ಬೆಲ್ಲದ ಸಂಗಯ್ಯನ ದರ್ಶನ ಪಡೆದ ಭಕ್ತರು

ಬೆಲ್ಲದ ಸಂಗಯ್ಯನ ದರ್ಶನ ಪಡೆದ ಭಕ್ತರು
ಶಹಾಪುರ : ತಾಲೂಕಿನ ಸಗರ ಗ್ರಾಮದ ದೇವಾಲಯಗಳಲ್ಲಿ ಒಂದಾಗಿರುವ ಹಾಗೂ ಪುಣ್ಯ ಯಾತ್ರಾಸ್ಥಳವಾಗಿರುವ ಬೆಲ್ಲದ ಸಂಗಯ್ಯನ ದೇವಸ್ಥಾನಕ್ಕೆ ಇಂದು ಶ್ರಾವಣ ಮಾಸದ ನಿಮಿತ್ಯ ಯುವ ಭಕ್ತ ಸಮೂಹ ಭೇಟಿ ನೀಡಿ ದರ್ಶನ ಪಡೆಯಲಾಯಿತು.
ಇಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳುಗಳ ಕಾಲ ಕರ್ತೃ ಗದ್ದುಗೆ ವಿಶೇಷ ಪೂಜೆ ನೆರವೇರುವುದು,ಬೆಳಗಿನ ಜಾವ 5: ಗಂಟೆಯ ಸುಮಾರಿಗೆ ಭಕ್ತರ ದಂಡು ಸಾಲುಗಟ್ಟಿ ನಿಂತು ದರ್ಶನ ಪಡೆಯುವರು. ಸುಮಾರು ವರ್ಷಗಳ ಹಿಂದೆ ನಿರ್ಮಾಣವಾದ ಈ ದೇವಾಲಯ ಕಲ್ಲು ಶಿಲೆಗಳಿಂದ ಕೂಡಿದೆ ಇಲ್ಲಿರುವ ಬೆಲ್ಲದ ಸಂಗಯ್ಯ ದಿಗ್ಗಿ ಸಂಗಮನಾಥನ ಗುರುವೆಂದು ಹೇಳಲಾಗುತ್ತಿದೆ.
ಸಗರ ಶಂಕರನಾರಾಯಣನ ಕೆರೆಯ ಪಕ್ಕದ ಗುಡ್ಡದ ಮೇಲೆ ಬಹು ಸುಂದರವಾದ ಚಿಕ್ಕದಾದ ದೇವಾಲಯ ಇದಾಗಿದ್ದು ಹರಕೆ ಬೇಡಿಕೊಂಡು ಬಂದಂತ ಭಕ್ತರಿಗೆ ಹರಸಿ,ಕರುಣಿಸುವ ಪುಣ್ಯಕ್ಷೇತ್ರದ ಬೆಲ್ಲದ ಸಂಗಯ್ಯ ಎಲ್ಲರಿಗೂ ಇಷ್ಟ. ಎಲ್ಲಾ ಧರ್ಮದ ಜಾತಿಯ ಜನರು ಬೆಟ್ಟ ಹತ್ತಿ ಸಂಗಯ್ಯನ ದರ್ಶನ ಪಡೆಯುವುದು ಒಂದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ನಿಂಗನಗೌಡ ಮಾಲಿ ಪಾಟೀಲ್, ಆನಂದ್ ಹುಡೇದ,ಪ್ರಕಾಶ್ ದೇಸಾಯಿ ಅಶ್ವಿನ್ ಗೌಡ ಸುಬೇದಾರ, ಶಿವಕುಮಾರ ಗುಂಡನೂರ,ಗದಿಗೆಪ್ಪ ಬಾವಿಕಟ್ಟಿ,ವೀರೇಶ್ ಗುಗ್ಗರಿ ಶರಣು ಯಾದಗಿರಿ,ಸಿದ್ದು ಗಣಾಚಾರಿ,ಸಿದ್ದು ಪಾಗದ ಸೇರಿದಂತೆ ಇಡೀ ಭಕ್ತ ಸಮೂಹವೇ ನೆರೆದಿತ್ತು.