VVPS ವಿದ್ಯಾರ್ಥಿಗಳ ಅದ್ಭುತ ಸಾಧನೆ: OCSE ಗೆ ಆಯ್ಕೆ – ಆಡಳಿತಾಧಿಕಾರಿ ಶ್ರೀ ಸಂತೋಷ್ ಕೆ ಪಾಟೀಲ್ ರಿಂದ ಸನ್ಮಾನ

VVPS ವಿದ್ಯಾರ್ಥಿಗಳ ಅದ್ಭುತ ಸಾಧನೆ: OCSE ಗೆ ಆಯ್ಕೆ – ಆಡಳಿತಾಧಿಕಾರಿ ಶ್ರೀ ಸಂತೋಷ್ ಕೆ ಪಾಟೀಲ್ ರಿಂದ ಸನ್ಮಾನ

VVPS ವಿದ್ಯಾರ್ಥಿಗಳ ಅದ್ಭುತ ಸಾಧನೆ: OCSE ಗೆ ಆಯ್ಕೆ – ಆಡಳಿತಾಧಿಕಾರಿ ಶ್ರೀ ಸಂತೋಷ್ ಕೆ ಪಾಟೀಲ್ ರಿಂದ ಸನ್ಮಾನ

ನಗರ: VVPS ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಸಂತೋಷ್ ಕೆ ಪಾಟೀಲ್ ಅವರು Indian Association of Physics Teachers (IAPT) ಆಯೋಜಿಸಿದ್ದ ಪ್ರತಿಷ್ಠಿತ Orientation Camp for Science Excellence (OCSE) ಕಾರ್ಯಕ್ರಮಕ್ಕೆ ಆಯ್ಕೆಯಾದ ಆರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ದಕ್ಷಿಣ ವಲಯದ ಟಾಪ್ 25 ಸಾಧಕರಲ್ಲಿ ಸ್ಥಾನ ಪಡೆದಿರುವುದು ಸಂಸ್ಥೆಗೆ ಹೆಮ್ಮೆ ತಂದುಕೊಟ್ಟಿದೆ.

ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳು:

1. ನೈತಿಕ್ (ಗ್ರೇಡ್ X)

2. ತಸ್ಮಿಯಾ ಪಟೇಲ್ (ಗ್ರೇಡ್ IX)

3. ವೈಶಾಲಿ ಸಿ (ಗ್ರೇಡ್ IX)

4. ಸುಮಿತ್ ಎಚ್ (ಗ್ರೇಡ್ IX)

5. ಓಂಕಾರ್ ಪಾಟೀಲ್ (ಗ್ರೇಡ್ IX)

6. ವೀರೇಶ್ (ಗ್ರೇಡ್ IX)

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಂತೋಷ್ ಕೆ ಪಾಟೀಲ್ ಅವರು ವಿದ್ಯಾರ್ಥಿಗಳ ಶ್ರಮ, ಪರಿಶ್ರಮ ಹಾಗೂ ಗುರುಗಳ ಮಾರ್ಗದರ್ಶನವನ್ನು ಪ್ರಶಂಸಿಸಿ, OCSE ಕಾರ್ಯಕ್ರಮದ ಮುಂದಿನ ಹಂತಗಳ ಕುರಿತು ಸಮಗ್ರ ಮಾರ್ಗದರ್ಶನ ನೀಡಿದರು. ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರ ತಲುಪುವಂತೆ ಪ್ರೇರಣೆ ನೀಡಿ, ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಶುಭಾಶಯ ಕೋರಿದರು.

ವಿದ್ಯಾರ್ಥಿಗಳ ಈ ಅಪೂರ್ವ ಸಾಧನೆಗೆ ಪಾಲಕರು ಸಂತೋಷ ವ್ಯಕ್ತಪಡಿಸಿ, ಸಂಸ್ಥೆಯ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಈ ಸಾಧನೆ VVPS ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ವಿಜ್ಞಾನಾಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ವರದಿ: ಡಾ. ಅವಿನಾಶ ಎಸ್. ದೇವನೂರ