೨೦೨೦ ನೇ ವರ್ಷದ ಸಂಶೋಧನೆಯ ಸಂಕಲನಕ್ಕೆ ಲೇಖನಗಳ ಆಹ್ವಾನ
೨೦೨೦ ನೇ ವರ್ಷದ ಸಂಶೋಧನೆಯ ಸಂಕಲನಕ್ಕೆ ಲೇಖನಗಳ ಆಹ್ವಾನ
೨೦೨೦ ರ ಜನವರಿ ತಿಂಗಳದಿಂದ ೨೦೨೦ ರ ಡಿಸೆಂಬರ್ ತಿಂಗಳವರೆಗಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುವ ಸಂಶೋಧನಾತ್ಮಕ ಲೇಖನಗಳನ್ನು ಸಂಪಾದಿಸಿ ಕೊಡುವ ಜವಾಬ್ದಾರಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ನನಗೊಂದು ಸದಾವಕಾಶ ನೀಡಿದೆ. ಆದ ಕಾರಣ ವಿವಿಧ ಪತ್ರಿಕೆಗಳನ್ನು ಗಮನಿಸಿ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಕುರಿತ ಲೇಖನಗಳನ್ನು ಆಯ್ಕೆ ಮಾಡಿಕೊಂಡು 'ಸಂಶೋಧನೆ ೨೦೨೦' ಎಂಬ ಸಂಕಲನವನ್ನು ಸಂಪಾದಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಕಳುಹಿಸಬೇಕಾಗಿದೆ, ಆಸಕ್ತರಾದ ತಾವು ಪತ್ರಿಕೆ ಅಥವಾ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನ ಪ್ರಕಟವಾಗಿದ್ದರೆ ಆ ಲೇಖನ, ಪತ್ರಿಕೆಯ ಹೆಸರು, ಹಾಗೂ ದಿನಾಂಕವನ್ನು ತಿಳಿಸಿ ತಮ್ಮ ಸ್ವ ಪರಿಚಯ ಮತ್ತು ವಿಳಾಸ ಹಾಗೂ ಒಪ್ಪಿಗೆ ಪತ್ರದೊಂದಿಗೆ ಕೂಡಲೇ ಈ ಕೆಳಗಿನ ವಿಳಾಸಕ್ಕೆ ಲೇಖನ ಕಳುಹಿಸಲು ಮನವಿ ಮಾಡಿಕೊಳ್ಳುತ್ತೇನೆ, ಲೇಖಕರಿಗೆ ಅಕಾಡೆಮಿ ಒಂದು ಸಾವಿರ ರೂಪಾಯಿ ಗೌರವಧನದೊಂದಿಗೆ ಒಂದು ಗೌರವಪ್ರತಿಯನ್ನು ಪ್ರಕಟವಾದ ಮೇಲೆ ಕಳುಹಿಸುವರು ಎಂದು ಸಂಪಾದಕರರಾದ ಡಾ.ನಾಗಪ್ಪ ಟಿ.ಗೋಗಿಯವರು ತಿಳಿಸಿದ್ದಾರೆ. ಈ ಸಂಕಲನವನ್ನು ಹೊರ ತರಲು ಅವಕಾಶ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಲ್.ಎನ್. ಮುಕಂದ್ ರಾಜ್ ಹಾಗೂ ರಿಜಿಸ್ಟ್ರಾರ್ ಶ್ರೀ ಕರಿಯಪ್ಪ ಎನ್. ಮತ್ತು ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿಗಳಾದ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಸಿದ್ದರಾಮ ಹೊನ್ನಲ್ ಹಾಗೂ ಎಲ್ಲಾ ಸದಸ್ಯರಿಗೂ ಅನಂತ ಧನ್ಯವಾದಗಳು
ಡಾ ನಾಗಪ್ಪ ಟಿ, ಗೋಗಿ
ಮನೆ ಸಂಖ್ಯೆ ೧೬ - ೫೯, ಪ್ಲಾಟ್ ಸಂಖ್ಯೆ ೭೨
ಜೇವರ್ಗಿ ರಸ್ತೆ ಕೋಟನೂರ್ ಮಠ ಹಿಂದುಗಡೆ
ಸಿದ್ಧಶ್ರೀ ಕಾಲೋನಿ ಹೊಸ ನಗರಿ ವಸತಿ ಹತ್ತಿರ
ಕಲಬುರಗಿ - ೫೮೫೧೦೨
ಸಂಚಾರಿ -- ೯೬೮೬೧೫೩೪೮೫
Email: gogimaster80@gmail.com