ಪುಸ್ತಕಗಳು ಜ್ಞಾನ ವಿತರಣೆಯ ಸಾಧನ:ಡಾ.ಕೊನೇಕ್
ಪುಸ್ತಕಗಳು ಜ್ಞಾನ ವಿತರಣೆಯ ಸಾಧನ:ಡಾ.ಕೊನೇಕ್
ಪುಸ್ತಕಗಳು ಜ್ಞಾನ ವಿತರಣೆಯ ಸಾಧನ
ರಕ್ತ ಜೀವ ಉಳಿಸಿದರೆ ಪುಸ್ತಕ ಜೀವನ ಬೆಳೆಸುತ್ತದೆ ಎಂದು ಪ್ರಕಾಶಕ ಡಾ.ಬಸವರಾಜ ಕೊನೇಕ್ ಅವರು ತಿಳಿಸಿದರು.
ನಗರದ ಎಸ್ ಎಸ್ ರಾಜಾಪುರ ಬಿಲ್ಡಿಂಗನಲ್ಲಿ ಹಮ್ಮಿಕೊಂಡಿದ್ದ ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ ಅವರು ರಚಿಸಿದ ಗುಬ್ಬಿ ಕಟ್ಟಿದ ಗೂಡು,ಗೊತ್ತಿಲ್ಲದ ದಿನಾಂಕ,ಲಾಲಬಹುದ್ದರ ಶಾಸ್ತ್ರಿ,ಗುರಲಿಂಗ ಶಿವಾಚಾರ್ಯರ ಸಮಗ್ರ ಕಾವ್ಯ ಸೇರಿದಂತೆ ನಾಲ್ಕು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕಗಳು ನಮಗೆ ಅಮೂಲ್ಯ ನಿಧಿ ಹಾಗೂ ಜ್ಞಾನ ವಿತರಣೆಯ ಪ್ರಮುಖ ಸಾಧನವಾಗಿದೆ. ಅಲ್ಲದೇ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಪ್ರಸ್ತುತ ಪುಸ್ತಕಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಪುಸ್ತಕದ ಜಾಗವನ್ನು ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್‌ಗಳು ಆಕ್ರಮಿಸುತ್ತಿವೆ. ಅಲ್ಲದೇ ಪ್ರಪಂಚದ ಜ್ಞಾನ ಪಡೆಯಲು ಇವುಗಳನ್ನು ಬಳಸಲಾಗುತ್ತಿದೆ. ಆದರೆ, ಪುಸ್ತಕಗಳು ಜ್ಞಾನದ ಜತೆಗೆ ಜೀವನ ರೂಪಿಸುತ್ತದೆ ಎಂದರು.
ಹಿರಿಯರಾದ ಅಪ್ಪಾರಾವ ಅಕ್ಕೋಣೆ ಮಾತನಾಡಿ, ಮನುಷ್ಯ ಪುಸ್ತಕಗಳ ಲೋಕದ ಮೂಲಕವೇ ಉಳಿದ ಲೋಕಗಳನ್ನು ಅರಿಯಲು ಸಾಧ್ಯ. ಪುಸ್ತಕ ನಮ್ಮ ಬದುಕನ್ನು ಬೆಳಗುವುದರ ಜೊತೆಗೆ ಮನುಷ್ಯ ಪುಸ್ತಕಗಳಿಂದ ತನ್ನದಲ್ಲದ ಅನುಭವಗಳನ್ನು ತನ್ನದಾಗಿಸಿಕೊಳ್ಳತ್ತಾನೆ. ಹಾಗೆ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾನೆ. ಪುಸ್ತಕವನ್ನು ಓದುವುದರಿಂದ ಒಬ್ಬ ವ್ಯಕ್ತಿಯನ್ನ ಒಂದು ಉತ್ತಮ ಸ್ಥಾನಕ್ಕೆ ಬರುವಂತೆ ಮಾಡುತ್ತದೆ. ಓದುವುದು ಅದರ ಜೊತೆಗೆ ವಿಷಯವನ್ನು ಸಂಗ್ರಹಿಸುವುದು ಒಂದು ಅತ್ಯುತ್ತಮ ಹವ್ಯಾಸವಾಗಿದೆ.
ಪುಸ್ತಕದ ಹವ್ಯಾನದಿಂದ ತಾನಿರುವ ಸ್ಥಳದಲ್ಲಿಯೇ ಲೋಕದ ಅನುಭವಗಳನ್ನು ಪಡೆಯುವ ಅವಕಾಶ ಲಭಿಸುತ್ತದೆ. ಓದುಗಾರರಿಗೆ ಅನುಕೂಲವಾಗುವುದೇ ಪುಸ್ತಕ, ಗ್ರಂಥಾಲಯಗಳಲ್ಲಿ ಪುಸ್ತಕವನ್ನು ಸಂಗ್ರಹಿಸುವುದು ಹಾಗೆ ಮನೆಗಳಲ್ಲಿ ಸಂಗ್ರಹಿಸಿಟ್ಟು ಓದುವುದು ಪುಸ್ತಕದ ಓದುವುದು ಮನುಷ್ಯನ್ನು ವ್ರಜದಷ್ಟು ಬೆಲೆ ಬರುವಂತೆ ಮಾಡುತ್ತದೆ. ಕತೆ, ಕಾದಂಬರಿ, ಕವಿತೆ,ನಾಟಕ, ಪ್ರಬಂಧ, ವಿಚಾರ, ವಿಮರ್ಶೆ, ಸಾಮಾನ್ಯ ಜ್ಞಾನ, ವಿಜ್ಞಾನ, ರಾಜಕೀಯ,ಮುಂತಾದವುಗಳು ಇವುಗಳ ಮೂಲಕ ಅಭಿವೃದ್ಧಿ ಹೆಚ್ಚಿಸುತ್ತದೆ.
ಪುಸ್ತಕ ಕುರಿತು ಡಾ. ಕಾವ್ಯಶ್ರೀ ಮಹಾಗಾoವಕರ, ಡಾ.ಸಂಗನಗೌಡ ಹಿರೇಗೌಡ ಮಾತನಾಡಿದರು ವೇದಿಕೆ ಮೇಲೆ ಕಳ್ಳಿ ಮಠದ ಪರಮಪೂಜ್ಯ ವಿರೂಪಾಕ್ಷ ದೇವರು ಸಾನಿಧ್ಯ ವಹಿಸಿದ್ದರು. ದಿನೇಶ ಪಾಟೀಲ, ಸಿದ್ದಣ್ಣ ರಾಜಪುರ, ಅಮರನಾಥ ಜಿ.ತಡಕಲ್, ಶಿವರಾಜ ಕಾಳಗಿ,ಡಾ. ಶರಣಬಸಪ್ಪ ವಡ್ಡನಕೇರಿ ಕಿರಣ ಪಾಟೀಲ,ಉದಯ ಕುಮಾರ ವೀರಶೆಟ್ಟಿ,ಶರಣಬಸಪ್ಪ ಆಲಮೆಲಕರ್, ರೇವಣಸಿದ್ದಪ್ಪ ರಾಸುರೆ,ಶಂಕರ ತಡಕಲ್,ಶ್ರೀಕಾಂತ ಪಾಟೀಲ,ಜೈಪ್ರಕಾಶ ಓಕಳಿ,ಉಮಾ ಪ್ರಧಾನಿ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಕುಮಾರ ಪಾಟೀಲ ತೆಲುಗತಿಪ್ಪಿ, ಬಿ.ಎಚ್ ನೀರಗುಡಿ,ಡಾ. ತೀರ್ಥ ಕುಮಾರ ಬೆಳಕೋಟಾ ಶಿವಲೀಲಾ ಕಲಗುರ್ಕಿ,ಅಣವೀರ ಕಾಳಗಿ,ಅನಸುಯಾ ಜಿ.ಕಲ್ಮಠ,ಚಂದ್ರಭಾಗ ಸೋಮರಾಜ,ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸೃಷ್ಟಿ ಮಲ್ಲಿನಾಥ,ಪ್ರೀತಿ ಬಸವರಾಜ, ಸೃಷ್ಟಿ ಸುನಿಲ, ಸೃಷ್ಟಿ ನಾಗೇಶ, ನಾಗವೇಣಿ ಶರಣಬಸಪ್ಪ,ನಿವೇದಿತಾ ನಿoಗನಗೌಡ ಅವರನ್ನು ಗೌರವಿಸಲಾಯಿತು. ಕಿರಣ ಪಾಟೀಲ ಪ್ರಾರ್ಥಿಸಿದರೆ ಅಂಬಾರಾಯ ಮಡ್ಡೆ ನಿರೂಪಿಸಿದರು ದಾನೇಶ್ವರಿ ಶಿವರಾಜ ಕಾಳಗಿ ವoದಿಸಿದರು.
