ವೈರಾಗ್ಯನಿಧಿ ಅಕ್ಕಮಹಾದೇವಿ ಸ್ತ್ರೀ ಕುಲದ ಸಾಕ್ಷಿ ಪ್ರಜ್ಞೆಯ ಪ್ರತೀಕ ಮಾತೋಶ್ರೀ ಪೂಜ್ಯ ಡಾ ದಾಕ್ಷಾಯಣಿ ಎಸ್ ಅಪ್ಪ
ಕಲಬುರ್ಗಿಯಲ್ಲಿ 12 ನೇ ರಾಜ್ಯ ಮಟ್ಟದ ಕದಳಿ ಸಮಾವೇಶಕ್ಕೆ ಅದ್ದೂರಿ ಚಾಲನೆ
ವೈರಾಗ್ಯನಿಧಿ ಅಕ್ಕಮಹಾದೇವಿ ಸ್ತ್ರೀ ಕುಲದ ಸಾಕ್ಷಿ ಪ್ರಜ್ಞೆಯ ಪ್ರತೀಕ: ಮಾತೋಶ್ರೀ ಪೂಜ್ಯ ಡಾ ದಾಕ್ಷಾಯಣಿ ಎಸ್ ಅಪ್ಪ
ಕಲಬುರಗಿ : 12ನೇ ಶತಮಾನದ ವೈರಾಗ್ಯ ನಿಧಿ ಅಕ್ಕಮಹಾದೇವಿ ಸಮಸ್ತ ಸ್ತ್ರೀ ಕುಲದ ಸಾಕ್ಷಿ ಪ್ರಜ್ಞೆಯ ಪ್ರತೀಕವಾಗಿದ್ದಾರೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಮಾತೋಶ್ರೀ ಪೂಜ್ಯ ಡಾ ಡಾ. ದಾಕ್ಷಾಯಿಣಿ ಎಸ್ ಅಪ್ಪ ಬಣ್ಣಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ವೇದಿಕೆ ಕಲಬುರಗಿ ಇವರ ಸಹಯೋಗದಲ್ಲಿ ನಗರದ ಜೈ ಭವಾನಿ ಕನ್ವೆನ್ಷನ್ ಸಭಾಂಗಣದಲ್ಲಿ ಇಂದಿನಿಂದ (ಶನಿವಾರ - ರವಿವಾರ) ಆರಂಭವಾದ 12 ನೇ ರಾಜ್ಯ ಮಟ್ಟದ ಕದಳಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,
ಶರಣಬಸವೇಶ್ವರ ಸಂಸ್ಥಾನದ 7 ನೇ ಪೀಠಾಧಿಪತಿಗಳಾದ ಲಿಂ. ದೊಡ್ಡಪ್ಪ ಅಪ್ಪ ಅವರು, ಮೊಟ್ಟ ಮೊದಲಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆಗಳನ್ನು ತೆರೆದು ಅವರಿಗೆ ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದ ಹೇಳಿದರು. ಅಕ್ಕನ ತ್ಯಾಗ, ವೈರಾಗ್ಯ ಮತ್ತು ವ್ಯಕ್ತಿತ್ವ ಸಾರ್ವಕಾಲಿಕ ಎಂದು ಡಾ ದಾಕ್ಷಾಯಣಿ ಎಸ್ ಅಪ್ಪ ಅಭಿಪ್ರಾಯಿಸಿದ್ದಾರೆ.
ಶ್ರೀ ಶರಣಬಸವೇಶ್ವರರ ಹಾಗೂ ಖಾಜಾ ಬಂದೇನವಾಜರರ ಸಾಮರಸ್ಯದ ನೆಲೆಬೀಡು ಈ ಕಲಬುರಗಿಯ ಪುಣ್ಯ ಭೂಮಿ ಎಂದರು.
ಬಸವಾದಿ ಶರಣರು ಅಂದು ಅನುಭವ ಮಂಟಪದಲ್ಲಿ ಕಂಡ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡುವ ದಿಸೆಯಲ್ಲಿ ನಾವು ಸಾಗಬೇಕಿದೆ ಎಂದರು.
ಈ ವೇಳೆ ಶರಣ ದರ್ಶನ, ಚಿತ್ರಕಲಾ ಪ್ರದರ್ಶನ ಮತ್ತು ಪುಸ್ತಕಗಳ ಮಳಿಗೆಗಳನ್ನು ಉದ್ಘಾಟಿಸಿದ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ವಚನ ಸಾಹಿತ್ಯವನ್ನು ಮುಂದಿನ ಸಂತತಿಗೆ ಕೊಂಡೊಯ್ಯುವ ಅಗತ್ಯವಿದೆ.ವಚನ ಸಾಹಿತ್ಯದಲ್ಲಿ ಬಹಳ ದೊಡ್ಡ ಶಕ್ತಿಯಿದ್ದೂ, ಶರಣರ ವಚನಗಳು ಮನನವಾದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಲಿಂಗಪೂಜೆ ಮಾಡಿಕೊಳ್ಳುವ ಸಂಸ್ಕೃತಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಬೆಳೆಸಬೇಕು ಎಂದರು
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ ಮಾತನಾಡಿ, ವಚನ ಸಾಹಿತ್ಯ ಬಹಳ ಶ್ರೀಮಂತ ಸಾಹಿತ್ಯವಾಗಿದೆ. 33 ಕ್ಕೂ ಹೆಚ್ಚು ವಚನಕಾರ್ತಿಯರು ವಚನ ರಚನೆಯಲ್ಲಿ ತೊಡಗಿಸಿಕೊಂಡಿದ್ದು ಗಮನಾರ್ಹ ವಿಷಯವಾಗಿದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ವಸ್ತ್ರದ ಮಾತನಾಡಿ, ಶರಣರ ವಚನಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಈಗಾಗಲೇ ಆಗಿದೆ. ಆದರೆ ಆ ವಚನಗಳನ್ನು ನಿಜ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕೇಂದು ಹೇಳಿದರು.
ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಾರಂಗಮಠ, ಶ್ರೀಶೈಲಂನ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ, ವಚನಗಳ ಕಟ್ಟು ಹಾಗೂ ಅಕ್ಕಮಹಾದೇವಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳಾದಸಿ. ಸೋಮಶೇಖರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು,
ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ವಸ್ತ್ರದ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಶರಣ ಸಾಹಿತ್ಯ ಪರಿಷತ್ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣಿ, ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಭುಶ್ರೀ ತಾಯಿ , ಡಾ ವಿಶಾಲಾಕ್ಷಿ ಕರಡ್ಡಿ,ಸುಶೀಲಾ ಸೋಮಶೇಖರ, ಚಂದ್ರಿಕಾ ಪರಮೇಶ್ವರ ವೇದಿಕೆಯಲ್ಲಿದ್ದರು.
ಡಾ.ಸುಜಾತಾ ಪಾಟೀಲ, ಎಸ್.ಕೆ. ಬಿರಾದಾರ ನಿರೂಪಿಸಿದರು. ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ.ಶಾಂತಾ ಅಷ್ಠಗಿ ಸ್ವಾಗತಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ,
ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಲಿಂಗ ಪಾಟೀಲ ಕೋಳಕೂರ, ಕೆ.ನೀಲಾ, ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಜಯಶ್ರೀ ದಂಡೆ, ಡಾ.ಸರಸ್ವತಿ ಚಿಮ್ಮಲಗಿ, ಬಸವರಾಜ ಮೊರಬದ, ಶರಣಗೌಡ ಪಾಟೀಲ್ ಪಾಳಾ ಎಸ್ ಕೆ ಬಿರಾದಾರ ಜೇವರ್ಗಿ, ಡಾ ಆನಂದ ಸಿದ್ದಾಮಣಿ,ಡಾ ವೀರಶೆಟ್ಟಿ ಗಾರಂಪಳ್ಳಿ, ಶಿವಶರಣಪ್ಪ ಮೂಳೆಗಾಂವ,ಡಾ ಶಿವಗಂಗಾ ರೂಮ್ಮಾ, ಡಾ ಶೋಭಾದೇವಿ ಚುಕ್ಕಿ, ರವೀಂದ್ರ ಶಾಬಾದಿ, ಹನುಮಂತರಾವ್ ಪಾಟೀಲ್ ಕುಸನೂರ, ವೆಂಕಟೇಶ್ ಜನಾದ್ರಿ, ಜಯಶ್ರೀ ಚಟನಳ್ಳಿ, ಅಂಬಾರಾಯ ಮಡ್ಡೆ, ಗವಿಸಿದ್ದ ಪಾಟೀಲ್, ಕರುಣಾ ಜಮದರಖಾನಿ, ಡಾ ಗಣಪತಿ ಸಿಂಧೆ, ಕುಪೇಂದ್ರ ಪಾಟೀಲ್, ಡಾ ನೀಲಾಂಬಿಕಾ ಪೋಲಿಸ್ ಪಾಟೀಲ್, ಸೋಮಶೇಖರ್ ಪಾಟೀಲ್ ತೇಗಲತಿಪ್ಪಿ, ಎಸ್ ಎಂ ಪಾಟೀಲ್, ಶಿವಶರಣಪ್ಪ ದೇಗಾಂವ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವಾದಿ ಪ್ರಮಥರು ಮೌಡ್ಯ ಮತ್ತು ವೈದಿಕ ಪದ್ದತಿಯನ್ನು ಬಲವಾಗಿ ವಿರೋಧಿಸಿದ್ದರು : ಸರ್ವಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ
ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ 12 ನೇ ಶತಮಾನದಲ್ಲಿ ನಡೆದ ಸಾಮಾಜಿಕ ಸುಧಾರಣೆಯ ಭಾಗವಾಗಿ ಶರಣರು ಮೌಢ್ಯತೆ ಕಂದಾಚಾರ ಹಾಗೂ ವೈದಿಕ ಸಂಸ್ಕೃತಿಯನ್ನು ಬಲವಾಗಿ ವಿರೋಧಿಸಿದ್ದರು.ಬಸವಣ್ಣ ನವರು ನೀಡಿರುವ ಇಷ್ಟಲಿಂಗವು ಭವಸಾಗರ ಗೆಲ್ಲುವ ಅತ್ಯುತ್ತಮ ಸಾಧನವಾಗಿದೆ ಎಂದು ಸಮ್ಮೇಳನಾಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಡಾ.ಮೀನಾಕ್ಷಿ ಬಾಳಿ ಅಭಿಪ್ರಾಯ ಪಟ್ಟಿದ್ದಾರೆ.
ಶರಣರು ಜಾತಿ ತಾರತಮ್ಯ ಅಸಮಾನತೆಯ ಬಗ್ಗೆ ಮಾತನಾಡಿಲ್ಲ ಎಂಬ ಅಪಸ್ವರ ಇತ್ತೀಚಿಗೆ ಎದ್ದಿದೆ , ಕಲ್ಯಾಣದಲ್ಲಿ ಕ್ರಾಂತಿ ಆಗಿರುವ ಕುರಿತು ಅನುಮಾನ ವ್ಯಕ್ತಪಡಿಸುತ್ತಿವೆ ಪಟ್ಟಭದ್ರ ಹಿತಾಸಕ್ತಿಗಳು.
ಶರಣರು ಮೌಖಿಕವಾಗಿ ತಮ್ಮ ಪರಂಪರೆಯನ್ನು ಕಟ್ಟಿಕೊಂಡು ಬಂದಿದ್ದಾರೆ. ವೇದ, ಪುರಾಣ ಉಪನಿಷತ್ತುಗಳನ್ನು ಶರಣರು ತೀವ್ರವಾಗಿ ಖಂಡಿಸಿದ್ದರು.
ಹೀಗಾಗಿಯೇ ವೈದಿಕರು ವಚನ ಸಾಹಿತ್ಯಕ್ಕೆ ಹೆದರುತ್ತಾರೆ.
ಈ ಬಗ್ಗೆ ನಾವು ಎಚ್ಚರ ವಹಿಸಲು ಡಾ.ಬಾಳಿ ಕರೆ ನೀಡಿದರು.
ಸಕಲ ಜೀವಾತ್ಶರಿಗೆ ಲೇಸನ್ನೇ ಬಯಸಿದ ಶರಣರು ಯಾವುದೇ ವ್ಯಕ್ತಿಯನ್ನು ವಿರೋಧಿಸಲಿಲ್ಲ. ಕೇವಲ ಸಮಾಜಕ್ಕೆ ಕಂಟಕಪ್ರಾಯವಾದ ವಿಚಾರಗಳನ್ನು ವಿರೋಧಿಸಿದರು.
ಶರಣರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶರಣತ್ವ ನೀಡಿದ್ದರು ಎಂದರು.
ಬ್ರಾಹ್ಮಣ್ಯವನ್ನು ಧಿಕ್ಕರಿಸಿ ವೈದಿಕತೆಯನ್ನು ಖಂಡಿಸಿ ಬಸವಣ್ಣನವರು ಅನುಭವ ಪ್ರಮಾಣವನ್ನು ಅಪ್ಪಿದವರು. ಯಾವ ವೈದಿಕ ದರ್ಶನದಲ್ಲೂ ಸ್ತ್ರೀಯರನ್ನು ಗುರು ಸ್ಥಾನದಲ್ಲಿ ಅಥವಾ ಗೌರವಾದರಗಳಿಂದ ಕಂಡಿಲ್ಲ.
ಕಾಯಕಕ್ಕೆ ಕೈಲಾಸದ ದರ್ಜೆ ನೀಡಿದ ಮಹಾನ್ ವಚನ ಸಾಹಿತ್ಯವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಕಲ್ಯಾಣ ಕದಳಿ, ಅಕ್ಕ ಕೇಳವ್ವ ಎಂಬ ಎರಡು ಸ್ಮರಣ ಸಂಚಿಕೆ, ಶರಣ ಪ್ರಸಾದ, ಅರವತ್ಮೂರು ಪುರಾತನರ ಚಿತ್ರಪಟಗಳ ಕೃತಿಗಳು ಲೋಕಾರ್ಪಣೆಗೊಂಡವು.