ಪಂಚಮಸಾಲಿಗಳು ಜಾಗೃತರಾಗಲಿ - ವಚನಾನಂದ ಶ್ರೀಗಳು

*ಪಂಚಮಸಾಲಿಗಳು ಜಾಗೃತರಾಗಲಿ - ವಚನಾನಂದ ಶ್ರೀಗಳು*
ಹುಣಸಗಿ : ನಮ್ಮ ಪಂಚಮಸಾಲಿ ಸಮಾಜ ವಿಶಿಷ್ಟ ಹಾಗೂ ಐತಿಹಾಸಿಕ ಪರಂಪರೆಯ ಹಿನ್ನೆಲೆ ಹೊಂದಿದ್ದು ನಾವುಗಳೆಲ್ಲ ಆರ್ಥಿಕ,ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕವಾಗಿ,ಸದೃಢರಾಗಬೇಕಾದರೆ ನಮ್ಮ ಪಂಚಮಸಾಲಿ ಸಮಾಜದ ಬಂಧುಗಳು ಜಾಗೃತರಾಗಬೇಕಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾದ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಮಾಳನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಬಯಲು ಮಂಟಪದಲ್ಲಿ ಆಯೋಜಿಸಿದ ಪಂಚಮಸಾಲಿಗಳ ಮುಕ್ತ ಸಮಾಲೋಚನೆ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಮುಂದೆ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಜಾತಿಯ ಕಾಲಮಿನೊಳಗೆ ಲಿಂಗಾಯಿತ ಪಂಚಮಸಾಲಿ ಅಥವಾ ವೀರಶೈವ ಪಂಚಮಸಾಲಿ ಯಾವುದಾದರೂ ಒಂದನ್ನು ನಮೂದಿಸಬೇಕು ಎಂದು ಸಮಾಜದ ಬಂಧುಗಳಲ್ಲಿ ಮನವರಿಕೆ ಮಾಡಿಕೊಟ್ಟರು.
ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ್ ಮಾತನಾಡಿ ನಮ್ಮ ಸಮಾಜ ರಾಜಕೀಯ,ಶೈಕ್ಷಣಿಕ
ಸಾಮಾಜಿಕ,ಹಿತದೃಷ್ಟಿಯಿಂದ ಬಲಿಷ್ಠರಾಗಬೇಕಾದರೆ ಸಂಘಟನೆ ಮತ್ತು ಉತ್ತಮ ಮಾರ್ಗಗಳ ಗಂಭೀರ ಚಿಂತನೆಗಳು ಗ್ರಾಮ ಮಟ್ಟದಲ್ಲಿಆಯೋಜಿಸಬೇಕಾಗಿದೆ,ನಮ್ಮ ಸಮಾಜದ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಸಿಗಬೇಕು ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳು ಆಗಬೇಕು ಎಂದು ಆಶಿಸಿದರು.
ಈ ಸಮಾರಂಭದ ವೇದಿಕೆಯ ಮೇಲೆ ಸಮಾಜದ ಹಿರಿಯ ಮುಖಂಡರಾದ ಬಾಳಾಸಾಹೇಬ ದೇಶಮುಖ,ಮುರಿಗೆಣ್ಣ ದೇಸಾಯಿ, ದೇವೇಂದ್ರಪ್ಪ ತೋಟಗೇರ,ಶರಣು ದಂಡಿನ್,ಮೋಹನ್ ಪಾಟೀಲ ಕೊಡೆಕಲ,ಚಂದ್ರಶೇಖರ ವಕ್ರಾಣಿ,ಭೀಮನಗೌಡ ಬಿರಾದಾರ ಗುರು ಅಂಗಡಿ ಪ್ರಭುಗೌಡ ಗದಿಗೆಪ್ಪಗೋಳ,ವೀರಣ್ಣ ಚಂಗಳಿ,ಅಶ್ವಿನಿ ಮೇಲಿನಮನಿ,
ವೀರಶೈವ ಲಿಂಗಾಯತ ಪಂಚಮಸಾಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ ಮಾಳನೂರ ಸೇರಿದಂತೆ ನೂರಾರು ಸಮಾಜದ ಬಂಧುಗಳು ಹಾಜರಿದ್ದರು..