ದೇವರ ದಾಸಿಮಯ್ಯ ಜಯಂತಿ ಸಮಾರೋಪ ಕಾರ್ಯಕ್ರಮ ನಾಳೆ

ದೇವರ ದಾಸಿಮಯ್ಯ ಜಯಂತಿ ಸಮಾರೋಪ ಕಾರ್ಯಕ್ರಮ ನಾಳೆ
ಕಲಬುರ್ಗಿ: 2025ರ ಸಾಲಿನ ಶ್ರೀ ದೇವರ ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಸಮಾರೋಪ ಕಾರ್ಯಕ್ರಮವನ್ನು ನಾಳೆ, ಶನಿವಾರ (ದಿನಾಂಕ 12.07.2025)ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಕ್ತಂಪೂರ ಬಡಾವಣೆಯಲ್ಲಿರುವ ಶ್ರೀ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಮಿತಿಯ ಲೆಕ್ಕಪತ್ರ ವರದಿಯನ್ನು ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರುಗಳ ಸಮ್ಮುಖದಲ್ಲಿ ಓದಿ ಕೇಳಿಸಲಿದ್ದು, ಅನುಮೋದನೆಗಾಗಿ ಮಂಡಿಸಲಾಗುವುದು. ಈ ಸಂದರ್ಭದಲ್ಲಿ ಪ್ರಸಾದ ವಿತರಣೆಯೂ ಜರುಗಲಿದೆ.
ವಚನ ಸಾಹಿತ್ಯದ ಕರ್ತೃ ಶ್ರೀ ದೇವರ ದಾಸಿಮಯ್ಯನವರ ಭಕ್ತರು, ಅನುಯಾಯಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲು ಸಮಿತಿಯು ಕೋರಿದೆ.
ಈ ಕುರಿತು ವಿವರ ನೀಡಿದ ಪ್ರಚಾರ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜೇ.ಎಸ್. ವಿನೋದಕುಮಾರ್ ಅವರು, “ಈ ಕಾರ್ಯಕ್ರಮವು ಭಕ್ತಿ, ಸಮರ್ಪಣೆ ಹಾಗೂ ವಚನ ಪರಂಪರೆಯ ಮಹತ್ವವನ್ನು ಹೊಸ ಪೀಳಿಗೆಗೆ ಪರಿಚಯಿಸುವುದಾಗಿದೆ” ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಅಧ್ಯಕ್ಷರಾದ ನಾರಾಯಣರಾವ್ ಸಿಂಗಾಡೆ ಹಾಗೂ ಜಿಲ್ಲಾ ಸ್ವಕುಲಸಾಲಿ ಸಮಾಜದ ಅಧ್ಯಕ್ಷರೂ ಆಗಿರುವ ಜಿಲ್ಲಾ ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ್ ಯಳಸಂಗಿ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.