ಸಂಗಮೇಶ ಎನ್ ಜವಾದಿ ರಚಿಸಿದ 'ವೈಚಾರಿಕ ಚಿಂತನೆ' ಕೃತಿ ಲೋಕಾರ್ಪಣೆ

ಸಂಗಮೇಶ ಎನ್ ಜವಾದಿ ರಚಿಸಿದ 'ವೈಚಾರಿಕ ಚಿಂತನೆ' ಕೃತಿ ಲೋಕಾರ್ಪಣೆ

 ಸಂಗಮೇಶ ಎನ್ ಜವಾದಿ ರಚಿಸಿದ 'ವೈಚಾರಿಕ ಚಿಂತನೆ' ಕೃತಿ ಲೋಕಾರ್ಪಣೆ 

ಬಸವಕಲ್ಯಾಣ: ಸಾಹಿತಿ,ಲೇಖಕ,ಪತ್ರಕರ್ತ, ಬಸವ ತತ್ವ ಪ್ರಚಾರಕ ಶರಣ ಸಂಗಮೇಶ ಎನ್ ಜವಾದಿ ರಚಿಸಿದ “ವೈಚಾರಿಕ ಚಿಂತಕರು” ಕೃತಿಯನ್ನು ಬಸವಾದಿ ಶರಣರ ಪವಿತ್ರ ಭೂಮಿ ಬಸವಕಲ್ಯಾಣದ 

ಹರಳಯ್ಯ ಗವಿಯ ಆವರಣದಲ್ಲಿ ಜರುಗುತ್ತಿರುವ 

ಶರಣ ವಿಜಯೋತ್ಸವ ನಾಡ ಹಬ್ಬ ಕಾರ್ಯಕ್ರಮದಲ್ಲಿ ಇಂದು ಬುಧವಾರ ಮುಂಜಾನೆ 11 ಗಂಟೆಗೆ ನಡೆಯುವ ಹುತಾತ್ಮ ದಿನಾಚರಣೆ ಪ್ರದಾನ ಸಮಾರಂಭದಲ್ಲಿ ಲೋಕಾರ್ಪಣೆ ಆಗಲಿದೆ. 

ಕಲ್ಯಾಣ ಮಾಹಾಮನೆ ಮಾಹಾಮಠ ಗುಣತೀರ್ಥವಾಡಿ ಬಸವಕಲ್ಯಾಣದ ಪರಮ ಪೂಜ್ಯರಾದ ಶ್ರೀ ಬಸವಪ್ರಭು ಸ್ವಾಮಿಜಿ, ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಮುಖ್ಯಸ್ಥೆ ಶರಣೆ ಇಂದುಮತಿ ಗಾರಂಪಳ್ಳಿ ಮಾತಾಜಿ,

ಹಿರಿಯ ಸಾಹಿತಿ ಸೋಮನಾಥ ಯಾಳವಾರ ರವರು ಕೃತಿ ಲೋಕಾರ್ಪಣೆ ಮಾಡುವರು. ದಿವ್ಯ ನೇತೃತ್ವ ಹರಳಯ್ಯ ಗವಿ ಮುಖ್ಯಸ್ಥೆ ಶರಣೆ ಗಂಗಾಂಬಿಕೆ ಅಕ್ಕನವರು ವಹಿಸುವರು.

ಶರಣ ನಾಗಯ್ಯಾ ಸ್ವಾಮಿ, ವೈಜನಾಥ ಕಾಮಶೆಟ್ಟಿ , ಶಂಕ್ರಪ್ಪ ಪಾಟೀಲ, ಜಗನ್ನಾಥ ರಾಚೋಟಿ, ದತ್ತಾತ್ರೇಯ ಬಾಂದೇಕರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಶರಣ ಶಿವರಾಜ್ ಶಾಶೆಟ್ಟಿ ಕೋಶಾಧ್ಯಕ್ಷರು ಬಸವೇಶ್ವರ ದೇವಸ್ಥಾನ ವಿಶ್ವಸ್ಥ 

ಸಮಿತಿ ಬಸವಕಲ್ಯಾಣ ರವರು ವಹಿಸುವರು.

ಸಮಾಜದ ಅನೇಕ ವಿಷಯನೊಳಗೊಂಡ ಆಯ್ದ ಲೇಖನಗಳ ಗೊಚ್ಚವೇ ಈ ಕೃತಿಯಾಗಿದೆ. ಕೃತಿಯಲ್ಲಿ 

ಸಮಾಜ ಸುಧಾರಕರ, ವೈಚಾರಿಕ ಚಿಂತಕರ ಹಾಗೂ ಸಾಹಿತಿಗಳ ಕಿರು ಪರಿಚಯ ಭಾವದಿಂದ ಕೂಡಿದ ಕೃತಿ ಇದಾಗಿದ್ದು. ಎಲ್ಲರೂ ಕೃತಿಯನ್ನು ಕೊಂಡು ಓದಲೇಬೇಕಾದ ಉತ್ತಮ ಕೃತಿ ಇದಾಗಿದೆ.