ಹಲ್ಲಿಲ್ಲದ ಹಾವಿನಂತಾದ ಅಖಿಲ ಭಾರತ ವೀರಶೈವ ಮಹಾಸಭೆ.
ಹಲ್ಲಿಲ್ಲದ ಹಾವಿನಂತಾದ ಅಖಿಲ ಭಾರತ ವೀರಶೈವ ಮಹಾಸಭೆ.
ಅಖಿಲ ಭಾರತ ವೀರಶೈವ ಮಹಾಸಭೆ ಒಂದು ನೋಂದಾಯಿತ ಪ್ರತಿಷ್ಠಿತ ವ್ಯಕ್ತಿಗಳ ಸಂಘ ಸಂಸ್ಥೆಯಾಗಿ ರೂಪುಗೊಂಡಿದದೆ ವಿನ ಇದರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಾಮಾಜಿಕ ಕಲ್ಯಾಣದ ಯಾವುದೇ ಅರ್ಥಪೂರ್ಣವಾದ ಮೌಲಿಕ ಕಾರ್ಯಕ್ರಮಗಳು ಏರ್ಪಡುತ್ತಿಲ್ಲ ಹೋರಾಟಗಳಿಲ್ಲ ಚಿರಾಟಗಳಿಲ್ಲ ಸಂಘಟನೆಯಲ್ಲಿ ಶಕ್ತಿ ಇಲ್ಲ ಕೇವಲ ಅದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಒಂದು ಅರಮನೆ ಅಂತ ಭವ್ಯವಾದ ಕಟ್ಟಡವನ್ನು ಹೊಂದಿರುವ ಮತ್ತು ಕಚೇರಿಯನ್ನು ಹೊಂದಿರುವ ನೊಂದಾಯಿತ ಸಂಸ್ಥೆಯಾಗಿದೆ ಇದರಿಂದ ಸಮಾಜಕ್ಕೆ ಯಾವುದೇ ರೀತಿಯಿಂದ ಲಾಭವಾಗುತ್ತಿಲ್ಲ ಇದು ಅರ್ಥಪೂರ್ಣವಾಗಿ ಮೌಲಿಕವಾಗಿ ಕೆಲಸ ಮಾಡುತ್ತಿಲ್ಲವೆಂಬುದು ಎಲ್ಲರ ಅರಿವಿಗೆ ಬಂದಿದೆ ವೀರಶೈವ ಮಹಾಸಭೆ ಕರೆ ಕೊಟ್ಟರೆ ಇಡೀ ಭಾರತದ ವೀರಶೈವರು ಗಮನಹರಿಸಬೇಕು ಇವರ ಕರೆಗೆ ಹೊರಳಿ ನೋಡಬೇಕು ಆ ಮಾತು ದೂರು ಉಳಿಯತು ಯಾರು ಲೆಕ್ಕಕ್ಕೂ ತೆಗೆದುಕೊಳ್ಳುತ್ತಿಲ್ಲ ಆದರೆ ಇವರ ಕರೆಗೆ ಓ ಗೂಡುವವರು ಇಲ್ಲವೇ ಇಲ್ಲ ಗಮನ ಹರಿಸುವವರು ಮೊದಲೇ ಇಲ್ಲ ಹೀಗಾಗಿ ಇದರ ಪರಿಸ್ಥಿತಿ ನೋಡಿದರೆ ಇದೊಂದು ಹಲ್ಲಿಲ್ಲದ ಹಾವಿನಂತಾಗಿದೆ ಕೊನೆ ಪಕ್ಷ ಬುಷ್ ಬುಸ್ ಎನ್ನುವುದನ್ನು ಕೂಡ ಕಲಿತಿಲ್ಲ ಕಚ್ಚುವ ಮಾತಂತು ದೂರ ಉಳಿಯಿತು. ಶಕ್ತಿ ಇಲ್ಲದ ಅರ್ಥಹೀನ ಮತ್ತು ಕೆಲವೇ ಜನ ಶ್ರೀಮಂತ ಪಟ್ಟ ಬದ್ರ ಹಿತಾಸಕ್ತಿಗಳ ಕೈಗೆ ಸಿಕ್ಕು ನಲುಗಿ ಒದ್ದಾಡುತ್ತಿದೆ ಇದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಇದು ಈಗ ಕೇವಲ ಸಿರಿವಂತ ರಾಜಕಾರಣಿಗಳ ಕೈಗೊಂಬೆಯಾಗಿರುವ ಈ ಸಂಸ್ಥೆ ನಿವೃತ್ತ ಲಿಂಗಾಯಿತ ರಾಜಕಾರಣಿಗಳ ಮತ್ತು ಅಧಿಕಾರಿಗಳ ಸಂತ್ರಸ್ತರ ತಂಗೂ ದಾಣವಾಗಿದೆ ಎಂದು ಹೇಳಬಹುದು ಕೇವಲ ವೀರಶೈವ ಲಿಂಗಾಯತ ಸಿರಿವಂತ ಪ್ರತಿಷ್ಠಿತ ರಾಜಕಾರಣಿಗಳ ನಿವೃತ್ತ ಅಧಿಕಾರಿಗಳ ಸಂಘಟನೆಯಂತಿರುವ ಈ ಮಹಾಸಭೆಗೆ ಚುನಾವಣೆಯಾಗಬೇಕು ಮತದಾರರಿಂದ ಅಧ್ಯಕ್ಷರಾದವರು ಆಯ್ಕೆಯಾಗಬೇಕು ರಾಜ್ಯಮಟ್ಟದ ಅಧ್ಯಕ್ಷರಾಗಲಿ ಅಖಿಲ ಭಾರತ ಮಟ್ಟದ ಅಧ್ಯಕ್ಷರಾಗಲಿ ಚುನಾವಣೆಯಿಂದ ಆಯ್ಕೆಗೊಂಡರೆ ಅದಕ್ಕೊಂದು ಅರ್ಥ ಕೇವಲ ಹಿಂಭಾಗಲಿನಿಂದ ಒಳನುಸುಳಿ ಅಧಿಕಾರ ಪಡೆದುಕೊಳ್ಳುವುದು ನೋಡಿದರೆ ಇವರು ವಿಸಿಟಿಂಗ್ ಕಾರ್ಡ್ ಲೆಟರ್ ಪ್ಯಾಡ್ ಅಧ್ಯಕ್ಷರಾಗಿದ್ದಾರೆ ಮತ್ತು ರಾಜಕೀಯ ಸೌಲತ್ತುಗಳನ್ನು ಪಡೆಯಲು ಆಡಳಿತದಲ್ಲಿರುವ ರಾಜಕೀಯ ಪಕ್ಷಗಳ ರಾಜಕಾರಣಿಗಳ ಜೊತೆ ತಮ್ಮ ಒಳ್ಳೆಯ ಸಂಬಂಧಗಳ ನಿರಿಸಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಸ್ವ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದಾರೆ ಇದರಿಂದ ಸ್ವಾರ್ಥ ಸಾಧನೆಯಾಗುತ್ತಿದೆ ವಿನಹ ಸಮಾಜಕ್ಕೆ ಏನು ಲಾಭವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ವೀರಶೈವ ಮಹಾಸಭೆ ಹೀಗೆ ಶಕ್ತಿಹೀನ ಅರ್ಥಹೀನವಾದರೆ ಅದಕ್ಕೆ ಯಾವುದೇ ರೀತಿಯ ಅಸ್ತಿತ್ವ ಉಳಿಯುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ರಾಜಕೀಯವಾಗಿ ಸಾಮಾಜಿಕವಾಗಿ ಸಂಘಟನೆಗೊಳ್ಳಬೇಕಾದರೆ ಚುನಾಯಿತ ಅಧ್ಯಕ್ಷರುಗಳು ಬೇಕು ಆದರೆ ಇದುವರೆಗೆ ಎಲ್ಲಾ ಅಧ್ಯಕ್ಷರುಗಳು ಹಿಂಬಾಗಿಲೆನಿಂದ ಬಂದು ಅಧ್ಯಕ್ಷರಾಗುವರಿಂದ ಯಾವುದೇ ನಿರೀಕ್ಷಿತ ಕೆಲಸ ಕಾರ್ಯಗಳಾಗಿರುವುದಿಲ್ಲ ಯಾವ ಉದ್ದೇಶವೇನಿರಿಸಿಕೊಂಡು ಈ ಸಂಸ್ಥೆಯನ್ನು ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಥಾಪಿಸಿದರೂ ಆ ಉದ್ದೇಶ ನೆರವೇ ರುತ್ತಿಲ್ಲ ಒದ್ದಾಡುತ್ತಿವೆ. ಈ ಸಂಸ್ಥೆಯನ್ನು ನಿವೃತ್ತ ಅಧಿಕಾರಿಗಳ ಮತ್ತು ರಾಜಕಾರಣಿಗಳು ಕಪಿ ಮುಷ್ಟಿಯಿಂದ ಹೊರ ತಂದು ಚುನಾಯಿತ ಅಧ್ಯಕ್ಷರುಗಳನ್ನ ಆಯ್ಕೆ ಮಾಡಿ ಅಧಿಕಾರ ನೀಡಿದರೆ ಈ ವೀರಶೈವ ಮಹಾಸಭೆಗೆ ಅರ್ಥ ಬರುತ್ತೆ ವೀರಶೈವ ಮಹಾಸಭೆಗೆ ಲಿಂಗಾಯತ ಎಂಬ ಇನ್ನೊಂದು ಪದ ಸೇರಿಸಿ ತಮ್ಮ ಪ್ರಭಾವ ಮತ್ತು ವರ್ಚಸ್ಸು ಬೆಳೆಸಿಕೊಳ್ಳಲು ಹೋಗಿ ಮತ್ತಷ್ಟು ಗೊಂದಲಕ್ಕೆ ಒಳಗಾಗಿದೆ ಹಿಂದೂಗಳು ವೀರಶೈವರಲ್ಲ ವೀರಶೈವರು ಲಿಂಗಾಯತರಲ್ಲ ವೀರಶೈವ ಲಿಂಗಾಯತ ಈ ಎರಡು ಪದಗಳು ಒಂದಕ್ಕೊಂದು ಸೇರುವುದಿಲ್ಲ ಇವು ಸಮಾನಾಂತರ ರೇಖೆಗಳು ವೀರಶೈವ ಧರ್ಮ ವೈದಿಕ ಪರಂಪರೆಗಳನ್ನು ಆಧರಿಸಿ ಗೌರವಿಸಿದರೆ ಲಿಂಗಾಯತ ಧರ್ಮ ವೈಚಾರಿಕ ಹಾಗೂ ಪ್ರಗತಿಪರತೆ ಬದಲಾವಣೆ ಪರಿವರ್ತನೆ ಮತ್ತು ಜೀವನ ಮೌಲ್ಯ ಗಳಿಂದ ಕೂಡಿದ ಧರ್ಮವಾಗಿದೆ ಸಂಪ್ರದಾಯಕ್ಕಿಂತಲೂ ವಿಚಾರಗಳು ಶ್ರೇಷ್ಠ ಎಂಬುದನ್ನು ಎತ್ತಿ ಮತ್ತು ಒತ್ತಿ ಹೇಳುವ ಧರ್ಮ ಲಿಂಗಾಯತವಾಗಿದೆ ಇಂಥ ಲಿಂಗಾಯತ ಪದವನ್ನು ವೀರಶೈವ ಮಹಾಸಭೆಗೆ ಸೇರಿಸಿ ವೀರಶೈವ ಮಹಾಸಭೆ ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕು ಹಾಕಿಕೊಂಡಿದೆ ಈ ಎಲ್ಲಾ ಸ್ಪಷ್ಟತೆಗಾಗಿ ವೀರಶೈವ ಮಹಾಸಭೆ ರಾಜ್ಯಮಟ್ಟದಲ್ಲಿ ಪ್ರಬಲವಾಗಿ ಸಂಘಟಿಸಬೇಕಾದ ತುರ್ತು ಅಗತ್ಯತೆ ಇದೆ .
ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ