ಕುವೆಂಪುರವರದು ವೈಚಾರಿಕತೆಯ ದೃಷ್ಟಿಕೋನವಾಗಿತ್ತು - ಶಾಂತಗೌಡ ಪಾಟೀಲ್

ಕುವೆಂಪುರವರದು ವೈಚಾರಿಕತೆಯ ದೃಷ್ಟಿಕೋನವಾಗಿತ್ತು - ಶಾಂತಗೌಡ ಪಾಟೀಲ್

ಕುವೆಂಪುರವರದು ವೈಚಾರಿಕತೆಯ ದೃಷ್ಟಿಕೋನವಾಗಿತ್ತು - ಶಾಂತಗೌಡ ಪಾಟೀಲ್

ಶಹಾಪುರ:ಬುದ್ದ,ಬಸವ,ಅಂಬೇಡ್ಕರ್ ಅವರ ಆಶಯದಂತೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿರಬೇಕು ಜೊತೆಗೆ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂಬ ಕುವೆಂಪು ಅವರ ಆಶಯವಾಗಿತ್ತು ಎಂದು ಯಾದಗಿರಿ ಜಿಲ್ಲಾ ನಿವೃತ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ನುಡಿದರು

ನಗರದ ಶಾರದಾ ವಿದ್ಯಾನಿಕೇತನ ಬಯಲು ರಂಗ ಮಂದಿರದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆಯ ಅಂಗವಾಗಿ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಾವುದೇ ವ್ಯಕ್ತಿ ಜಾತಿಗೆ ಸೀಮಿತವಾಗಿರದೆ, ಸಮಾಜದಲ್ಲಿ ನೈತಿಕ ವ್ಯಕ್ತಿತ್ವದೊಂದಿಗೆ ಬಾಳಿ ಬದುಕಬೇಕೆಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಅಬ್ದುಲ್ ಕರೀಂ ಕನ್ಯಾ ಕೊಳ್ಳೂರು ಹೇಳಿದರು.

ಖ್ಯಾತ ವೈದ್ಯರಾದ ಡಾ. ಚಂದ್ರಶೇಖರ್ ಸುಬೇದಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕುವೆಂಪು ಜಗದ ಕವಿ ಯುಗದ ಕವಿ ಎಂದು ಪ್ರಖ್ಯಾತಿಯನ್ನು ಪಡೆದು ಕನ್ನಡ ಸಾಹಿತ್ಯದ ಮೂಲಕ ಕನ್ನಡ ಪ್ರಜ್ಞೆ, ವೈಜ್ಞಾನಿಕ ಪ್ರಜ್ಞೆ, ವೈಚಾರಿಕತೆಯ ಪ್ರಜ್ಞೆ,ಭಾವೈಕ್ಯತೆಯ ಪ್ರಜ್ಞೆ, ಮನುಜಮತ ವಿಶ್ವಪಥ ಪ್ರಜ್ಞೆ ಮೂಡಿಸಿ ಒಟ್ಟಾರೆ ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪು ರವರು ಸಾಹಿತ್ಯ ಲೋಕದ ದಿಗ್ಗಜರು ಎಂದು ಬಣ್ಣಿಸಿದರು.

20ನೇ ಶತಮಾನದ ದೈತ್ಯ ಪ್ರತಿಭೆ ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಜಾತಿ,ಮತ ನಿವಾರಣೆಯಾಗದೆ ಸಮಾಜ ಪರಿವರ್ತನೆ ಅಸಾಧ್ಯ ಎಂದು ಜಗತ್ತಿಗೆ ವಿಶ್ವಮಾನವ ಸಂದೇಶವ ಸಾರಿದ ಕುವೆಂಪುರವರ  

ಬದುಕು ಮತ್ತು ಬರಹ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ ಎಂದು ಶಹಪುರದ ಏಕದಂಡಗಿ ಮಠದ ಕಾಳಹಸ್ತೆಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು

ನಂತರದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕನ್ನ ಹಾಗೂ ಕಲಾವಿದರನ್ನ ಗುರುತಿಸಿ ಸತ್ಕರಿಸಲಾಯಿತು,ಜೊತೆಗೆ ಖ್ಯಾತ ಕಲಾವಿದ ಮೇಘನಾಥ್ ಬೆಳ್ಳಿಯವರ ಚಿತ್ರಕಲಾ ಪ್ರದರ್ಶನಗೊಂಡಿತು ಶ್ರೀ ಶಾರದಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿ.ಸತ್ಯಂರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ, ಹಿರಿಯ ಸಾಹಿತಿಗಳಾದ ನಾರಾಯಣಚಾರ್ಯ ಸಗರ,ಡಾ. ಜಾಫರ್ ಷರೀಫ್ ನಿಡಗುಂದಿ,ಶ್ರೀ ಧರ್ಮಸ್ಥಳ ಸಂಘದ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳಾದ ರೇಣುಕಾ ಎಸ್,ಗಣಿ ಸೇರಿದಂತೆ ಇನ್ನಿತರರು ಉಪಸಿತರಿದ್ದರು.

ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೂದಯ ಹಿರೇಮಠ ಶಾಸ್ತ್ರೀಯ ಸಂಗೀತ, ಮಲ್ಲಯ್ಯ ಹಿರೇಮಠ ಸುಗಮ ಸಂಗೀತ,ಸವಿತಾ ಜಾನಪದ ಸಂಗೀತ,ಸವಿತಾ ಟೋಕಾಪುರ ಭಾವಗೀತೆ,ಮನೋಹರ್ ವಿಶ್ವಕರ್ಮ ವಚನ ಗಾಯನ, ಸಿದ್ದರಾಮಯ್ಯ ಹಿರೇಮಠ ತತ್ವಪದ, ದೇವಕೆಮ್ಮ ಪೋ.ಬಿರಾದರ ಸೋಬಾನೆ ಪದಗಳು,ಲಕ್ಷ್ಮಿ ಮತ್ತು ತಂಡದವರಿಂದ ಮಹಿಳಾ ಸಮೂಹ ನೃತ್ಯ,ಬೇಬಿ ರಾಥೋಡ್ ಮತ್ತು ತಂಡದವರಿಂದ ಬಂಜಾರ ನೃತ್ಯ, ಸುನಿಲ್ ಶಿರಣಿ ಮಿಮಿಕ್ರಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಿದ್ದು ಕೆಲ್ಲೂರ ಸ್ವಾಗತಿಸಿದರು, ತಿಪ್ಪಣ್ಣ ಖ್ಯಾತನಾಳ,ನಿರೂಪಿಸಿ ವಂದಿಸಿದರು.