ಸಾಧನೆ ಮತ್ತು ಸೇವೆಯ ಆದರ್ಶ ರೂಪ: ಕೇಮಶೆಟ್ಟಿಗೆ ಯುವ ನಾಯಕ ಪುರಸ್ಕಾರಕ್ಕೆ ಆಯ್ಕೆ

ಸಾಧನೆ ಮತ್ತು ಸೇವೆಯ ಆದರ್ಶ ರೂಪ: ಕೇಮಶೆಟ್ಟಿಗೆ ಯುವ ನಾಯಕ ಪುರಸ್ಕಾರಕ್ಕೆ ಆಯ್ಕೆ

ಸಾಧನೆ ಮತ್ತು ಸೇವೆಯ ಆದರ್ಶ ರೂಪ: ಕೇಮಶೆಟ್ಟಿಗೆ ಯುವ ನಾಯಕ ಪುರಸ್ಕಾರಕ್ಕೆ ಆಯ್ಕೆ 

ವಿಜಯಪುರ: ಕಲೆ, ಸಂಸ್ಕೃತಿ ಮತ್ತು ಯುವ ಪ್ರತಿಭೆಗಳ ಉತ್ತೇಜನದಲ್ಲಿ ಮಹತ್ವದ ಪಾತ್ರವಹಿಸಿ ಸಮಾಜದಲ್ಲಿ ಆದರ್ಶ ಸೇವೆ ಸಲ್ಲಿಸಿರುವ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ) ಸಂಸ್ಥೆಯ ಅಧ್ಯಕ್ಷರು ಸನ್ಮಾನ್ಯ ಶ್ರೀ ಸತೀಶ ಕೇಮಶೆಟ್ಟಿ ಅವರಿಗೆ “ಯುವ ನಾಯಕ ಪುರಸ್ಕಾರ – 2026” ನೀಡಲಾಗುತ್ತಿದೆ.

‘ರಾಷ್ಟ್ರೀಯ ಯುವ ದಿನಾಚರಣೆ’ ಅಂಗವಾಗಿ ಕವಿತ್ತ ಕರ್ಮಮಣಿ (ರಿ) ನಾಗರಾಮುನ್ನೊಳ್ಳಿ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಯುವ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಈ ವರ್ಷ ಶ್ರೀ ಕೇಮಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಯುವ ಪೀಳಿಗೆಯಲ್ಲಿ ಕಲೆ–ಸಂಸ್ಕೃತಿ ಅರಿವು ಬೆಳೆಸುವುದು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು, ಶಾಲಾ–ಕಾಲೇಜುಗಳಲ್ಲಿ ತರಬೇತಿ ಶಿಬಿರಗಳು ಮತ್ತು ಪ್ರದರ್ಶನಗಳು ಆಯೋಜಿಸುವುದು ಸೇರಿದಂತೆ ಹಲವು ಸಾಮಾಜಿಕ–ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಶ್ರೀ ಕೇಮಶೆಟ್ಟಿ ಅವರು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಯುವ ಕಲಾವಿದರಿಗೆ ವೇದಿಕೆ ನಿರ್ಮಿಸುವ ಕೆಲಸದಲ್ಲಿ ಇವರ ಸಂಸ್ಥೆ ಮಹತ್ವದ ಪಾತ್ರವಹಿಸಿದೆ. ಹೊಸ ಪ್ರತಿಭೆಗಳನ್ನು ಹುಡುಕಿ, ಅವರಿಗೆ ಮಾರ್ಗದರ್ಶನ ನೀಡಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಇವರ ಸಾಧನೆ ಗಮನಾರ್ಹವಾಗಿದೆ.

ಕವಿತ್ತ ಕರ್ಮಮಣಿ (ರಿ), ನಾಗರಾಮುನ್ನೊಳ್ಳಿ ಫೌಂಡೇಶನ್ ಪ್ರಮುಖರು ಹೇಳುವಂತೆ,

“ಕಲೆ, ಸಂಸ್ಕೃತಿ ಮತ್ತು ಯುವ ಶಕ್ತಿಯನ್ನು ಒಗ್ಗೂಡಿಸಿ ಸಮಾಜ ನಿರ್ಮಾಣಕ್ಕೆ ಸತೀಶ ಕೇಮಶೆಟ್ಟಿ ನೀಡಿರುವ ಕೊಡುಗೆ ಅಪರೂಪದದು. ಅವರ ಸಾಮರ್ಥ್ಯ ಮತ್ತು ಸೇವೆಗೆ ಗೌರವ ಸೂಚಿಸುವ ಉದ್ದೇಶದಿಂದ ಈ ಪುರಸ್ಕಾರ ದಿ. 25 ಜನೆವರಿ 2026 ರಂದು ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಪುರಸ್ಕಾರ ಪ್ರಕಟವಾದ ಬಳಿಕ ವಿಜಯಪುರದ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಿಕ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ. ಅನೇಕರು ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.