ಗಡಿ ಕನ್ನಡಿಗರ ಉತ್ಸವ, ರಾಜ್ಯ ಮಟ್ಟದ ಸಾಹಿತ್ಯ ಸಂಗೀತ ಗೋಷ್ಠಿ

ಗಡಿ ಕನ್ನಡಿಗರ ಉತ್ಸವ, ರಾಜ್ಯ ಮಟ್ಟದ ಸಾಹಿತ್ಯ ಸಂಗೀತ ಗೋಷ್ಠಿ

ಗಡಿ ಕನ್ನಡಿಗರ ಉತ್ಸವ, ರಾಜ್ಯ ಮಟ್ಟದ ಸಾಹಿತ್ಯ ಸಂಗೀತ ಗೋಷ್ಠಿ 

ಕಮಲನಗರ ೬೯ನೇ ಕರ್ನಾಟಕ ರಾಜ್ಯೋತ್ಸವ ಗಡಿ ಕನ್ನಡಿಗರ ಉತ್ಸವ, ರಾಜ್ಯ ಮಟ್ಟದ ಸಾಹಿತ್ಯ ಸಂಗೀತ ಗೋಷ್ಠಿ ಕರ್ನಾಟಕ ರಾಜ್ಯೋತ್ಸವ ರತ್ನ, ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರ ದಲ್ಲಿ ಶುಕ್ರವಾರ ಬೆಳಗ್ಗೆ 11-30 ಗಂಟೆಯಿಂದ ಸಂಜೆ 4-30 ಗಂಟೆ ವರೆಗೂ ಜರುಗಿತು. 

ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಬೆಂಗಳೂರು ರಾಜ್ಯಾಧ್ಯಕ್ಷರು ಡಾ. ವಿಶ್ವನಾಥ್ ಜಿ ಪಿ ಉದ್ಘಾಟನೆ ಮಾಡಿದರು. ದಿವ್ಯ ಸಾನಿಧ್ಯ. ಡಾ. ಜ್ಞಾನಸಾಗರ್ ಭಂತೆ, ಪೂಜ್ಯ ಮಚಂದ್ರನಾಥ್ ಮಹಾರಾಜರು ವಹಿಸಿದರು. ಅಧ್ಯಕ್ಷತೆ ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಅವಿನಾಶ್ ರಾಯ್ ,ಪ್ರಶಸ್ತಿ ಪ್ರದಾನದ ಅಧ್ಯಕ್ಷತೆ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ್ ಪಾಟೀಲ್ ಸಿರಾನೂರು ವಹಿಸಿದರು.

 ಮುಖ್ಯ ಅತಿಥಿಗಳಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ ಸಂಜೀವ್ ಕುಮಾರ್ ಅತಿವಾಳೆ ನಗರ ಸಭೆ ಸದಸ್ಯ ಎಂ ಡಿ ಗೌಸ್ ನಗರ ಸಭೆ ಸದಸ್ಯ ದಿಗಂಬರ ಮಡಿವಾಳ ಇಂಜಿನಿಯರ್ ಹಾವಶೆಟ್ಟಿ ಪಾಟೀಲ್ ಡಾ ಸತೀಶ್ ಮೂಡಬಿ, ಮಾರುತಿಬೌದ್ಧೆ.ಇವರೆಲ್ಲರ ಉಪಸ್ಥಿತಿಯಲ್ಲಿ ಕಮಲನಗರ ತಾಲೂಕಿನ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಂಗಮೇಶ್ವರ ಎಸ್ ಮುರ್ಕೆಯವರಿಗೆ *ಕರ್ನಾಟಕ ರಾಜ್ಯೋತ್ಸವ ರತ್ನ* ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಡಿ ಭಾಗದಲ್ಲಿರುವ ಹೊಳೆಸಮುದ್ರ ಗ್ರಾಮದ ಮುರ್ಕೆ ಇವರು ವಿಶ್ವ ಕನ್ನಡಿಗರ ಸಂಸ್ಥೆ (ರಿ) ಕರ್ನಾಟಕ ರಾಜ್ಯ ಜಿಲ್ಲಾ ಘಟಕ ಬೀದರ, ಹಾಗೂ ಗಡಿ ಕನ್ನಡಿಗರ ಉತ್ಸವ -೬೯ನೇ ಕರ್ನಾಟಕ ರಾಜ್ಯೋತ್ಸವ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿರುವ ತಂಡಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ತಿಳಿಸಿದ್ದಾರೆ.