ಯಲ್ಹೇರಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ. ಯ ಕಳಪೆ ಕಾಮಗಾರಿ ವಿರುದ್ಧ ಕ.ರಾ. ರೈತ ಸಂಘದ ಆಕ್ರೋಶ

ಯಲ್ಹೇರಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ. ಯ ಕಳಪೆ ಕಾಮಗಾರಿ ವಿರುದ್ಧ ಕ.ರಾ. ರೈತ ಸಂಘದ ಆಕ್ರೋಶ

ಯಲ್ಹೇರಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ. ಯ ಕಳಪೆ ಕಾಮಗಾರಿ ವಿರುದ್ಧ ಕ.ರಾ. ರೈತ ಸಂಘದ ಆಕ್ರೋಶ

ಗುರುಮಿಠಕಲ್: ಸಮೀಪದ ಯಲ್ಹೇರಿ ಗ್ರಾಮದಲ್ಲಿ 2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ವತಿಯಿಂದ ಸುಮಾರು ₹20 ಲಕ್ಷ ಮೌಲ್ಯದ ಸಿಸಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳು ನಡೆದಿದ್ದು, ಕಾಮಗಾರಿ ಗುಣಮಟ್ಟ ಕುರಿತು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇವಲ ಒಂದು ತಿಂಗಳಷ್ಟೇ ಕಳೆದಿದ್ದರೂ ರಸ್ತೆ ಮೇಲೆ ಕೆರೆಯಂತಾಗಿ ನೀರು ನಿಲ್ಲುತ್ತಿರುವುದು, ಚರಂಡಿಯ ನೀರು ಸರಿಯಾಗಿ ಹರಿಯದೇ ಒಂದೇ ಕಡೆ ಜಮಾವಣೆಗೊಳ್ಳುತ್ತಿರುವುದರಿಂದಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಕ.ರಾ. ರೈತ ಸಂಘ ತಿಳಿಸಿದೆ.

ಕಾಮಗಾರಿ ಗುಣಮಟ್ಟ ತುಂಬಾ ಕಳಪೆಯಾಗಿರುವ ಕಾರಣ, ಗ್ರಾಮ ಪಂಚಾಯಿತಿ ಈ ಕಾಮಗಾರಿ ಹಸ್ತಾಂತರ ಪಡೆಯಬಾರದು ಎಂಬುದಾಗಿ ಸ್ಥಳೀಯ ಪಿಡಿಓಗೆ ರೈತ ಸಂಘ ಮನವಿ ಸಲ್ಲಿಸಿ , ಶೀಘ್ರದಲ್ಲಿ ರಸ್ತೆ ಹಾಗೂ ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ದಿಟ್ಟ ಎಚ್ಚರಿಕೆ ನೀಡಲಾಗಿದೆ

ಸ್ಥಳೀಯರ ಅನುಭವ ಹಾಗೂ ಕಳಪೆ ಕಾಮಗಾರಿ ಕುರಿತು ಗ್ರಾಮಸ್ಥರಲ್ಲಿ ಅಸಹನೆ ಹೆಚ್ಚಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದರೆ ಆಂದೋಲನ ಮಾಡುವ ಎಚ್ಚರಿಕೆ ಸಹ ರೈತ ಸಂಘ ನೀಡಿರುವುದು ಗಮನಾರ್ಹ.