ಸಮಾರೋಪ - ಪ್ರಶಸ್ತಿ- ಸರ್ವೋದಯ ಸಮ್ಮೇಳನಕ್ಕೆ ತೆರೆ

ಸಮಾರೋಪ - ಪ್ರಶಸ್ತಿ- ಸರ್ವೋದಯ ಸಮ್ಮೇಳನಕ್ಕೆ ತೆರೆ
ಬಹುತ್ವ ಭಾರತದ ಕಲ್ಪನೆ ಆಗಲಿ- ಸತ್ಯಾನಂದ ಪಾತ್ರೋಟ
ಹುಲಸೂರು:
ಸಾಹಿತ್ಯ ಎಂದರೆ ಸಮಾನತೆ ಸಾಹಿತ್ಯ ಜೀವನ ಪ್ರೀತಿ ಭಕ್ತರ ಕಷ್ಟ ಸುಖಗಳನ್ನು ಆಲಿಸಬೇಕು ಮಠಾಧೀಶರು ಬರೆಯದ ಬರಹ,ಹಾಡದ ಹಾಡುಗಾರರು,ನರ್ತಿಸದ ನರ್ತಕಾರರ ಗುರುತಿಸಬೇಕು.ಮಣ್ಣು,ನೆಲ,ನೀರು ಯಾವುದೇ ಮಠಾಧೀಶರು,ಸಾಹಿತಿಗಳು ನಿಮ್ಮ ಮನದ ಶೋಷಿತರನ್ನು ಎತ್ತಿ ಹಿಡಿಯಬೇಕು.ಜಾತಿ,ಮತ,ಮೀರಿದ ಸಾಹಿತ್ಯ, ಮಠಾಧೀಶರು ರಚಿಸಬೇಕಾಗಿದೆ.ಬರಹಗಾರರು ಜಾತಿ ಸಮಾವೇಶದಲ್ಲಿ ಭಾಗವಹಿಸವವರನ್ನು ಪ್ರಶ್ನಿಸಿದ್ದಾರೆ.? ಒಳ ಒಪ್ಪಂದ ಹೊರ ಒಪ್ಪಂದ ಸಾಹಿತಿಗಳಿದ್ದಾರೆ.ನಿಜವಾದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ.ಹಸಿವಿಗೆ ಯಾವ ಜಾತಿಯಿದೆ ಎಂದು ಪ್ರಶ್ನಿಸಿದವರು ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ನುಡಿದರು
ಭಾರತದಲ್ಲಿ ವಿಶ್ವ ಮಾನವತೆ ಭಾವನೆ ಮೂಡಿಸಲು ಶ್ರೇಷ್ಠ ಕನಿಷ್ಠ ಅಲ್ಲ ಸಹೋದರತೆ,ಸಮಾನತೆ ಹೊಂದಿದಾಗ ಮಾತ್ರ ವಿಶ್ವಮಾನತೆ ದೊರಕಬೇಕು ಜೀವನ ಸಾಧನೆ ಆಗಬೇಕಾಗಿದೆ ಎಂದರು.
ಸಾಮಾಜಿಕ ನ್ಯಾಯದ ಮಠ ಉರಿಲಿಂಗಪೆದ್ದಿ ಮಠದ ಅಣು ಸ್ಥಾವರ ನಡೆಯಬೇಕಾಗಿದೆ ಎಂದು ಕೆಲಸ ಕಡಿಮೆ ಹೆಚ್ಚು ಅಲ್ಲ ಸಮಾನವೆಂದರು.ಮನುಷ್ಯ ಸಂಬಂಧ ಬೆಸೆಯೋಣವೆಂದರು ಪ್ರೊ.ಅಲ್ಲಮಪ್ರಭು ಬೆಟ್ಟದೂರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಪೂಜ್ಯ ಅಕ್ಕ ಡಾ.ಗಂಗಾಂಬಿಕಾ ಪಾಟೀಲ ಶರಣರ ಚಿಂತನೆಗಳಲ್ಲಿ ಸಮಾ ನತೆ,ಸ್ವಾತಂತ್ರ್ಯ ಜೊತೆಗೆ ಮಹಿಳೆ ಮುಂದೆ ಬರಬೇಕು ಎಂದು ಹೇಳಿದರು.ಮಲ್ಲಿಕಾರ್ಜುನ ಗುಂಗೆ,ಚಂದ್ರಕಾಂತ ಗದ್ದುಗೆ,ಸಂಸದರಾದ ಸಾಗರ ಖಂಡ್ರೆ , ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ವಿಜಯಸಿಂಗ್ ಮಾತನಾಡಿದರು. ಉರಿಲಿಂಗಪೆದ್ದಿ ಪ್ರಶಸ್ತಿಯನ್ನು ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಡಾ.ಹನುಮಂತರಾವ ದೊಡ್ಡಮನಿ ಅವರಿಗೆ ಮತ್ತು ಕಾಳವ್ವೆ ಪ್ರಶಸ್ತಿ ಅಕ್ಕ ಡಾ.ಗಂಗಾಂಬಿಕ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು. ,ಸಮ್ಮೇಳನಾಧ್ಯಕ್ಷರಾದ ಡಾ.ಚನ್ನವೀರ ಶಿವಾಚಾರ್ಯರು, ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಇತರರು ಇದ್ದರು
ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಸುರೇಶ ಕಾನೇಕರ್ ವಂದಿಸಿದರು.