ಅಂತರಾಷ್ಟ್ರೀಯ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಕಲಬುರಗಿಯಲ್ಲಿ:* *ಜಾದೂ ವಿನೂತನ ಪ್ರಯೋಗ ಮೆಂಟಲಿಸಂ ಪ್ರದರ್ಶನ ನಾಳೆ

*ಅಂತರಾಷ್ಟ್ರೀಯ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಕಲಬುರಗಿಯಲ್ಲಿ:*
*ಜಾದೂ ವಿನೂತನ ಪ್ರಯೋಗ ಮೆಂಟಲಿಸಂ ಪ್ರದರ್ಶನ ನಾಳೆ*
ಕಲಬುರಗಿ: ಇಂದ್ರಜಾಲ ಪ್ರದರ್ಶನದಲ್ಲಿ ವಿನೂತನ ಪ್ರಯೋಗಗಳಾಗುತ್ತಿದ್ದು ಅಂತರಾಷ್ಟ್ರೀಯ ಕಲಾವಿದರಾದ ಕುದ್ರೋಳಿ ಗಣೇಶ್ ಅವರ ವಿನೂತನ ಪ್ರಯೋಗ ಮೆಂಟಲಿಸಂ ಮೈಂಡ್ ಮ್ಯಾಜಿಕ್ ಭಾನುವಾರ ಸಾಯಂಕಾಲ 6 ಗಂಟೆಗೆ ಕಲಬುರಗಿ ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ಗಾಟ್ ಟ್ಯಾಲೆಂಟ್ ಇಂಡಿಯಾದ ಫೈನಲಿಸ್ಟ್ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ 12 ಪ್ರಶಸ್ತಿ ಪುರಸ್ಕೃತ ಕುದ್ರೋಳಿ ಗಣೇಶ್ ಮೈಂಡ್ ಮ್ಯಾಜಿಕ್ ಮೆಂಟಲಿಸಂ ಎನ್ನುವ ಹೊಸ ಜಾದೂ ಪ್ರಕಾರವನ್ನು ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ , ಅಡಿಲೈಡ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಅಪಾರ ಖ್ಯಾತಿ ಪಡೆದ ಈ ವಿಶಿಷ್ಟ ಜಾದೂವನ್ನು ಕಲಬುರಗಿಯ ಜನತೆಗಾಗಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಇದು ವಿಜ್ಞಾನ ಮನಶಾಸ್ತ್ರಗಳ ಸಮ್ಮಿಲನದ ವಿಶೇಷ ಮ್ಯಾಜಿಕ್ ಕಲೆಯಾಗಿದೆ. ಮೈಂಡ್ ಮ್ಯಾಜಿಕ್ ಎರಡು ಗಂಟೆಗಳ ಕಾಲಾವಧಿಯ ಪ್ರದರ್ಶನವಿದ್ದು ಮನೋಭ್ರಮೆ ಮತ್ತು ಜಾದೂ ಚಮತ್ಕಾರಗಳ ಮನರಂಜನೆ ಕೂಡಾ ಒಳಗೊಂಡಿದೆ. ಮೈಂಡ್ ರೀಡಿಂಗ್, ಮನಸ್ಸು ಮನಸ್ಸಿನ ನಡುವೆ ಇರುವ ಅಗೋಚರ ಸಂಪರ್ಕ ಟೆಲಿಪತಿ, ಪಂಚೇಂದ್ರಿಯಗಳ ಪ್ರಜ್ಞೆಯ ಮೀರಿ ಆರನೇ ಇಂದ್ರಿಯದ ಅನುಭೂತಿಯ ವಿಸ್ಮಯ ಸಂಗತಿ, ಮುಂಬರುವ ವಿಚಾರಗಳನ್ನು ಪೂರ್ವದಲ್ಲಿ ಸೂಚಿಸುವ ಭವಿಷ್ಯ ವಾಣಿ ಸೇರಿದಂತೆ ಪ್ರೇಕ್ಷಕರನ್ನು ಸಂಮೋಹನಗೊಳಿಸುವ ಅಪೂರ್ವ ಜಾದೂ ಪ್ರಯೋಗ ಒಳಗೊಂಡಿದೆ. ಎಂದು ಕುದ್ರೋಳಿ ಗಣೇಶ್ ಅಭಿಪ್ರಾಯ ಪಡುತ್ತಾರೆ. ವೈದ್ಯರು, ಇಂಜಿನಿಯರ್ ಗಳು, ಸರ್ಕಾರಿ ಮಟ್ಟದ ಹಿರಿಯ ಅಧಿಕಾರಿಗಳು, ಉದ್ಯಮಿಗಳು ಲೆಕ್ಕಪರಿಶೋಧಕರು ಮುಂತಾದ ಕ್ಷೇತ್ರಗಳ ಜನರು ತುಂಬ ಪ್ರಶಂಸೆ ನೀಡಿ ಈಗಾಗಲೇ ಮೈಂಡ್ ಮ್ಯಾಜಿಕ್ ಪ್ರದರ್ಶನಕ್ಕೆ ವ್ಯಾಪಕ ಬೇಡಿಕೆ ಉಂಟಾಗಿದೆ. ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಮಾತ್ರ ಪ್ರವೇಶಕ್ಕೆ ಅವಕಾಶವಿರುವ ಮೈಂಡ್ ಮ್ಯಾಜಿಕ್ ವಯಸ್ಕರನ್ನು ನಿಬ್ಬೆರಗಾಗಿಸುವ ವಿಸ್ಮಯ ಲೋಕ ಸೃಷ್ಟಿಯಾಗಲಿದೆ. ಈಗಾಗಲೇ ಜಾದೂನ ಹೊಸ ಪ್ರಯೋಗಗಳಾದ ಶಿಕ್ಷಣಕ್ಕಾಗಿ ಜಾದೂ ಟ್ರಾಫಿಕ್ ಜಾಗೃತಿಗಾಗಿ ಜಾದೂ, ಸ್ವಚ್ಛತೆಗಾಗಿ ಜಾದೂ, ಮಾದಕ ದ್ರವ್ಯ ವಿರೋಧಿ ಜಾಗೃತಿಗಾಗಿ ಜಾದು, ಪ್ರಕೃತಿ ಉಳಿಸಿ ಜಾಗೃತಿ ಜಾದೂ ಮುಂತಾದುವು ಜನಮೆಚ್ಚುಗೆಗೆ ಪಾತ್ರವಾಗಿವೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಸಂಘ, ಹೋಟೆಲ್ ಬೇಕರಿ, ವಸತಿಗೃಹ ,
ಮಾಲೀಕರ ಸಂಘ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.