ಅಕ್ರಮ ಕಟ್ಟಡಗಳ ಖಾತಾ ನಕಲು ರದ್ದುಗೊಳಿಸಿ ತನ್ನ ವಶಕ್ಕೆ ಪಡೆದ ಪುರಸಭೆಗೆ ಕೃತಜ್ಞತೆ : ಈರಣ್ಣಗೌಡ ಆರ್. ಪಾಟೀಲ ಗುಳ್ಯಾಳ

ಅಕ್ರಮ ಕಟ್ಟಡಗಳ ಖಾತಾ ನಕಲು ರದ್ದುಗೊಳಿಸಿ ತನ್ನ ವಶಕ್ಕೆ ಪಡೆದ ಪುರಸಭೆಗೆ ಕೃತಜ್ಞತೆ : ಈರಣ್ಣಗೌಡ ಆರ್. ಪಾಟೀಲ ಗುಳ್ಯಾಳ

27 ಅಕ್ರಮ ಕಟ್ಟಡಗಳ ಖಾತಾ ನಕಲು ರದ್ದುಗೊಳಿಸಿ ತನ್ನ ವಶಕ್ಕೆ ಪಡೆದ ಪುರಸಭೆಗೆ ಕೃತಜ್ಞತೆ ಸಲ್ಲಿಸಿದ : ಈರಣ್ಣಗೌಡ ಆರ್. ಪಾಟೀಲ ಗುಳ್ಯಾಳ 

ಕಲಬುರಗಿ :  ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , 9 ಉದ್ಯಾನವನಗಳು,27 ಖಾತಾ ನಕಲು, ರದ್ದುಗೊಳಿಸಿ ಆದೇಶ ಹೊರಡಿಸಿದ ಜೇವರ್ಗಿ ಪುರಸಭೆ ನಮ್ಮ ಹೋರಾಟಕ್ಕೆ ತಂದ ಜಯ ಎಂದು ಮಾತನಾಡಿದರು, 

 2019-20 ರಲ್ಲಿ ಜೇವರ್ಗಿ ಪುರಸಭೆ ಎದುರುಗಡೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹದ ಮುಖಾಂತರ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ರವರಿಗೆ ಜೇವರ್ಗಿ ಪಟ್ಟಣದಲ್ಲಿ ಉದ್ಯಾನವನಗಳ ಒತ್ತುವರಿ ಕುರಿತು ಮನವಿಗೆ ಸ್ಪಂದಿಸಿ ತನಿಖೆ ನಡೆಸಿ ಒಟ್ಟು 18 ಉದ್ಯಾನವಗಳು ಒತ್ತುವರಿಯಾಗಿದ್ದು ಅದರಲ್ಲಿ ಅಕ್ರಮವಾಗಿ 176 ಸೈಟುಗಳು(ಪ್ಲಾಟಗಳು) ಪುರಸಭೆ ಖಾತಾ ಪುಸ್ತಕದಲ್ಲಿ ಅಕ್ರಮವಾಗಿ ನೊಂದಣಿಯಾಗಿವೆ ಎಂದು ವರಧಿಯನ್ನು ಸರಕಾರಕ್ಕೆ ಸಲ್ಲಿಸಿದ್ದರು ಎಂದರು.

ವರಧಿಯನ್ನು ಪರೀಶಿಲ್ಪಿಸಿದ ನಗರಾಭಿವೃದ್ಧಿ ಇಲಾಖೆಯು ಕಾನೂನು ರೀತ್ಯ ಕ್ರಮ ಕೈಗೊಂಡು ಎಲ್ಲಾ ಖಾತಾಗಳನ್ನು ರದ್ದುಗೊಳಿಸಿ ಉದ್ಯಾನವನಗಳಲ್ಲಿನ 35 ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಪುರಸಭೆಗೆ ತೆಗೆದುಕೊಳ್ಳಲು ಅಂದಿನ ಜಿಲ್ಲಾಧೀಕಾರಗಿಳಾದ ವಿಜಯ ಜ್ಯೋತ್ಸಾ ರವರಿಗೆ ಸೂಚಿಸಿತ್ತು. ಜಿಲ್ಲಾಧಿಕಾರಿಗಳು ಕೂಡಾ ಹಿಂದಿನ ಪುರಸಭೆ ಮುಖ್ಯಾಧಿರಿಗಳಿಗೆ ಸರಕಾರದ ಆದೇಶದ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಕಟ್ಟು ನಿಟ್ಟಿನ ಅದೇಶ ನೀಡಿದ್ದರು . ಆಗ ನಮ್ಮ 65 ದಿನಗಳ ಹೋರಾಟವನ್ನು ಕೈಬಿಡಲಾಗಿತ್ತು. ಎಂದರು

ಸುಮಾರು ಎರಡು ವರ್ಷಗಳು ಕಳೆದರು ಇಲ್ಲಿನ ಪುರಸಭೆ ಸರ್ಕಾರದ ಆದೇಶ ಪ್ರಕಾರ ಯಾವುದೇ ಕ್ರಮಕೈಗೊಳ್ಳದ ಕಾರಣ ನಾವು ಮತ್ತೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಹೋರಾಟದ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಮತ್ತು ಪುರಸಭೆ 18 ಉದ್ಯಾನವನಗಳ ಪೈಕಿ .9 ಉದ್ಯಾನವನಗಳಲ್ಲಿನ 27 ಅಕ್ರಮ ಕಟ್ಟಡಗಳ ಖಾತಾ ನಕಲು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಉಳಿದ 8 ಖಾತೆದಾರರು ನ್ಯಾಯಾಲಯದ ಮೊರೆ ಹೊಗಿದ್ದು ಆದೇಶ ಬಂದನಂತರ ಖಾತಾ ರದ್ದುಗೊಳಿಸಿ ತೆರವುಗೊಳಿಸುವದಾಗಿ ಪುರಸಭೆಯ ಮುಖ್ಯ ಅಧಿಕಾರಿ ಭರವಸೆ ನೀಡಿದ್ದರಿಂದ 135 ದಿನಗಳ ಕಾಲ ಎರಡನೇ ಹಂತರ ಅನೀರ್ಧಿಷ್ಟ ಧರಣಿ ಸತ್ಯಾಗ್ರಹ ಕೈಬಿಡಲಾಗಿದೆ. ಎಂದರು.

 ಒಟ್ಟು 190 ದಿನಗಳ ಕಾಲ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಕ್ರಮ ಕೈಗೊಂಡ ಈಗಿನ ಜಿಲ್ಲಧಿಕಾರಿಯಾದ ಫೌಜಿಯಾ ತರನ್ನುಮ್ ಸಹಾಯಕ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿ ಎಲ್ಲಾ ಸಿಬ್ಬಂದಿಗಳಿಗೆ ಪತ್ರಿಕಾ ಗೋಷ್ಟಿಯಲ್ಲಿ  ಅಭಿನಂದನೆ ಸಲ್ಲಿಸಿದರು.