ಕಮಲಾನಗರ : ಧಾರಾಕಾರ ಮಳೆಯಿಂದ ಬಸವಕಲ್ಯಾಣ ರಸ್ತೆ ಸಂಚಾರ ಬಂದ್

ಕಮಲಾನಗರ : ಧಾರಾಕಾರ ಮಳೆಯಿಂದ ಬಸವಕಲ್ಯಾಣ ರಸ್ತೆ ಸಂಚಾರ ಬಂದ್ 

ಕಲಬುರಗಿ: ನಿನ್ನೆ ರಾತ್ರಿ ಸುರಿಯುತ್ತಿರುವ ಮಳೆಗೆ ಕಮಲಾನಗರದ ಬೋಧನ್ ನಡುವೆ ಹಳ್ಳ ತುಂಬಿ ಹರಿಯುತ್ತಿದ್ದು. ಈ ಹಳ್ಳ ಮುಂದೆ ಹೋಗಿ ಬೆಣ್ಣೆ ತೊರೆಗೆ ಸೇರುತ್ತದೆ . ಮಳೆಯಿಂದ  ಬಸವ ಕಲ್ಯಾಣಕ್ಕೆ ಹೋಗಬೇಕಾದ ಬಸ್ ಸಂಚಾರ ಬಂದಾಗಿ ಕಮಲಾನಗರ, ಭೋಧನ ದಲ್ಲಿ ನಿಂತಿವೆ. ರಾತ್ರಿ ಇಡಿ ಭೀಕರ ಮಳೆ ಸುರಿತ್ತಿರುವುದರಿಂದ  ರೈತರ ಜಮಿನಿನಲ್ಲಿ ನೀರು ನುಗ್ಗಿ ಹೆಸರು, ತೊಗರಿಬೆಳೆ ಹಾಗೂ ಉದ್ದು ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಇದರಿಂದ ಕಮಲಾನಗರ,ಭೋಧನ ರೈತರು ಕಂಗಾಲಾಗಿದ್ದಾರೆ. 

 ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕಮಲಾನಗರ, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು    ಒತ್ತಾಯಿಸಿದ್ದಾರೆ.

ವಿಪರೀತ ಮಳೆಯಿಂದ ರೈತರು ಜಮಿನಿನಲ್ಲಿ ಹೆಸರು ಹಾಗೂ ಉದ್ದು ಬೆಳೆಗಳು ಮೊಳಕೆಯೊಡೆಯುತ್ತಿವೆ, ಕೆಲವು ಬೆಳೆಗಳು ಭೂಮಿ ಮೇಲೆ ಉರುಳಿ ನಾಶವಾಗುತ್ತಿವೆ, ತೊಗರಿ ಬೆಳೆಗಳು ನೆಟೆ ಸುತ್ತು ಹೋಗಿ ರೈತರ ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ರೈತರು ಕಲ್ಯಾಣ ಕಹಳೆ ಪತ್ರಿಕೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.