ಯಾದಗಿರಿಯಲ್ಲಿ ಭಾನುವಾರ ಉಚಿತ ಆರೋಗ್ಯ ಶಿಬಿರ

ಯಾದಗಿರಿಯಲ್ಲಿ ಭಾನುವಾರ ಉಚಿತ ಆರೋಗ್ಯ ಶಿಬಿರ
ನಗರದ ಅವಿಘ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಶಿ ಚಾರಿಟೇಬಲ್ ಮತ್ತು ಎಜುಕೇಶನಲ್ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಸಂಪತ್ತು ಎಂಬ ಹೆಸರನಡಿ ಜುಲೈ 6 ರಂದು (ಭಾನುವಾರ) ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಇಲ್ಲಿನ ಲಕ್ಷ್ಮೀ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಶಶಿ ಚಾರಿಟೇಬಲ್ ಮತ್ತು ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಮುದಾಯದ ಆರೋಗ್ಯ ಮತ್ತು ಜಾಗೃತಿಗಾಗಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂಬ ಸಂದೇಶ ಜನತೆಗೆ ರವಾನಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ, ನುರಿತ ವೈದ್ಯರೊಂದಿಗೆ ನೇರ ಭೇಟಿ ಮತ್ತು ಆರೋಗ್ಯ ಶಿಕ್ಷಣ ಹಾಗೂ ಜೀವನಶೈಲಿ ಕುರಿತು ಸಲಹೆಗಳು ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ಉತ್ತಮ ಆರೋಗ್ಯವೇ ಬಲಿಷ್ಠ ಸಮಾಜದ ನಿರ್ಮಾಣಕ್ಕೆ ಸೋಪಾನ ಎನ್ನುವ ಮಾತಿನಂತೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಮಾಡಲಾಗುವದೆಂದು ಶಿರಗೋಳ್ ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7676604532 ನಂ.ಗೆ ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.
--