ಆಪರೇಷನ್ ಸಿಂಧೂರ: ಭಾರತ ಮಾತೆಗೆ ಗೌರವ ಸಲ್ಲಿಸಿದ ಯೋಧ ವಿಠ್ಠಲರೆಡ್ಡಿ ಕಲ್ಮೂಡ

ಆಪರೇಷನ್ ಸಿಂಧೂರ: ಭಾರತ ಮಾತೆಗೆ ಗೌರವ ಸಲ್ಲಿಸಿದ ಯೋಧ ವಿಠ್ಠಲರೆಡ್ಡಿ ಕಲ್ಮೂಡ

ಆಪರೇಷನ್ ಸಿಂಧೂರ: ಭಾರತ ಮಾತೆಗೆ ಗೌರವ ಸಲ್ಲಿಸಿದ ಯೋಧ ವಿಠ್ಠಲರೆಡ್ಡಿ ಕಲ್ಮೂಡ

ಕಲಬುರಗಿ: ಪಾಕಿಸ್ತಾನ ಹಾಗೂ ಭಾರತದ ನಡುವೆ ಫಸ್ಟ್ ಲೈನ್ ಡಿಫೆನ್ಸ್ನಲ್ಲಿ ಬಿಎಸ್‌ಎಫ್‌ ಸೇವೆ ಸಲ್ಲಿಸುತ್ತಿರುವ ಕಮಲಾಪುರ ತಾಲೂಕು ಕಲ್ಮೂಡ ಗ್ರಾಮದ ಯೋಧ **ವಿಠ್ಠಲರೆಡ್ಡಿ**, ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಕೆಲವೇ ಮೀಟರ್ ದೂರದಲ್ಲಿ ಇದ್ದ ಪ್ರಸಂಗವನ್ನು ವಿವರಿಸಿದರು.

"ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇಶಪ್ರೇಮ, ಯೋಧರೊಂದಿಗೆ ಆತ್ಮೀಯತೆ, ಅವರಿಗೆ ನೀಡುವ ಗೌರವವಿಲ್ಲದಿದ್ದರೆ ಈ ಮಟ್ಟದ ಪ್ರತಿಕ್ರಿಯೆ ಸಾಧ್ಯವಿರಲಿಲ್ಲ" ಎಂದು ಅವರು ಹೇಳಿದರು. ಪಾಕಿಸ್ತಾನದ ಗಡಿ ದಾಟದೆ ವಾಯು ಸೇನೆಯ ಮೂಲಕ ನಡೆದ **ಆಪರೇಷನ್ ಸಿಂಧೂರ**ನಲ್ಲಿ ಕೇವಲ ೨೩ ನಿಮಿಷಗಳಲ್ಲಿ ೨೪ ಮಿಸೈಲ್ ದಾಳಿ ಮೂಲಕ ೩ ಭಯೋತ್ಪಾದಕ ಶಿಬಿರಗಳನ್ನು ನೆಲಸಮಗೊಳಿಸಲಾಗಿದ್ದು, ಇದು ಉಗ್ರರಿಗೆ ಭಾರತದ ಸ್ಪಷ್ಟ ಪಾಠವಾಗಿದೆ ಎಂದು ಅವರು ತಿಳಿಸಿದರು.

ಅವರು ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಧಾರ್ಮಿಕ ಗುರುತಿನ ಆಧಾರದಲ್ಲಿ ನಡೆಸಲಾದ ಹತ್ಯಾಕಾಂಡವನ್ನು ಭೀಕರವಾದ ದಾಳಿ ಎಂದು ಹೇಳಿದ್ದಾರೆ.

ಕೇವಲ ಒಂದು ವಾರದ ಬಿಡುವಿನಲ್ಲಿ ತಮ್ಮ ಕುಟುಂಬದೊಂದಿಗೆ ಭೇಟಿಯಾಗಿ, ಉಡನೂರು ಕ್ರಾಸ್‌ನ ಸಂತೋಷ್ ಕಾಲೋನಿಯಲ್ಲಿರುವ ಮನೆಗೆ ಆಗಮಿಸಿದ್ದ ವಿಠ್ಠಲರೆಡ್ಡಿ ಅವರನ್ನು **ಟೆಂಗಳಿ ಅಂಡಗಿ ಪ್ರತಿಷ್ಠಾನ**ದ ಅಧ್ಯಕ್ಷ **ಶಿವರಾಜ ಅಂಡಗಿ** ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

"ಅಸ್ತಿ, ವಿದ್ಯೆಗಿಂತ ಭಾವನೆ, ಅನುಭವ ದೊಡ್ಡದು. ಗಡಿಯ ಭೂಮಿಯಲ್ಲಿ ದೇಶ ಸೇವೆ ಮಾಡುತ್ತಿರುವ ವಿಠ್ಠಲರೆಡ್ಡಿಯಂತಹ ವೀರರನ್ನು ಭೇಟಿಯಾಗಿ ಮಾತನಾಡುವುದು ನಮ್ಮ ಪಾಲಿಗೆ ಗೌರವ" ಎಂದು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ **ವಿನೋದಕುಮಾರ ಜನೇವರಿ, ಶರಣಬಸಪ್ಪ ಆಂದೇಲಿ, ರಾಮು ಜಾಧವ, ರಾಜೇಂದ್ರ ಕುಲಕರ್ಣಿ, ಶೇಖರ್ ಲಾಲಿ, ಆಂಜನೇಯ ಕಂದಿ, ಅಕ್ಷಯಕುಮಾರ ಆಂದೇಲಿ, ಸ್ವರೂಪಾ ರೆಡ್ಡಿ, ಅಂಜನಾ ಕುಲಕರ್ಣಿ, ಶೋಭಾ ಆಂದೇಲಿ, ಜಯಶ್ರೀ ಹಾಗೂ ಮೌನೇಶ್ವರಿ** ಉಪಸ್ಥಿತರಿದ್ದರು.