ದಲಿತರ ಹತ್ಯಾಕಾಂಡ ವೈಭವಿಕರಣ ಬೇಡ.
ದಲಿತರ ಹತ್ಯಾಕಾಂಡ ವೈಭವಿಕರಣ ಬೇಡ.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕೀಳು ಜಾತಿಯ ಹರಳಯ್ಯನ ಮಗ ಮತ್ತು ಮೇಲು ಜಾತಿಯ ಮದುವಯ್ಯನ ಮಗಳೊಂದಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದರಿಂದ ಅದನ್ನು ವಿರೋಧಿಸಿದ ಜಾತಿವಾದಿಗಳು ಆ ದಂಪತಿಗಳೊಂದಿಗೆ ವಧುವರರಾದ ಶೀಲವಂತ ಮತ್ತು ಲಾವಣ್ಯರನ್ನು ಆನೆ ಕಾಲಿಗೆ ಕಟ್ಟಿ 'ಎಳೆಹೊಟ್ಟೆ ' ಶಿಕ್ಷೆ ನೀಡಿ ಘನಘೋರವಾಗಿ ಕೊಲೆ ಮಾಡಿದ್ದು ಈಗ ಇತಿಹಾಸವಾಗಿ ಉಳಿದಿದೆ.
ಅದನ್ನು ಇಲ್ಲಿಯವರೆಗೆ ಬಸವಕಲ್ಯಾಣದಲ್ಲಿ ಆ ಶರಣರ ಹತ್ಯೆಗೈದ ದಿನವನ್ನು ' ಮರಣವೇ ಮಹಾನಮಿ ' ಎಂದು ವೈಭವಿಕರಿಸಿ ದೊಡ್ಡ ಉತ್ಸವ ಕಾರ್ಯಕ್ರಮವಾಗಿ ಮಾಡುತಿದ್ದರು .ಇದನ್ನು ನಾನು ಸೇರಿದಂತೆ ಹಲವಾರು ಲೇಖಕರು ಬುದ್ಧಿ ಜೀವಿಗಳು ವಿರೋಧಿಸಿದರು.
ಸಹಜವಾಗಿ ಬಂದದ್ದು 'ಸಾವು' ಅದು ಮರಣ
ಅನಿಸಿಕೊಳ್ಳುತ್ತದೆ.ಆದರೆ ಉದ್ದೇಶ ಪೂರ್ವಕವಾಗಿ ಆನೆ ಕಾಲಿಗೆ ಕಟ್ಟಿ ಕೊಲೆ ಮಾಡಿದ ಘಟನೆ ಅದು ಹೇಗೆ ಸಾವು ಎನಿಸಿಕೊಳ್ಳುತ್ತದೆ ? ಅದು 'ಹತ್ಯೆ' ಎನಿಸಿಕೊಳ್ಳುತ್ತದೆ. ಅದಕ್ಕೆ ಬಸವಕಲ್ಯಾಣದಲ್ಲಿ 'ಮರಣವೇ ಮಹಾನವಮಿ ' ಎಂದು ಹೆಸರು ಕೊಟ್ಟು ಕಾರ್ಯಕ್ರಮದ ಮುನ್ನಾ ದಿನ ಕಟೌಟಗಳನ್ನು ಹಾಕಿ ಪ್ರಚಾರ ಬೇರೆ ಮಾಡಿ ದಲಿತ ಜನರಿಗೆ ಹತ್ಯೆ ಮಾಡಿದ ಸಂದರ್ಭದ ದಿನ ಮತ್ತೆ ಮತ್ತೆ ಮರುಕಳಿಸುವಂತೆ ಬಸವೇಶ್ವರ ಪಂಚ ಕಮಿಟಿಯವರು ಮಾಡುತ್ತಾ ಬರುತಿದ್ದಾರೆ. ಆ ಆನೆ ಕಾಲಿಗೆ ಕಟ್ಟಿ ಕೊಂದ ಚಿತ್ರವನ್ನು ಬಿತ್ತರಿಸುವ ಅಗತ್ಯವಾದರು ಏನಿದೆ ?
ದಲಿತರಿಗೆ ಹತ್ಯೆ ಮಾಡಿದ ದಿನವನ್ನು ಉತ್ಸವ ಮಾಡಿ ಖುಷಿ ಪಡಲು ನಿಮಗೆ ಮನಸ್ಸಾದರು ಹೇಗೆ ಬಂತು ?
ಅದು ನಮಗೆ ದುಃಖದ ದಿನ ಅನ್ನೊದು ಗೊತ್ತಿರಲಿ.
ಈ ವರ್ಷ 'ಮರಣವೇ ಮಹಾನವಮಿ 'ಬದಲಾಗಿ 'ಶರಣ ವಿಜಯೋತ್ಸವ ಲಿಂಗಾವಂತ ಹುತಾತ್ಮ ದಿನಾಚರಣೆ 'ಯಾಗಿ ಆಚರಿಸುವುದು ಕೂಡ ತಪ್ಪು.
ಯಾಕೆ ನೀವು ಈ ದಿನಾಚರಣೆಯಲ್ಲಿ 'ವಿಜಯೋತ್ಸವ' ಅನ್ನೋ ಪದ ಬಳಸ್ತಿರಿ ? ನಿಮಗೆ ಈ ದಲಿತ ಹರಳ್ಯನ ಹತ್ಯಾಕಾಂಡದ ದಿನ ಅಂದ್ರೆ ಅಷ್ಟು ಖುಷಿನಾ ?
ಮತ್ತೆ ಆನೆ ಕಾಲಿಗೆ ಕಟ್ಟಿ ಕೊಂದ ಚಿತ್ರ ತೈಲ ವರ್ಣದಲ್ಲಿ ಬೇರೆ ಬಳಕೆ ಮಾಡಿ ಯಾಕೆ ವೈಭವಿಕರಿಸ್ತಿರಿ ?
ಈ ವರ್ಷ ನೀವು 'ಶರಣರ ವಿಜಯೋತ್ಸವ ಹುತಾತ್ಮರ ದಿನಾಚರಣೆ ' ಎಂದು ಕಾರ್ಯಕ್ರಮ ಮಾಡಿದ್ದಿರಿ.
ಇದನ್ನು ಸರಳವಾಗಿ ಶರಣರ 'ಹುತಾತ್ಮರ ದಿನಾಚರಣೆ ' ಅಂತ ಮಾಡಲು ನಿಮ್ಮ ಮನಸ್ಸು ಯಾಕೆ ಒಪ್ಪುತ್ತಿಲ್ಲ ?
ಇದನ್ನು ಹೀಗೆ ಮುಂದುವರೆದರೆ ಮುಂದೊಂದು ದಿನ ನಾವೂ ಪ್ರತಿಭಟಿಸಬೇಕಾಗುತ್ತದೆ.
ಹಾಗಾಗಿ ವಿಜಯ ದಶಮಿಯ ದಿನ ಆಚರಿಸುವ ನಿಮ್ಮ ಈ ಕಾರ್ಯಕ್ರಮದ ' ವಿಜಯೋತ್ಸವ ' ಅನ್ನೋ ಪದ ತೆಗೆದುಹಾಕಿ.
ಬರಿ ಶರಣರ ' ಹುತಾತ್ಮರ ದಿನಾಚರಣೆ' ಯಾಗಿ ಮಾತ್ರ ಆಚರಿಸಿ ಇದಕ್ಕೆ ನಮ್ಮಲ್ಲರ ಬೆಂಬಲವು ಇರುತ್ತದೆ.
ಅದು ಬಿಟ್ಟು ವಿಜಯ ದಶಮಿಯ ಸಂದರ್ಭದಲ್ಲಿ ಮಹಿಷಾಸುರನ ವಧೆ ಮಾಡಿದ ದಿನ ಈ ಕಾರ್ಯಕ್ರಮ ಮಾಡಿ 'ವಿಜಯೋತ್ಸವ ' ಪದ ಬಳಕೆ ಮಾಡಿ ದಲಿತ ಹರಯ್ಯನ ಕುಟುಂಬಕ್ಕೆ 'ರಾಕ್ಷಸ ಸಂಹಾರ' ಮಾಡಿದಂತೆ ಬಿಂಬಿಸಿ ಈ ಕಾರ್ಯಕ್ರಮದಲ್ಲಿ 'ಹುತಾತ್ಮರ ದಿನಾಚರಣೆ ' ಮಾಡುವುದು ಎಷ್ಟು ಸರಿ ?
ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಠಾಧೀಶರಿಗೂ ವೀವೇಕ ಬೇಡವೋ ?
ಇನ್ನೂ ಮುಂದಾದರು ಇಂತಹ ಅಪಾರ್ಥ ಉಂಟು ಮಾಡುವ ಕಾರ್ಯಕ್ರಮ ನಡೆಯದಿರಲಿ.
ಸರ್ಕಾರಿ ನೌಕರರು ಕಾಲೇಜಿನ ಉಪನ್ಯಾಸಕರು ಆದ ಡಾ.ಅಕ್ಕ ಗಂಗಾಂಬೀಕಾ ಪಾಟೀಲ್ ರು ಅದು ಹೇಗೆ ಒಂದು ಮಠಕ್ಕೆ ಪೀಠಾಧ್ಯಕ್ಷೇಯಾಗಿ ಇಂತಹ ಕಾರ್ಯಕ್ರಮದಲ್ಲಿ ತೋಡಗುತ್ತಾರೆ. ಅವರು ಸರ್ಕಾರಿ ನೌಕರರು 24 ತಾಸು ಸರ್ಕಾರಿ ನೌಕರರು ಅದು ಹೇಗೆ ಅವರು ಶರಣರು ಪೀಠಕ್ಕೆ ಅಧ್ಯಕ್ಷೆಯಾಗಿ ಇಂತಹ ಕಾರ್ಯಕ್ರಮ ಮಾಡಲು ಜಿಲ್ಲಾಡಳಿತ ಅನುಮತಿ ನೀಡುತ್ತಿದೆ ? ಅನ್ನೊದು ಮುಖ್ಯ ಮಂತ್ರಿ ಮತ್ತು ರಾಜ್ಯ ಪಾಲರಿಗೆ ಪತ್ರ ಬರೆಯುವುದಾಗಿ ಇಲ್ಲಿಯ ದಲಿತ ಮುಂಖಡರು ಎಚ್ಚರಿಕೆ ನೀಡಿದ್ದಾರೆ.
-ಧನರಾಜ ರಾಜೋಳೆ- ಬಸವಕಲ್ಯಾಣ