ಜೀವಿ ನಶ್ವರ ದೇವ ಶಾಶ್ವತ

ಜೀವಿ ನಶ್ವರ ದೇವ ಶಾಶ್ವತ
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 13ನೇ ದಿನದಂದು ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , ಜಗತ್ತಿನ ಇತಿಹಾಸದಲ್ಲಿ ಶರಣರು ಮೊಟ್ಟ ಮೊದಲು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿದರು .ಅನುಭವ ಮಂಟಪದಲ್ಲಿ ಶಿರವಾಗಿ ಹೊಕ್ಕವರೆಲ್ಲ ನಿಜಲಿಂಗ ಪದವಿಯನ್ನು ಪಡೆದರು. ಇದು ಬ್ರಹ್ಮ ವಿಷ್ಣು ಪದವಿಗಿಂತ ಶ್ರೇಷ್ಠ ಪದವಿಯಾಗಿದೆ .ಜಗತ್ತಿನಲ್ಲಿ ಅಧ್ಯಾತ್ಮ ಚರ್ಚೆ ನಡೆದ ಸ್ಥಳಗಳಿವೆ ,ಭಜನೆ ಕೀರ್ತನೆ ಮಾಡಿದ ಸ್ಥಳಗಳಿವೆ .ಆದರೆ ವೈಚಾರಿಕ ನೆಲೆಯುಳ್ಳ ಸಮಗ್ರ ಅಧ್ಯಾತ್ಮಿಕ ಮಂಥನವಾಗಿದ್ದು ಅನುಭವ ಮಂಟಪದಲ್ಲಿ ಮಾತ್ರ .
ಸಾವಿಲ್ಲದ ಮನೆಯ ಸಾಸಿವೆ ಸಿಗುವುದು ಎಷ್ಟು ಕಷ್ಟವೋ ಸುಖ ದುಃಖಗಳಿಲ್ಲದ ಮನೆ ಸಿಗುವುದು ಕೂಡ ಅಷ್ಟೇ ಕಷ್ಟವಾಗಿದೆ .ದೇವನು ಜೀವನಿಗೆ ಪರಿಪೂರ್ಣ ಸುಖ ಕೊಡುವುದಿಲ್ಲ .ಕೊರೆತೆಯುಳ್ಳ ಜೀವನವೇ ಕೊಡುತ್ತಾನೆ . ದೇವತೆಗಳು ಸುಖ ದುಃಖ ಸಾವು ನೋವು ಲೌಕಿಕತೆ ಇದ್ದವರೇ ಆಗಿದ್ದಾರೆ .ನಿರಾಕಾರ ಏಕೈಕ ದೇವರು ಮಾತ್ರ ಇವೆಲ್ಲವುಗಳಿಂದ ನಿರ್ಲಿಪ್ತನಾಗಿದ್ದಾನೆ . ಮನುಷ್ಯ ಮರೆವಿನಿಂದ ಅಹಂಕಾರದಿಂದ ಮೆರೆಯಬಾರದು .ಹುಟ್ಟಿದ ಮಾನವನಿಗೆ ಸಾವಿದೆ ಇದು ಖಚಿತ ಏಕೆಂದರೆ ಸೂರ್ಯ ಭೂಮಿಗಳಿಗೂ ಒಂದು ದಿನ ಅಳಿವಿದೆ ಅಂದಮೇಲೆ ಮಾನವನ ಸಾವು ಇನ್ನಾವ ಲೆಕ್ಕಕ್ಕೆ ? ಎಂದು ಪ್ರಶ್ನಿಸಿದರು .ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಬದುಕು ಅಶಾಶ್ವತವಾಗಿದೆ ದೇವರೊಬ್ಬನೇ ಶಾಶ್ವತ .ಅವನಿಗೆ ಹುಟ್ಟಿಲ್ಲ ಸಾವಿಲ್ಲ ಜಗಕ್ಕೆ ಒಬ್ಬನೇ ದೇವರು ಅವನೇ ಪಶುಪತಿ ಜಗವು ದೇವನ ವಿಚಿತ್ರ ಲೀಲಿಯಾಗಿದೆ . ಈ ಭೂಮಿ ಜಗದೀಶನಾಡುವ ನಾಟಕ ರಂಗವಾಗಿದೆ
ಚನ್ನ ಬಸವಣ್ಣನವರು ತಮ್ಮ ಕರುಣಹಸಿಗೆಯಲ್ಲಿ ಮಾನವ ದೇಹದ ದಶ ವಾಯುಗಳನ್ನು ಹೇಳುತ್ತಾರೆ. ಪ್ರಾಣ ವಾಯು ಇರುವವರೆಗೂ ಮನುಷ್ಯ ಜೀವಂತವಾಗಿರುತ್ತಾನೆ. ಶಿವ ದೇಹದಲ್ಲಿದ್ದಾಗ ಮನುಷ್ಯ ಜೀವಂತವಾಗಿರುತ್ತಾನೆ. ಶಿವ ದೇಹದಿಂದ ಬೇರ್ಪಟ್ಟಾಗ ಮಾನವ ಶವವಾಗುತ್ತಾನೆ. ಹುಟ್ಟಿದಾಗ ಜೀವನೊಂದಿಗೆ ಬಂದಿರುವ ದೇಹವೇ ಸತ್ತಾಗ ಜೊತೆಗೆ ಹೋಗುವುದಿಲ್ಲ . ಆದ್ದರಿಂದ ದುಡಿದು ಗಳಿಸಿದ ಸಂಪತ್ತು ನಮ್ಮೊಂದಿಗೆ ಬರುವುದಿಲ್ಲ. ಮಾನವ ಆಸ್ತಿಗಾಗಿ ಹಪಾಹಪಿಸಬಾರದು . ಗಳಿಸಿದರಲ್ಲಿ ಬಹುಪಾಲನ್ನು ದಾಸೋಹ ಮಾಡಬೇಕು ಎಂದು ನುಡಿದರು . ಪ್ರಸಾದ ದಾಸೋಹಿಗಳಾದ ಚಂದ್ರಕಲಾ ಕಾಶಪ್ಪ ವಾಂಜರಖೇಡ ಅವರನ್ನು ಸನ್ಮಾನಿಸಲಾಯಿತು
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ್ ಪಾಳ ,ಡಾ . ಕೆ ಎಸ್ ವಾಲಿ , ಡಾ. ಎ. ಎಸ್ ಪಾಟೀಲ್ ,ಬಂಡಪ್ಪ ಕೇಸುರ್ ಉದ್ದಂಡಯ್ಯ ಅವರು ಹಾಜರಿದ್ದರು