ಡಿ.11ರಿಂದ ಮಾಣಿಕಪ್ರಭು ದತ್ತ ಜಯಂತಿ ಜಾತ್ರೆ ಆರಂಭ: ಆನಂದರಾಜ ಪ್ರಭು ಸುದ್ದಿ ಗೋಷ್ಠಿ
ಡಿ.11ರಿಂದ ಮಾಣಿಕಪ್ರಭು ದತ್ತ ಜಯಂತಿ ಜಾತ್ರೆ ಆರಂಭ: ಆನಂದರಾಜ ಪ್ರಭು ಸುದ್ದಿ ಗೋಷ್ಠಿ
ಹುಮ್ನಾಬಾದ. ಡಿ.6: ಬೀದರ ಜಿಲ್ಲೆಯ ಹುಮ್ನಾಬಾದ ತಾಲ್ಲೂಕಿನ ಮಾಣಿಕ ನಗರದ ಮಾಣಿಕ ಪ್ರಭು ಶ್ರೀ ದತ್ತ ಮಹಾರಾಜರ ಜಯಂತಿ ಉತ್ಸವವು ಇದೇ ಡಿ.11 ರಿಂದ 15ರ ವರೆಗೆ ಜಾತ್ರೆ ನಡೆಯಲಿದೆ ಎಂದು ಸಂಸ್ಥಾನದ ಕಾರ್ಯದರ್ಶಿ ಗಳಾದ ಶ್ರೀ ಆನಂದರಾಜ ಪ್ರಭು ಮಹಾರಾಜ ಅವರು ಇಂದಿಲ್ಲಿ ತಿಳಿಸಿದರು. ಅವರು ಗುರುವಾರ ಸಂಜೆಯ ವೇಳೆಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಶ್ರೀ ದತ್ತ ಮಾಣಿಕ ಪ್ರಭು ಜಾತ್ರೆಗೆ ಇಡೀ ದೇಶದ ನಾನಾ ರಾಜ್ಯಗಳಾದ ಮಹಾರಾಷ್ಟ್ರ ,ಹೈದರಾಬಾದ್, ಕರ್ನಾಟಕ,ಕೇರಳ, ತಮಿಳುನಾಡು, ದೆಹಲಿ, ಹೀಗೆ ಹಲವಾರು ರಾಜ್ಯದ ಭಕ್ತರು ಆಗಮಿಸುತ್ತಾರೆ. ಆ ಜಾತ್ರೆಯ ನಿಮಿತ್ತ ವಿವಿಧ ಸಂಗೀತ ಕಲಾವಿದರು ಆಗಮಿಸುತ್ತಾರೆ. ವಿಶೇಷವಾಗಿ ಸಂಗೀತ ದರ್ಬಾರ್, ನ್ರತ್ಯ ಕಾರ್ಯಕ್ರಮ ದೇವರ ಪುಜೆ,ಅನ್ನ ದಾಸೋಹ, ವಿವಿಧ ಸಂಸ್ಕೃತಿಗಳ ಕಾರ್ಯಕ್ರಮಗಳು ಸುಮಾರು ಐದು ದಿವಸಗಳ ಕಾಲ ಮಾಣಿಕ ಪ್ರಭು ದತ್ತ ಮಹಾರಾಜರ ಜಯಂತಿ ಪ್ರತಿವರ್ಷದಂತೆ ಈ ವರ್ಷವು ಜಾತ್ರೆ ಬಹಳ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀ ಆನಂದರಾಜ ಅವರು ಮಾಹಿತಿ ತಿಳಿಸಿದರು.