ಶಿಕ್ಷಕ ಸ್ನೇಹಿ ಪೆನಾಲ್‌ಗೆ ಬೆಂಬಲಿಸಲು ಮನವಿ

ಶಿಕ್ಷಕ ಸ್ನೇಹಿ ಪೆನಾಲ್‌ಗೆ ಬೆಂಬಲಿಸಲು ಮನವಿ

ಶಿಕ್ಷಕ ಸ್ನೇಹಿ ಪೆನಾಲ್‌ಗೆ ಬೆಂಬಲಿಸಲು ಮನವಿ

ಕಲಬುರಗಿ: ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ 2025-30ರ ಅವಧಿ ಆಡಳಿತ ಮಂಡಳಿಯ ಚುನಾವಣೆಗೆ ಶಿಕ್ಷಕರ ಸ್ನೇಹಿ ಪೆನಾಲ್‌ನ 14 ಸದಸ್ಯರು ಸ್ಪರ್ಧಿಸಿದ್ದು, ಗೆದ್ದರೆ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಳ ಸೇರಿ ಶಿಕ್ಷಕ ಸ್ನೇಹಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಮುಖಂಡ ಕೆ.ಎಚ್. ಮಲ್ಲಿಕಾರ್ಜುನ ಹೇಳಿದರು. 

ಸಂಘದ ಅಭಿವೃದ್ಧಿ, ಸದಸ್ಯರಿಗೆ ಅನುಕೂಲ ಕಲ್ಪಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಪಾರದರ್ಶಕತೆ ಮೂಲಕ ಸ್ನೇಹಮಯ ವಾತಾವರಣ ನಿರ್ಮಿಸಲಾಗುವುದು. ಸಾಲ ಪಡೆದು ಕಟ್ ಬಾಕಿದಾರರ ಮನವೊಲಿಸಿ ಹಣ ಹಿಂತಿರುಗಿಸುವAತೆ ಮಾಡಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿವಿಡೆಂಡ್ ಮೊತ್ತ ಹೆಚ್ಚಿಸಲಾಗುವುದು. ಬ್ಯಾಂಕ್‌ನಲ್ಲಿ 6.50 ಕೋಟಿ ರೂ. ಠೇವಣಿ ಇದ್ದು, 2 ಕೋಟಿ ರೂ. ಸಾಲದ ಪ್ರಮಾಣವಿದೆ. ಆರ್‌ಬಿಐ ನಿಯಮ ಅಧ್ಯಯನ ಮಾಡಿ ಷೇರುದಾರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಸಂಘದಲ್ಲಿ ಅವ್ಯವಹಾರಗಳಿಗೆ ತಡೆ ನೀಡಿ ತಪ್ಪಿತಸ್ಥರ ವಿರುದ್ಧ ದೂರು ಸಲ್ಲಿಸಲಾಗುವುದು. ಷೇರುದಾರರು ಅಕಾಲಿಕ ಮರಣ ಹೊಂದಿದರೆ 15 ಸಾವಿರ ರೂ. ಅಂತ್ಯಕ್ರಿಯೆಗೆ ನೀಡಲಾಗುವುದು ಎಂದು ಭರವಸೆ ನೀಡಿದರು. ಉತ್ತರ, ದಕ್ಷಿಣ, ಕಮಲಾಪುರ ತಾಲೂಕು ವ್ಯಾಪ್ತಿಯಲ್ಲಿ ಸಂಘಕ್ಕೆ 2500 ಸದಸ್ಯರಿದ್ದು, ಕಟಬಾಕಿದಾರರು ಹೊರತುಪಡಿಸಿ 1750 ಸದಸ್ಯರು ಮತದಾನಕ್ಕೆ ಅರ್ಹರಿದ್ದಾರೆ. ವಿಠಲರಾವ ತುಕಾರಾಮ ಸುತ್ತಾವೆ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.19ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದರು. ಪ್ರಮುಖರಾದ ಪರಮೇಶ್ವರ ಓಕಳಿ, ಮಿಟೆಸಾಬ್ ಮುಲಾ, ಅಶೋಕ ಸೋನ್ನ, ಶಿವಾನಂದ ಪಾಸೋಡೆ, ಅಂಬಾದಾಸ ಪಾಟೀಲ, ರವಿ ಮುದ್ದನ್, ಪರಮೇಶ್ವರ ದೇಸಾಯಿ, ರವಿ ಸರ್, ಚಂದ್ರಕಾAತ ಬಾಗನ, ಉಸಮಾನ ಭಾಷಾ, ಮೈನೋದ್ದಿನ್, ಹೇಮಂತ, ಕೃಷ್ಣಪ್ಪ ನಾಯಕ, ನಂದಿನಿ ಸನಬಾಳ, ಮಹಾನಂದ ಹುಲಿ, ಪ್ರಭುಲಿಂಗ ಮೂಲಗೆ, ಸಿದ್ದಪ್ಪ ಹೂಗಾರ, ರೇವಣ ಕರಕಳಿ, ಭಿಮಶಾ ಸೇರಿದಂತೆ ಇತರರಿದ್ದರು. ನಂತರ ಪತ್ರಿಕಾ ಭವನದ ಎದುರು ಶಿಕ್ಷಕ ಸ್ನೇಹಿ ಪೆನಾಲ್ ಸದಸ್ಯರು ಕರಪತ್ರ ಬಿಡುಗಡೆ ಮಾಡಲಾಯಿತು.