ತು ಶಾಂತ ನಗರದಲ್ಲಿ ಹಿಂದೂ–ಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದರು.
ಇಫ್ತಾರ್ ಕೂಟ್ ದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ಅ. ರೌಫ ಸೇಠ್, ವಿಜಯಕುಮಾರ ಪಾಟೀಲ, ಗ್ರಾ. ಪಂ. ಅಧ್ಯಕ್ಷ ಶರಣಬಸಪ್ಪ ಧನ್ನಾ, ಸದಸ್ಯ ಶರಣಗೌಡ ದಳಪತಿ, ಬ್ಯಾಂಕ್ ಸಿಬ್ಬಂದಿ ವಿಜಯಕುಮಾರ, ಹರಿವಂಶ ಬಾಲಾ, ಹಾಗೂ ಸ್ವಾಗತಿಕ, ಶ್ವೇತಾ ಮತ್ತು
ಮುಜಾಹಿದ್ ಹುಸೇನ, ಭೀಮಯ್ಯ ಗುತ್ತೆದಾರ, ಭರತ ಧನ್ನಾ, ಜಾಕೀರ್ ಹುಸೇನ, ಯಶ್ವಂತ ಚಹ್ವಾಣ, ಶಕೀಲ್ ಪಾಶಾ, ಗಂಗಾರಾಮ ರಾಠೋಡ, ಶ್ರೀಧರ ಕೊಲ್ಲೂರ, ಅಬ್ದುಲ ಬಸೀರ್, ಅ. ರಹೀಮ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಕೋಟ ಮಾಡಿ :.. ಭಾರತ ಜಾತ್ಯಾತೀತ ರಾಷ್ಟ್ರ ಸಂವಿಧಾನ ಪ್ರಕಾರ ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲ ಧರ್ಮೀಯರು ಸಮಾನವಾಗಿ ಬದುಕಬೇಕು, ಮುಸ್ಲಿಂ ಬಾಂಧವರು ಆಚರಿಸುತ್ತಿರುವ ರಂಜಾನ್ ಮಾಸದ ಹಬ್ಬಕ್ಕೆ ನಾವೆಲ್ಲರೂ ಶುಭಹಾರೈಸಿ, ಸೌಹಾರ್ದತೆ ಸಾರುತ್ತೇವೆ :..ದೀಪಕ ಕುಮಾರ ಮ್ಯಾನೇಜರ್ ಎಸಬಿಐ ಭಂಕೂರ
ಕೋಟ ಮಾಡಿ :..ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮದ ವಿಷ ಬೀಜ ಭಿತ್ತಿ ಕೋಮು ಭಾವನೆ ಮೂಡಿಸಲಾಗುತ್ತಿದೆ, ಆದರೆ ಇಲ್ಲಿ ಭಾವೈಕ್ಯತೆ ಮೂಡಿಸಲಾಗುತ್ತದೆ, ಹಿಂದೂ ಮುಸ್ಲಿಮರು ಸೇರಿಕೊಂಡು ರಂಜಾನ್ ಇಫ್ತಾರ್ ಆಚರಣೆ ಮಾಡುವುದರಿಂದ ಭಾವೈಕ್ಯತೆ ಸಾರುತ್ತಿರುವುದರು ಇತರರಿಗೆ ಮಾದರಿಯಾಗಿದೆ :.. ಸುರೇಶ ಮೆಂಗನ ರಾಜ್ಯ ಸಂ. ಸಂಚಾಲಕರು, ಕದಸಂಸ.
ಕೋಟ ಮಾಡಿ :.. ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲಾ ಧರ್ಮದ ಸಮೂಹವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವ ಬ್ಯಾಂಕ್ ನ ಮ್ಯಾನೇಜರ್ ದೀಪಕ ಕುಮಾರ ರ ರ ಕಾರ್ಯ ಶ್ಲಾಘನೀಯವಾದುದು :.. ಮುಜಾಹಿದ್ ಹುಸೇನ ಗ್ರಾ. ಪಂ ಮಾಜಿ ಸದಸ್ಯ.