ವಾಡಿಯ ಕಾಶೆಟ್ಟಿ ಮನೆಯಂಗಳದಲ್ಲಿ ಅರಳಿದ ಬ್ರಹ್ಮ ಕಮಲ
ವಾಡಿಯ ಕಾಶೆಟ್ಟಿ ಮನೆಯಂಗಳದಲ್ಲಿ ಅರಳಿದ ಬ್ರಹ್ಮ ಕಮಲ
ವಾಡಿ: ಪಟ್ಟಣದ ಕಾಶೆಟ್ಟಿ ಪರಿವಾರದ ಮನೆಯಂಗಳದ ಹೂವಿನ ಕುಂಡದಲ್ಲಿ ನೆಟ್ಟ ಬ್ರಹ್ಮ ಕಮಲದ ಗಿಡವು ಮಧ್ಯರಾತ್ರಿ ಹೂವು ಬಿಟ್ಟು ಗಮನ ಸೆಳೆಯಿತು.
ಶಿವಶಂಕರ ಕಾಶೆಟ್ಟಿ, ಪ್ರೇಮಾವತಿ ಕಾಶೆಟ್ಟಿ ದಂಪತಿಗಳು ಅರಿಶಿಣ ಕುಂಕುಮ ಹಚ್ಚಿ ಆರತಿ ಬೆಳಗಿ ಶೃದ್ದಾಭಕ್ತಿಯಿಂದ ಮೆಯವರು ಬ್ರಹ್ಮ ಕಮಲಕ್ಕೆ ನಮಸ್ಕರಿಸಿದರು.
ರಾತ್ರಿ ನಕ್ಷತ್ರದಂತೆ ಅರಳಿ ಸುಗಂಧ ಪರಿಮಳ ಸೂಸಿ ಹೊಸ ವಾತಾವರಣ ನಿರ್ಮಿಸಿತ್ತು.
ಬ್ರಹ್ಮ ಕಮಲ ನೋಡಲು ಸುಂದರವಷ್ಟೇ ಅಲ್ಲದೆ ಆರೋಗ್ಯಕ್ಕೂ ಒಳಿತು ಮಾಡುತ್ತದೆ ಎಂದು ಹೇಳಲಾಗುತ್ತದೆ.
ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಮಹತ್ವದಾಗಿದೆ,ಇದನ್ನು ಹಿಮಾಲಯದ ರಾಜ ಎಂದೂ ಕರೆಯಲಾಗುತ್ತದೆ. ಅರಳುವಾಗ ನೋಡಿದವರು ಸುಖ ಸಂಪತ್ತು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಕ್ಕೆಮ್ಮು ಮತ್ತು ಶೀತಕ್ಕೆ ಜ್ವರ ಸೇರಿದಂತೆ ನಾನಾ ಕಾಯಿಲೆಗಳಿಗೆ ಇದು ಅತ್ಯುತ್ತಮ ಮದ್ದಾಗಿದೆ ಜೊತೆಗೆ ಅದ್ಭುತ ಔಷಧೀಯ ಪ್ರಯೋಜನ ಹೊಂದಿದೆ ಎಂದು ಹೇಳಲಾಗುತ್ತದೆ.
ಈ ಸಂಧರ್ಭದಲ್ಲಿ ವಾಡಿ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ, ಸಿದ್ದರಾಮೇಶ್ವರ ಕಾಶೆಟ್ಟಿ, ಶರಣಮ್ಮ ಯಾದಗಿರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.