ಪ್ರೀತಿಯ ಅಮ್ಮ

ಪ್ರೀತಿಯ ಅಮ್ಮ

.*ಪ್ರೀತಿಯ ಅಮ್ಮ*

ಅಮ್ಮ ಅಮ್ಮ ಅಮ್ಮ 

ನನ್ನ ಪ್ರೀತಿಯ ಅಮ್ಮ 

ನಿನ್ನಯ ಕರೆಗೆ ನಾನು

ಓಡಿ ಬರುವೆನು ಅಮ್ಮ 

     ಬಿಸಿ ಬಿಸಿ ರೊಟ್ಟಿ ತಟ್ಟಿ

     ಬಳ್ಳೊಳ್ಳಿ ಜೀರಿಗೆ ಕುಟ್ಟುವೆಯಮ್ಮ

     ಉಪ್ಪುತುಪ್ಪ ಬೆರೆಸಿ

      ಮುಟ್ಟಿಗೆಮಾಡಿ ಕೊಡುವೆಯಮ್ಮ

ಮುಟ್ಟಿಗೆ ತಿಂದು ನಾನು

ಗಟ್ಟಿಯಾಗುವೆನಮ್ಮ

ನಿತ್ಯದಿ ಹೇಳುವ ಪಾಠ

ಚಿತ್ತದಿ ಕೇಳುವೆನಮ್ಮ

     ಆಟವು ಆಡಲು ನನಗೆ

     ತುಂಬಾ ಇಷ್ಟವು ಅಮ್ಮ

     ಕೆಳಕ್ಕೆ ಬೀಳಲು ನಾನು

     ಎತ್ತಿ ರಮಿಸುವೆಯಮ್ಮ

ಉರಿಛಳಿ ಬರಲು ನನ್ನ 

ಆರೈಕೆ ಮಾಡುವೆಯಮ್ಮ

ನಿನ್ನಯ ತ್ಯಾಗಕೆ ನಾನು

ಚಿರಋಣಿಯಾಗಿಹೆನಮ್ಮ

      *ಪ್ರೊ. ಶೋಭಾದೇವಿ ಚೆಕ್ಕಿ ಸೇಡಂ*