ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳಲು ಕರೆ -ಮುಳೇಗಾಂವ
ಪಿಯು ತರಗತಿಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿದರೆ ಮುಂದಿನ ಜೀವನ ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೇಗಾಂವ್ ಹೇಳಿದರು.
ಕಲಬುರಗಿ ನಗರದ ಸತ್ಯಂ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಬೇಕು ಉಪನ್ಯಾಸಕರ ಬೋಧನೆ ಮಾಡಿದ್ದನ್ನು ಸರಿಯಾಗಿ ಕೇಳಿ ಕರಗತ ಮಾಡಿಕೊಂಡು ಮನೆಯಲ್ಲಿ ಪಠ್ಯಪುಸ್ತಕವನ್ನು ಬಳಕೆ ಮಾಡಿಕೊಂಡು ಪ್ರತಿನಿತ್ಯ ನಾಲ್ಕು ಐದು ಗಂಟೆ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ . ನೀವು ಕಷ್ಟ ಪಟ್ಟು ಓದಿ ನಿಮ್ಮ ಹಿಂದೆ ದೇವರು ಇರುತ್ತಾನೆ ಎಂದು ವಿದ್ಯಾರ್ಥಿ ಗಳಿಗೆ ಕಿವಿ ಮಾತನ್ನು ಮೂಳೆಗಾಂವ್ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿಶಾ ಪಿಯು ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರಗಿ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿ ನಿರಂತರ ಅಭ್ಯಾಸ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಆತ್ಮ ಸ್ಥೈರ್ಯದಿಂದ. ಇನ್ನೂ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ .ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ವಿದ್ಯಾರ್ಥಿಗಳು ಓದಿ ತಂದೆ ತಾಯಿಯ ಹೆಸರು ಕಾಲೇಜಿನ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಸಂಗಮೇಶ್ ಹಿರೇಮಠ್ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಬಿ ಎಚ್ ನಿರಗುಡಿ ವಹಿಸಿಕೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಸಮಯ ಪ್ರಜ್ಞೆ ,ಪ್ರಾಮಾಣಿಕತೆ, ಮೈಗೂಡಿಸಿಕೊಂಡು ಅಭ್ಯಾಸದ ಕಡೆ ಗಮನಕೊಡಬೇಕು ಹಾಗೆ ಮೊಬೈಲ್ ಬಿಟ್ಟು ಪುಸ್ತಕವನ್ನು ಹಿಡಿಯಬೇಕು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಸೂರ್ಯಕಾಂತ್ ಪೂಜಾರಿ ಪ್ರಾರ್ಥನಾ ಗೀತೆಯನ್ನು ನಡೆಸಿಕೊಟ್ಟರು. ಗಿರಿಜಾ ಅತಿಥಿಗಳಿಗೆ ಸ್ವಾಗತಿಸಿದರು ಅಂಬಿಕಾ ಹಾಗೂ ತ್ರಿಷಾ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು ಗಾಯತ್ರಿ ವಂದನಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಹೇಶ್ ಗಡಗಿ ,ಸಂತೋಷ್ ಪಿಳ್ಳೆ, ಅಶೋಕ್ ಆರ್, ಮಂಜುನಾಥ್ ಕಲಾಲ, ಡಾ. ಸುಲೋಚನಾ ಅಂಕಲಗಿ ,ರೂಪಾ ಕುಲಕರ್ಣಿ ,ಗೀತಾ ಮೂಲಗೆ, ಸುಚೇತಾ ಸುತಾರ್, ನಿರ್ಮಲಾ ಜಾವಳಿ,ರಾಜೇಶ್ರೀ ಸಾಲಿಮಠ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.