ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸುತ್ತೋಲೆ

ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ  ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸುತ್ತೋಲೆ

ಡಾ.ಶಾಲಿನಿ ರಜನಿಸ್ (ಐಎಎಸ್)ಮುಖ್ಯ ಕಾರ್ಯದರ್ಶಿ 

ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಬಳಕೆ ಕಡ್ಡಾಯ 

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸುತ್ತೋಲೆ

ಬೆಂಗಳೂರು, ಜೂನ್ 25 (ಕಳೆದ ರಾತ್ರಿ): ರಾಜ್ಯದ ಎಲ್ಲ ಸರ್ಕಾರಿ, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಹಾಗೂ ಅನುದಾನಿತ ಘಟಕಗಳು ತಮ್ಮ ಆಡಳಿತಾತ್ಮಕ ಕಾರ್ಯಗಳಲ್ಲಿ ಕನ್ನಡವನ್ನು ಶೇ 100 ರಷ್ಟು ಬಳಕೆ ಮಾಡಲೇಬೇಕೆಂದು ರಾಜ್ಯ ಸರ್ಕಾರ ಹೊಸ ಸುತ್ತೋಲೆ ಮೂಲಕ ಇನ್ನೊಮ್ಮೆ ತೀವ್ರ ಸೂಚನೆ ನೀಡಿದೆ.

ಸುತ್ತೋಲೆಯಲ್ಲಿ, “ಕನ್ನಡ ಕರ್ನಾಟಕದ ಆಡಳಿತ ಭಾಷೆ” ಎಂಬುದು 1963ರ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮವೇ ಹೊಣೆ ಹೊತ್ತ ಕಾರಣ, ಯಾವುದೇ ಕಡತ ಟಿಪ್ಪಣಿ, ಪತ್ರ ವ್ಯವಹಾರ, ನೇಮಕಾತಿ–ವರ್ಗಾವಣೆ ಆದೇಶಗಳು, ಸಭಾ ನೋಟಿಸ್ ಹಾಗೂ ಕಾರ್ಯಸೂಚಿಗಳು ಮತ್ತಷ್ಟು ಹಿಂದಿನಿಂದಲೂ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕಾದದ್ದೆಂದು ಪುನರುಚ್ಛರಿಸಲಾಗಿದೆ.

 ಪ್ರಮುಖ ನಿರ್ದೇಶನಗಳು

ಕನ್ನಡದಲ್ಲಿ ಬಂದ ಅರ್ಜಿಗೆ ಕನ್ನಡದಲ್ಲೇ ಉತ್ತರ ಯಾವುದೇ ಅರ್ಜಿ ಅಥವಾ ಪತ್ರಕಗಳಿಗೆ ಇನ್ನು ಮುಂದೆ ಇಂಗ್ಲಿಷ್ ಮಿಶ್ರಣವೂ ನಿಷೇಧ.

 ಕಛೇರಿಗಳ ನಾಮಫಲಕ, ನಮೂನೆಗಳು, ದಾಖಲೆ ಪುಸ್ತಕಗಳು— ಎಲ್ಲವೂ ಕನ್ನಡದಲ್ಲಿ.

ಕೆ.ಡಿ.ಪಿ. ಮತ್ತು ಇತರ ಜಿಲ್ಲಾ ಸಭೆಗಳ ಕಾರ್ಯಸೂಚಿ ಕನ್ನಡದಲ್ಲಿಯೇ ಪ್ರಕಟಿಸಬೇಕು; ಇಂಗ್ಲಿಷ್ ಫಾರ್ಮಾಟ್ ಅನುಮೋದನೆಗೆ ಸಲ್ಲಿಸಿದರೆ ಕಡತ ವಾಪಾಸ್.

ಸರಕಾರದ ಭಾಷಾ ನೀತಿ ಉಲ್ಲಂಘನೆ ಕಂಡುಬಂದರೆ ವ್ಯಕ್ತಿಗಳ ಮೇಲೆಯೇ ಶಿಸ್ತು ಕ್ರಮ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿ ಪ್ರಕಾರ, ಕೆಲವು ಜಿಲ್ಲಾಧಿಕಾರಿಗಳು ಮತ್ತು ಕಾಮಗಾರಿ ಇಲಾಖೆಗಳು ಇನ್ನೂ ಆಂಗ್ಲ ಭಾಷೆಯಲ್ಲೇ ದಾಖಲೆಗಳನ್ನು ಮಂಡಿಸುತ್ತಿರುವಂತೆ ಕಂಡುಬಂದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅವರ ಸೂಚನೆಯಲ್ಲಿ, “ಕಡತಗಳಲ್ಲಿ ಟಿಪ್ಪಣಿ ಕನ್ನಡದಲ್ಲಿಲ್ಲದಿದ್ದರೆ, ಅಧಿಕಾರಿಗಳು ಅದನ್ನು ಪರಿಗಣಿಸಬಾರದು” ಎಂದು ಸ್ಪಷ್ಟ ಆಜ್ಞೆ ಇತ್ತಾಗಿವೆ. ಡಾ. ಶಾಲಿನಿ ರಜನೀಶ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಕನ್ನಡ ಬಳಕೆಯಿಲ್ಲದ ಕಡತವನ್ನೇ ಒಪ್ಪಿಕೊಳ್ಳದಂತೆ ಎಲ್ಲ ವಿಭಾಗಗಳಿಗೂ ಕಠಿಣ ಸೂಚನೆ ನೀಡಿದ್ದೇವೆ. ಉಲ್ಲಂಘಿಸಿದರೆ ವೈಯಕ್ತಿಕವಾಗಿ ಜವಾಬ್ದಾರಿ ಹೊರೆತರೆಬೇಕಾಗುತ್ತದೆ.” ಎಂದು ಹೇಳಿದರು 

ಸುತ್ತೋಲೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ, ಜಿಲ್ಲಾಧಿಕಾರಿಗಳಿಗೆ, ಪೌರಸಭೆ–ಪಂಚಾಯತ್‌ಗಳಿಗೆ ಹಾಗೂ ವಿಶ್ವವಿದ್ಯಾಲಯಗಳಿಗೆ ತ್ವರಿತವಾಗಿ ರವಾಣಿ ಆಗಿದ್ದು, ಇದೇ ವಾರದೊಳಗೆ ಅನುಷ್ಠಾನ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು ತಿಳಿಸಿದರು.

ಕನ್ನಡಪ್ರಿಯ ವಲಯಗಳು ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿ, “ಇದು ಕೇವಲ ಪ್ಯಾಪರ್ ಆರ್ಡರ್ ಆಗದೆ ಜಾಗೃತಿಯ ಕಾರ‍್ಯರೂಪ ಪಡೆಯಲಿ” ಎಂದು ಆಗ್ರಹಿಸುತ್ತಿವೆ.

-