ಜಾತಿ ಕುರಿತು ಶರಣರ ಸ್ಪಷ್ಟ ದರ್ಶನ : ನೈತಿಕ ಜೀವನವೇ ಶ್ರೇಷ್ಠತೆ

ಜಾತಿ ಕುರಿತು ಶರಣರ ಸ್ಪಷ್ಟ ದರ್ಶನ : ನೈತಿಕ ಜೀವನವೇ ಶ್ರೇಷ್ಠತೆ

ಜಾತಿ ಕುರಿತು ಶರಣರ ಸ್ಪಷ್ಟ ದರ್ಶನ : ನೈತಿಕ ಜೀವನವೇ ಶ್ರೇಷ್ಠತೆ

ಆಚರಣೆಯಿಂದ ಲಿಂಗವಂತ – ಜಾತಿಯಿಂದಲ್ಲ : ಶರಣಬಸವ ಸ್ವಾಮಿಗಳ ಅಭಿಮತ

ಕಲಬುರ್ಗಿ: ಸ್ವಾಮಿಗಳು ಮಾತನಾಡುತ್ತಾ, “ಶರಣರು ಆಚಾರ, ನಡವಳಿಕೆ, ಒಳಹೊರೆಯ ಶುದ್ಧತೆಯಿಂದ ಲಿಂಗವಂತರಾಗುತ್ತಾರೆ – ಹುಟ್ಟಿನ ಜಾತಿಯಿಂದಲ್ಲ” ಎಂದು ಬೆಳಗಾವಿಯ ಬಸವ ಬೆಳವಿಯ ಚರಂತಿಶ್ವರ ಮಠದ ಪೂಜ್ಯ ಶರಣಬಸವ ಸ್ವಾಮಿಗಳು ಭಾವಪೂರ್ಣ ವಚನ ಉಪನ್ಯಾಸ ನೀಡಿದರು.

ಕಲಬುರಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಒಂದು ತಿಂಗಳ ವಚನ ಆಷಾಢ ಪ್ರವಚನ ಮಾಲಿಕೆಯ ಹನ್ನೊಂದನೇ ದಿನದಂದು ಪ್ರವಚನದಲ್ಲಿ ಅವರು . ಶರಣರ ಅಂತರಂಗ ಮತ್ತು ಬಹಿರಂಗ ಒಂದೇ ಆಗಿರುವುದನ್ನು ವಿವರಿಸಿದ ಅವರು, “ಲೋಕದ ಜನರಿಗೆ ಗೊತ್ತಾಗದೆ ಇದ್ದರೂ ದೇವರಿಗೆ ಎಲ್ಲವೂ ಗೊತ್ತಾಗುತ್ತದೆ” ಎಂದು ನೈತಿಕತೆಯ ಮಹತ್ವವನ್ನು ಒತ್ತಿ ಹೇಳಿದರು.

“ಹುಸೇನದ ನಾಯಿಗಳು ಬೊಗಳುವಂತೆ ಹೊಸ ಶರಣ ವಿಚಾರಗಳನ್ನೂ ಹಳೆಯ ಸಂಪ್ರದಾಯದ ವಿರೋಧಿಗಳು ವಿರೋಧಿಸುತ್ತಾರೆ”, ಎಂದು ಉಲ್ಲೇಖಿಸಿದ ಸ್ವಾಮಿಗಳು, ಶರಣ ಮಾರ್ಗವೆ ಶ್ರೇಷ್ಠ ಜೀವನದ ದಾರಿಯೆಂದು ಹೇಳಿದರು. “ಈ ಸೃಷ್ಟಿಯಲ್ಲಿ ಮಾನವನ ಹುಟ್ಟು ಲೌಕಿಕ ಸುಖಕ್ಕಾಗಿ ಅಲ್ಲ, ಅಂತರಂಗದ ದೇವರನ್ನು ಕಂಡು ದೇವತ್ವಕ್ಕೆ ಏರಲು ಆಗಿದೆ” ಎಂಬ ಶರಣದರ್ಶವನ್ನು ಜನರಿಗೆ ಮನಮುಟ್ಟುವಂತೆ ವಿವರಿಸಿದರು.

ಹಾವಿನಹಾಳ ಕಲ್ಲಯ್ಯನ ಮಗಳು ಮಡಿಕೆ ವಿಪ್ರನಿಂದ ಮುಟ್ಟಲ್ಪಟ್ಟಾಗ ಅದನ್ನು ಒಡೆದು ತೋರೆದು ವೇದಗಳು-ವಿಪ್ರರ ದ್ವಂದ್ವಬುದ್ಧಿಯನ್ನು ಶರಣರು ವಿರೋಧಿಸಿದ್ದಾರೆ ಎಂದೂ, ಶರಣರು ಗುರು, ಲಿಂಗ, ಜಂಗಮರ ಇಚ್ಛೆಗೆ ತಕ್ಕಂತೆ ಬದುಕಿದ ಪರಿಪೂರ್ಣ ವ್ಯಕ್ತಿಗಳು ಎಂದು ಶರಣಬಸವ ಸ್ವಾಮಿಗಳು ಹೇಳಿದರು.

ಈ ಸಂದರ್ಭ ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಖೂಬಾ, ವಚನ ಪಂಡಿತರಾದ ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ,ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ್ ಪಾಳಾ,ಡಾ. ಕೆ.ಎಸ್. ವಾಲಿ,ಡಾ. ಎ.ಎಸ್. ಪಾಟೀಲ್,ಬಂಡಪ್ಪ ಕೇಸುರ್,ಉದ್ದಂಡಯ್ಯ ಹಾಗೂ ಶರಣ ಅಭಿಮಾನಿಗಳು ಪ್ರವಚನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.